Nokia G21: ನೋಕಿಯಾದ ಹೊಸ ಸ್ಮಾರ್ಟ್‌ಫೋನ್ ಜಿ21; 50-ಮೆಗಾಪಿಕ್ಸೆಲ್ ಕ್ಯಾಮೆರಾ, ಫೆಬ್ರವರಿಯಲ್ಲಿ ಬಿಡುಗಡೆ

ಒಂದು ಕಾಲದಲ್ಲಿ ಟಾಪ್ ಫೋನ್ ಬ್ರಾಂಡ್ ಆಗಿದ್ದ ನೋಕಿಯಾ ಹೆಸರು ಕೇಳದವರು ಅತಿ ವಿರಳ. ಫೋನ್ ಅಂದರೆ ಅದು ನೋಕಿಯಾ ಎಂಬ ಮಾತಿತ್ತು. ಉಳಿದ ಚೀನಾ ಬ್ರಾಂಡ್‌ಗಳ (China Brand Smartphone) ದಾಳಿಯ ನಂತರವಂತೂ ನೋಕಿಯಾ ಮೂಲೆಗುಂಪು ಆಗಿತ್ತು. ಇದೀಗ ನೋಕಿಯಾ ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ನೋಕಿಯಾ ಜಿ21 (Nokia G21) ಭಾರತೀಯ ಮಾರುಕಟ್ಟೆಗೆ ತರಲು ಮುಂದಾಗಿದೆ. ನೋಕಿಯಾ ತನ್ನ ನೋಕಿಯಾ ಜಿ20 ಯ ನೆಕ್ಸ್ಟ್ ವರ್ಷನ್ ಬಿಡುಗಡೆ ಮಾಡಲು ಕೆಲಸ ಮಾಡುತ್ತಿದೆ ಮತ್ತು ಫೆಬ್ರವರಿ 2022 ರ ವೇಳೆಗೆ G21 ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಮೂಲಗಳಿಂದ ವರದಿಯಾಗಿದೆ.

ಇದು ಫೆಬ್ರವರಿ 2022 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ದಿನಾಂಕವನ್ನು ಇನ್ನೂ ಅಧಿಕೃತವಾಗಿ ಎಚ್ ಎಂಡಿ ಗ್ಲೋಬಲ್ (ನೋಕಿಯಾ ಬ್ರ್ಯಾಂಡ್ ಪರವಾನಗಿದಾರ) ಘೋಷಿಸಿಲ್ಲವಾದರೂ, ಲೀಕ್ ಆದ ಮಾಹಿತಿ ಮೂಲಗಳು ಸೂಚಿಸುತ್ತವೆ . ಮುಂಬರುವ ನೋಕಿಯಾ ಜಿ-ಸರಣಿಯ ಸ್ಮಾರ್ಟ್‌ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಹೊಂದಿದ್ದು ಇದು 50-ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್ ಜೊತೆ ಬರಲಿದೆ.

ಈ ಸ್ಮಾರ್ಟ್ ಫೋನ್ ನೋಕಿಯಾ ಜಿ 20ಯ ಮುಂದಿನ ವರ್ಷನ್ ಆಗಿದೆ. ಇದು ಕಳೆದ ವರ್ಷ ಜುಲೈ ನಲ್ಲಿ ಬಿಡುಗಡೆ ಆಗಿತ್ತು. ಮೂಲಗಳ ಪ್ರಕಾರ, ನೋಕಿಯಾ ಜಿ21 5050 ಎಂಎಎಚ್ ಬ್ಯಾಟರಿ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಬೆಂಬಲ ಇದೆ.
ವರದಿಗಳ ಪ್ರಕಾರ, ನೋಕಿಯಾ ಜಿ 21 6.5-ಇಂಚಿನ ಎಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿರುತ್ತದೆ ಮತ್ತು ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ನೋಕಿಯಾ ಜಿ21 ಸುಮಾರು 4ಜಿಬಿ ರಾಮ್ ಮತ್ತು 128 ಜಿಬಿವರೆಗಿನ ಇಂಟರ್ನಲ್ ಸ್ಟೋರೇಜ್ ಒದಗಿಸುವ ನಿರೀಕ್ಷೆಯಿದೆ, ಇದನ್ನು ಮೈಕ್ರೋ ಎಸ್ ಡಿ ಕಾರ್ಡ್‌ನ ಬೆಂಬಲದೊಂದಿಗೆ ಮತ್ತಷ್ಟು ವಿಸ್ತರಿಸಬಹುದು.

ಲಾಂಚ್ ಆಗಲಿರುವ ಈ ಹೊಸ ನೋಕಿಯಾ ಫೋನ್ 50-ಮೆಗಾಪಿಕ್ಸೆಲ್ ಮೈನ್ ಲೆನ್ಸ್ ಒಳಗೊಂಡಿರುವ ಟ್ರಿಪಲ್ ಹಿಂಬದಿಯ ಕ್ಯಾಮರಾ ಮತ್ತು 8-ಮೆಗಾಪಿಕ್ಸೆಲ್ ಮುಂಭಾಗದ ಶೂಟರ್ ಕ್ಯಾಮೆರಾದೊಂದಿಗೆ ಎರಡು 2-ಮೆಗಾಪಿಕ್ಸೆಲ್ ಸೆನ್ಸರ್ ಒಳಗೊಂಡಿರುತ್ತದೆ.
ಕನೆಕ್ಟಿವಿಟಿ ಕುರಿತು ಹೇಳುವುದಾದರೆ, ನೋಕಿಯಾ ಜಿ21 5ಜಿ(5G,) 4ಜಿ ಎಲ್‌ಟಿಇ(4G LTE,) ವೈಫೈ ( Wi-Fi,) ಬ್ಲೂಟೂತ್, ಎನ್ ಎಫ್ಸಿ, ಜಿಪಿಎಸ್ ಮತ್ತು ಟೈಪ್-ಸಿ ಯುಎಸ್‌ಬಿ ಪೋರ್ಟ್ ಅನ್ನು ಬೆಂಬಲಿಸುತ್ತದೆ. ಮುಂಬರುವ ನೋಕಿಯಾ ಜಿ21 ಸ್ಮಾರ್ಟ್ ಫೋನ್ ಕುರಿತು ಸಾಕಷ್ಟು ನಿರೀಕ್ಷೆಗಳಾಗಿದ್ದರೂ, ಕಂಪನಿಯು ಅಧಿಕೃತ ಘೋಷಣೆ ಇದುವರೆಗೂ ಮಾಡಿಲ್ಲ. ಹಾಗಾಗಿ ಕಂಪೆನಿ ಘೋಷಣೆ ಮಾಡಿದ ನಂತರ ಮಾತ್ರ ಯಾವುದನ್ನಾದರೂ ದೃಢೀಕರಿಸಬಹುದು.

ಇದನ್ನೂ ಓದಿ: Earn money from Apps: ಮನೆಯಿಂದಲೇ ಹಣ ಗಳಿಸಲು ಬೆಸ್ಟ್ ಆ್ಯಪ್‌ಗಳಿವು

ಇದನ್ನೂ ಓದಿ: Realme 9i Review: ರಿಯಲ್‌ಮಿ 9i; ಕಾಸಿಗೆ ತಕ್ಕ ಕಜ್ಜಾಯ ಈ ಸ್ಮಾರ್ಟ್‌ಫೋನ್

(Nokia G21 with 50 Megapixel Triple Rear Camera launch in February)

Comments are closed.