ನೈಜಿರಿಯಾ : ಸರಕಾರದ ಮೇಲೆ ಒತ್ತಡವನ್ನು ಹೇರುವ ನಿಟ್ಟಿಲ್ಲಿ ಬರೋಬ್ಬರಿ 150ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಉಗ್ರರು ಅಪಹರಣ ಮಾಡಿರುವ ಘಟನೆ ನೈಜೀರಿಯಾದಲ್ಲಿ ನಡೆದಿದೆ.
ಇಸ್ಲಾಮಿಕ್ ಶಾಲೆಯ ಮೇಲೆ ದಾಳಿ ನಡೆಸಿದ ಉಗ್ರರ ತಂಡ ಗುಂಡಿನ ದಾಳಿ ನಡೆಸಿದೆ. ಈ ವೇಳೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ನಂತರದಲ್ಲಿ ಶಾಲೆಯಲ್ಲಿದ್ದ 150 ವಿದ್ಯಾರ್ಥಿ ಗಳನ್ನು ಉಗ್ರರು ಅಪಹರಣ ಮಾಡಿದ್ದಾರೆ ಎಂದು ನೈಜೀರಿಯಾದ ಮಾಧ್ಯಮಗಳು ವರದಿ ಮಾಡಿವೆ.
ನೈಜೀರಿಯಾದಲ್ಲಿ ಮಕ್ಕಳ ಅಪಗರಣ ಪ್ರಕರಣ ಸಾಮಾನ್ಯವಾಗಿದ್ದು, ಇದೀಗ ಉಗ್ರರು ಸರಕಾರ ದ ಮೇಲೆ ಒತ್ತಡ ಹೇರುವ ಸಲುವಾಗಿ ಯೇ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿ ಕೊಂಡಿದ್ದಾರೆ ಎನ್ನಲಾಗುತ್ತಿದೆ.