ಟಾಲಿವುಡ್ ಗೆ ಹಾರಿದ ಸ್ಯಾಂಡಲ್ ವುಡ್ ಗುಂಡಮ್ಮ…! ತಮನ್ನಾ ಜೊತೆ ನಟಿಸಲಿದ್ದಾರೆ ಕನ್ನಡದ ಸೀರಿಯಲ್ ನಟಿ…!!

ಕನ್ನಡ ಕಿರುತೆರೆ ಲೋಕದಲ್ಲಿ ಗುಂಡಮ್ಮ ಎಂದೇ ಖ್ಯಾತಿ ಗಳಿಸಿದ ಬ್ರಹ್ಮಗಂಟು ಧಾರಾವಾಹಿಯ ನಟಿ ಹಾಗೂ ಬಿಗ್ ಬಾಸ್ ಸೀಸನ್ 8 ರಸ್ಪರ್ಧಿ ಗೀತಾ ಭಟ್ ಸ್ಯಾಂಡಲ್ ವುಡ್ ದಾಟಿ ಟಾಲಿವುಡ್ ಗೆ ಹಾರಿದ್ದಾರೆ. ಅಷ್ಟೇ ಅಲ್ಲ ನಾನು ಯಾರಿಗೂ ಕಮ್ಮಿ ಇಲ್ಲ ಎನ್ನುತ್ತ  ಹಾಟ್ ಪೋಟೋಶೂಟ್ ನಲ್ಲಿ ಮಿಂಚಿದ್ದಾರೆ.

ಬ್ರಹ್ಮಗಂಟು ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆ ಬಂದು ಬಳಿಕ ಸ್ಯಾಂಡಲ್ ವುಡ್ ಸಿನಿಮಾಗಳ ಪೋಷಕ ಪಾತ್ರದಲ್ಲಿ ಮಿಂಚಿದ ಗುಂಡಮ್ಮ ಖ್ಯಾತಿಯ ಗೀತಾ ಭಟ್ ಈಗ ಟಾಲಿವುಡ್ ಗೆ ಹಾರಿದ್ದಾರೆ. ಮೊನ್ನೆ ಮೊನ್ನೆ ಬಿಗ್ ಬಾಸ್ ಸೀಸನ್ 8 ರಿಂದ ನಾಮಿನೇಟ್ ಆಗಿ ಹೊರಬಂದ ಈ ಸುಂದರಿ ದೊಡ್ಮನೆಯಿಂದ ಹೊರಬಂದವರೇ ಮಾಡರ್ನ್ ಲುಕ್ ನಲ್ಲಿ ಪೋಟೋಶೂಟ್ ಕೂಡ ಮಾಡಿಸಿದ್ದಾರೆ.

ಅಚ್ಚಕೆಂಪು ಬಣ್ಣ ಸ್ಕರ್ಟ್ ತೊಟ್ಟು ಮಾದಕ ನೋಟ ಬೀರುತ್ತ ಗೀತಾ ಭಟ್ ಪೋಟೋಶೂಟ್ ಮಾಡಿಸಿದ್ದು, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.  ಸದ್ಯ ಗೀತಾ ಕನ್ನಡದಿಂದ ತೆಲುಗಿಗೆ ರಿಮೇಕ್ ಆಗುತ್ತಿರುವ ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ನಾಗಶೇಖರ್ ನಿರ್ದೇಶನದಲ್ಲಿ ಲವ್ ಮಾಕ್ಟೇಲ್ ಸಿನಿಮಾ, ಗುರ್ತುಂದ್ ಸೀತಾಕಾಲಂ ಎಂಬ ಹೆಸರಿನಲ್ಲಿ ರಿಮೇಕ್ ಆಗ್ತಿದೆ. ಈ ಸಿನಿಮಾದಲ್ಲಿ ಗೀತಾ ಭಟ್ ತಮನ್ನಾ ಭಾಟಿಯಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ತಾವು ಟಾಲಿವುಟ್ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವನ್ನು ಸ್ವತಃ ಗೀತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೇವಲ ಟಾಲಿವುಡ್ ಮಾತ್ರವಲ್ಲ ಅವಕಾಶ ಸಿಕ್ಕರೇ ಯಾವುದೇ ಭಾಷೆಯ ಸಿನಿಮಾ ಹಾಗೂ ಧಾರಾವಾಹಿಯಲ್ಲಿ ನಟಿಸಲು ಸಿದ್ಧ ಎಂದು ಗೀತಾ ಹೇಳಿಕೊಂಡಿದ್ದಾರೆ. ಬ್ರಹ್ಮಗಂಟು ಧಾರಾವಾಹಿ ಮೂಲಕ ಮುನ್ನಲೆಗೆ ಬಂದ ಗೀತಾ ಭಟ್  ಸ್ಯಾಂಡಲ್ ವುಡ್ ತಮ್ಮ ಅಭಿನಯದ ಮೂಲಕವೇ ಹಲವು ಅವಕಾಶ ಗಿಟ್ಟಿಸಿಕೊಂಡಿದ್ದರು.

https://www.instagram.com/p/CNPCqw_LBsQ/?igshid=1kqbz9gjqkmf1

ಇತ್ತೀಚಿಗೆ ಕರ್ನಾಟಕದಲ್ಲಿ ಸದ್ದು ಮಾಡಿದ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲೂ ಗೀತಾ ಭಟ್ ಹೆಸರು ಕೇಳಿಬಂದಿದ್ದು, ಸಿಸಿಬಿ ಸೂಚನೆ  ಮೇರೆಗೆ ಗೀತಾ ವಿಚಾರಣೆಗೂ ಹಾಜರಾಗಿದ್ದರು.

Comments are closed.