ಬೀಜಿಂಗ್ : 20 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗಳು ತಾಯಿಗೆ ಸಿಕ್ಕಿದ್ದು ಮದುವೆ ಮಂಟಪದಲ್ಲಿ. ತನ್ನ ಮಗಳು ಅಂತಾ ಗೊತ್ತಿದ್ದರೂ ಕೂಡ ಹೆತ್ತ ತಾಯಿಯೇ ಮಗನಿಗೆ ಮಗಳನ್ನು ಮದುವೆ ಮಾಡಿಸಿದ ಘಟನೆ ಚೀನಾದಲ್ಲಿ ನಡೆದಿದೆ.

ಚೀನಾದ ಬೀಜಿಂಗ್ ನಲ್ಲಿ ಮದುವೆಯೊಂದು ನಿಗದಿಯಾಗಿತ್ತು. ಮದುವೆ ಮಂಟಪದಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಈ ವೇಳೆ ವಧು, ವರ ಎದುರಾಗಿ ನಿಂತುಕೊಂಡಿದ್ದರು. ಆಗ ವರನ ತಾಯಿಗೆ ವಧುವಿಗೆ ಇರುವ ಒಂದು ಮಾರ್ಕ್ ಕಣ್ಣಿಗೆ ಬಿದ್ದಿದೆ. ಕೂಡಲೇ ವಧು ವನ್ನು ತಬ್ಬಿಕೊಂಡು ಮಗಳೇ ಎಂದು ಜೋರಾಗಿ ಕೂಗಿಕೊಂಡಿದ್ದಾರೆ.

ಅಲ್ಲಿದ್ದವರಿಗೆಲ್ಲಾ ಅರೆ ಕ್ಷಣ ಏನಾಗುತ್ತದೆ ಅನ್ನೋದು ಅರಿವಿಗೆ ಬಾರದಾಗಿತ್ತು. ಕೂಡಲೇ ವರನ ತಾಯಿ ವಧುವಿನ ಹುಟ್ಟಿನ ಬಗ್ಗೆ ವಿಚಾರಿಸಿದ್ದಾಳೆ. ಆಗ ವಧುವಿನ ಪೋಷಕರು 20 ವರ್ಷಗಳ ಹಿಂದೆ ನಮಗೆ ರಸ್ತೆಯಲ್ಲಿ ಸಿಕ್ಕಿದ್ದಾಳೆಂದು ತಿಳಿಸಿದ್ದಾರೆ. ಅರೆಕ್ಷಣ ವರನ ತಾಯಿ ಭಯಗೊಂಡಿದ್ದಾಳೆ. ತಾನು ಕಳೆದುಕೊಂಡ ಹೆಣ್ಣು ಮಗುವನ್ನೇ ನಾನು ಸೊಸೆಯಾಗಲು ತರಲು ಸಿದ್ಧನಾಗಿದ್ದೇನಾ ಎಂದು ಬೇಸರಿಸಿದ್ದಾರೆ.

ಕೂಡಲೇ ಅಲ್ಲಿದ್ದವರಲ್ಲಿ ತಾನು 20 ವರ್ಷಗಳ ಹಿಂದೆ ಮಗಳನ್ನು ಕಳೆದುಕೊಂಡಿದ್ದ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. ವಧು ತನ್ನ ತಾಯಿ ಯನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ದಾಳೆ. ತಾಯಿಯೊಂದಿಗೆ ವಧು, ವರ ಕೂಡ ಅಣ್ಣ, ತಂಗಿಯ ವಿವಾಹವಾಗೋದಕ್ಕೆ ವಿರೋಧ ವ್ಯಕ್ಯ ಪಡಿಸಿದ್ದಾರೆ. ಆದರೆ ವಧುವಿನ ತಾಯಿ ತನ್ನ ಮಗಳು ಕಳೆದು ಹೋದ ನಂತರದಲ್ಲಿ ಗಂಡು ಮಗುವೊಂದನ್ನು ದತ್ತು ಪಡೆದಿರುವ ವಿಚಾರವನ್ನು ತಿಳಿಸಿದ್ದಾರೆ. ಅದೇ ದತ್ತು ಮಗನೇ ಇಂದಿನ ವರ ಅನ್ನೋ ವಿಚಾರವು ಎಲ್ಲರಿಗೂ ತಿಳಿಯುತ್ತಿದ್ದಂತಯೇ ಮದುವೆಗೆ ಒತ್ತಾಯಿಸಿದ್ದಾರೆ.

ಒಂದೇ ತಾಯಿಯ ಮಕ್ಕಳು ಅಲ್ಲದೇ ಇರೋ ಹಿನ್ನೆಲೆಯಲ್ಲಿ ಇಬ್ಬರಿಗೂ ಮದುವೆ ಮಾಡಿಸಲಾಗಿದೆ. ಅಂತಿಮವಾಗಿ ತನ್ನ ಮಗಳನ್ನು ತಾಯಿ ಸೊಸೆಯಾಗಿ ಪಡೆದುಕೊಂಡಿದ್ದಾರೆ.