new britain pm rishi sunak : ಹಿಂದೊಂದು ಕಾಲವಿತ್ತು. ಬ್ರಿಟೀಷರು ಭಾರತಕ್ಕೆ ವ್ಯಾಪಾರದ ಉದ್ದೇಶಕ್ಕೆಂದು ಬಂದು ಬಳಿಕ ಭಾರತವನ್ನೇ ಆಳಿದ್ದರು. ಸಂಪೂರ್ಣ ಭಾರತವನ್ನು ಲೂಟಿ ಮಾಡಿದ್ದ ಬ್ರಿಟೀಷರು ಭಾರತೀಯರನ್ನು ಗುಲಾಮರಂತೆ ಕಂಡಿದ್ದರು. ಆದರೆ ಈಗ ಹಾಗಿಲ್ಲ ಕಾಲ ಬದಲಾಗಿದೆ. ಇಂದು ಅದೇ ಬ್ರಿಟನ್ ರಾಷ್ಟ್ರಕ್ಕೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ ಇತಿಹಾಸವನ್ನು ಬದಲಾಯಿಸಿದ್ದಾರೆ. ಭಾರತೀಯ ಮೂಲದ ವ್ಯಕ್ತಿಯೊಬ್ಬ ಬ್ರಿಟನ್ ಪ್ರಧಾನಿ ಪಟ್ಟವನ್ನು ಗಿಟ್ಟಿಸಿಕೊಂಡಿರುವುದು ಕನ್ನಡಿಗರಿಗೆ ಒಂದು ಪಾಲು ಹೆಚ್ಚಿನ ಖುಷಿಯನ್ನೇ ತಂದಿದೆ. ಕರ್ನಾಟಕದ ಅಳಿಯ ಬ್ರಿಟೀಷರ ನಾಯಕ ಎನಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.
ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯ ಅಳಿಯ ರಿಷಿ ಸುನಕ್ ಬ್ರಿಟನ್ನ ಪ್ರಧಾನಿಯಾಗಿದ್ದೇನೋ ಖುಷಿಯ ವಿಚಾರ. ಆದರೆ ರಿಷಿ ಸುನಕ್ರ ಮುಂದಿನ ಹಾದಿ ಅಂದುಕೊಂಡಷ್ಟು ಸುಲಭವಾಗಿಲ್ಲ. ದೇಶದ ಆರ್ಥಿಕತೆಯನ್ನು ನಿಭಾಯಿಸುವ ದೊಡ್ಡ ಸವಾಲು ಇದೀಗ ರಿಷಿ ಸುನಕ್ರ ಹೆಗಲೇರಿದೆ.
ದೇಶದ ಆರ್ಥಿಕ ಸ್ಥಿತಿಯನ್ನು ನಿಭಾಯಿಸುವುದು ರಿಷಿ ಸುನಕ್ರಿಗೆ ಹೊಸ ವಿಚಾರವೇನಲ್ಲ. ಹಿಂದೆ ಬೋರಿಸ್ ಜಾನ್ಸನ್ ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಿಷಿ ಸುನಕ್ ವಿತ್ತ ಸಚಿವರಾಗಿದ್ದರು. ಬೋರಿಸ್ ಜಾನ್ಸನ್ ದೇಶದ ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಎಡವಿದ್ದರು. ಇದೇ ಇವರನ್ನು ರಾಜೀನಾಮೆ ನೀಡುವಂತೆ ಮಾಡಿತ್ತು. ಆದ್ರೀಗ ರಿಷಿ ಸುನಕ್ ದೇಶದ ಆರ್ಥಿಕತೆಯನ್ನು ಯಾವ ರೀತಿಯಲ್ಲಿ ಕಾಪಾಡ್ತಾರೆ ಅನ್ನೋದೇ ದೊಡ್ಡ ಸವಾಲಾಗಿದೆ.
ಬ್ರಿಟನ್ ಒಂದು ಶಕ್ತಿಶಾಲಿ ರಾಷ್ಟ್ರವಾಗಿದ್ದರೂ ಸಹ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಬ್ರಿಟನ್ ಇದೆ ಅನ್ನೋ ಮಾತನ್ನು ಅಲ್ಲಗೆಳೆಯೋ ಹಾಗಿಲ್ಲ. ಲಿಜ್ ಟ್ರುಸ್ ಕೂಡ ದೇಶದ ಆರ್ಥಿಕತೆಯನ್ನು ಸುಧಾರಿಸುವುದು ಕಷ್ಟವೆಂದು ತಿಳಿದೇ ಅಲ್ಪಕಾಲದಲ್ಲಿಯೇ ಬ್ರಿಟನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿರೋದನ್ನು ನೋಡಿದ್ರೆ ರಿಷಿ ಸುನಕ್ರ ಮುಂದಿರುವ ಸವಾಲು ಎಂತಾದ್ದು ಅನ್ನೋದನ್ನು ಊಹಿಸಬಹುದಾಗಿದೆ.
ದೇಶದಲ್ಲಿರುವ ಹಣದುಬ್ಬರದ ಸಮಸ್ಯೆಗಳಿಂದಾಗಿ ಬಡ್ಡಿದರಗಳು ಏರಿಕೆಯಾಗಿದೆ. ರಿಷಿ ಸುನಕ್ ಪ್ರಧಾನಿಯಾಗಿ ಆಯ್ಕೆಯಾಗುತ್ತಿದ್ದಂತೆಯೇ ದೇಶವನ್ನು ಆರ್ಥಿಕ ಸಮಸ್ಯೆಯ ಸುಳಿಯಿಂದ ಬಚಾವು ಮಾಡುವ ಭರವಸೆಯನ್ನು ನೀಡಿದ್ದಾರೆ. ಲಿಸ್ ಟ್ರುಸ್ಗೆ ಸ್ವಪಕ್ಷೀಯರೇ ಎದುರಾಗಿದ್ದರು. ಹೀಗಾಗಿ ಇದೀಗ ರಿಷಿ ಸುನಕ್ ಸ್ವಪಕ್ಷೀಯರ ವಿಶ್ವಾಸವನ್ನೂ ಉಳಿಸಿಕೊಂಡು ದೇಶದ ಜನತೆಯನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರವನ್ನು ಮುನ್ನೆಡಸಬೇಕಿದೆ.
ಲಿಜ್ ಟ್ರಸ್ ಸರ್ಕಾರವು ಮಿನಿ ಬಜೆಟ್ ಘೋಷಣೆ ಮಾಡಿತ್ತು. ಈ ಬಜೆಟ್ನಲ್ಲಿ ಜನ ಸಾಮಾನ್ಯರಿಗೆ ಹಾಗೂ ಉದ್ಯಮಿಗಳಿಗೆ ಒಂದೇ ಬಗೆಯ ದರ ನಿಗದಿ ಪಡಿಸಲಾಗಿತ್ತು. ಆದರೆ ಈ ತೆರಿಗೆ ಕಡಿತ ನೀತಿಯು ದೇಶದ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಜಟಿಲಗೊಳಿಸಿತ್ತು. ಹೀಗಾಗಿ ಇವೆಲ್ಲವನ್ನು ಸರಿ ಮಾಡುವ ದೊಡ್ಡ ಜವಾಬ್ದಾರಿ ರಿಷಿ ಸುನಕ್ರ ಹೆಗಲೇರಿದೆ.
ಇದನ್ನು ಓದಿ : WhatsApp services restored :ವಾಟ್ಸಾಪ್ ಸೇವೆ ಪುನಾರಂಭ : ನಿಟ್ಟುಸಿರು ಬಿಟ್ಟ ಬಳಕೆದಾರರು
ಇದನ್ನೂ ಓದಿ : sextortion fraud :ಅಪರಿಚಿತ ನಂಬರ್ನಿಂದ ಬಂದ ವಿಡಿಯೋ ಕಾಲ್ ರಿಸೀವ್ ಮಾಡಿ ಲೈಂಗಿಕ ವಂಚನೆಗೊಳಗಾದ ಪ್ರತಿಷ್ಠಿತ ಕಂಪನಿ ಸಿಇಓ
new britain pm rishi sunak faces many economy related challenges including tax cost of living