ದಕ್ಷಿಣ ಕೊರಿಯಾ (North Korea): ಅಪ್ಪ- ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾದ ವೈರತ್ವಕ್ಕೆ ಇಬ್ಬರು ಬಾಲಕರು ಬಲಿಯಾಗಿದ್ದಾರೆ. ದಕ್ಷಿಣ ಕೊರಿಯಾದ ಡ್ರಾಮಾ ವೀಕ್ಷಿಸಿದ್ದಕ್ಕೆ ಉತ್ತರ ಕೊರಿಯಾದ ಬಾಲಕರಿಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಇಬ್ಬರು ವಿದ್ಯಾರ್ಥಿಗಳು ದಕ್ಷಿಣ ಕೊರಿಯಾ ನಾಟಕವನ್ನು ವೀಕ್ಷಿಸಿದ ಹಿನ್ನೆಲೆ ಇಬ್ಬರಿಗೂ ಗಲ್ಲುಶಿಕ್ಷೆ ವಿಧಿಸಿರುವ ಘಟನೆ ಉತ್ತರ ಕೊರಿಯಾದ ರಿಯಾಂಗ್ ಗಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಈ ಭಾಗವು ಚೀನಾ ಗಡಿ ಭಾಗದ ಸಮೀಪವಿದೆ. ಹೀಗಾಗಿ ಈ ಭಾಗದಲ್ಲಿ ಸುಲಭವಾಗಿ ದಕ್ಷಿಣ ಕೊರಿಯಾ ಹಾಗೂ ಅಮೆರಿಕನ್ ಸಿನಿಮಾಗಳು ದೊರೆಯುತ್ತವೆ. ಉತ್ತರ ಕೊರಿಯಾ ನಿಯಮಕ್ಕೆ ವಿರುದ್ಧವಾಗಿ ಇಬ್ಬರು ಅಪ್ರಾಪ್ತರು ದಕ್ಷಿಣ ಕೊರಿಯಾದ ಡ್ರಾಮಾಗಳನ್ನು ವೀಕ್ಷಿಸಿದ್ದಾರೆ. ಹೀಗಾಗಿ ಅವರಿಗೆ ಮರಣದಂಡನೆ ಶಿಕ್ಷೆ ನೀಡಲಾಗಿದೆ.
ಅಂದಹಾಗೆ ಈ ಇಬ್ಬರು ಬಾಲಕರು ಬೇರೆ ಬೇರೆ ಶಾಲೆಯಲ್ಲಿ ಹೈಸ್ಕೂಲ್ ನಲ್ಲಿ ಓದುತ್ತಿದ್ದರು. ಹೀಗಿದ್ದಾಗ ಒಮ್ಮೆ ಉತ್ತರ ಕೊರಿಯಾದ ಚೀನಾ ಗಡಿಭಾಗದ ಶಾಲೆಯೊಂದರಲ್ಲಿ ಭೇಟಿಯಾಗಿದ್ದ ಇವರು ಆಗಿನಿಂದಲೂ ಕೊರಿಯನ್ ಡ್ರಾಮಾ, ಕೊರಿಯನ್ ಪಾಪ್ ಗಳನ್ನು ಪರಸ್ಪರ ಹಂಚಿಕೊಂಡು ವೀಕ್ಷಿಸುತ್ತಿದ್ದರು. ಹಾಗೆಯೇ ಬೇರೆ ಕೆಲ ಹುಡುಗರಿಗೂ ಮೊಬೈಲ್ ಮೂಲಕ ಶೋಗಳನ್ನು ಕಳಿಸಿದ್ದರು. ಉತ್ತರ ಕೊರಿಯಾ ನಿಯಮಕ್ಕೆ ವಿರುದ್ಧವಾಗಿ ದಕ್ಷಿಣ ಕೊರಿಯಾದ ಡ್ರಾಮಾಗಳನ್ನು ವೀಕ್ಷಿಸಿದ್ದಕ್ಕೆ ಪ್ರತಿಯಾಗಿ ಮರಣದಂಡನೆ ವಿಧಿಸಲಾಗಿದೆ.
ಸರ್ವಾಧಿಕಾರಿ ಅಧ್ಯಕ್ಷ ಕಿಂಗ್-ಉನ್-ಜಾನ್ :
ದಕ್ಷಿಣ ಕೊರಿಯಾದ ಕೆ-ಡ್ರಾಮಾ, ಕೆ-ಪಾಪ್ ಸಂಗೀತಗಳು ಉತ್ತರ ಕೊರಿಯಾದಲ್ಲಿ ನಿಷೇಧಿಸಲ್ಪಟ್ಟಿವೆ. ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಅಧ್ಯಕ್ಷ ಕಿಂಗ್ ಉನ್ ಜಾನ್ 2021ರಲ್ಲಿ ನಿಷೇಧಗೊಳಿಸಿ ಆದೇಶ ಹೊರಡಿಸಿದ್ದರು. ಅವರ ಆದೇಶ ಮೀರಿ ಡ್ರಾಮಾಗಳನ್ನು ವೀಕ್ಷಿಸಿದರೆ ಅಂಥವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಉತ್ತರ ಕೊರಿಯಾದ ಜನರಿಗೆ ಸ್ವಾತಂತ್ರ್ಯವಿಲ್ಲ. ಸಾರ್ವಜನಿಕವಾಗಿ ಪ್ರೀತಿಯನ್ನು ವ್ಯಕ್ತಪಡಿಸಲು ಅವಕಾಶವಿಲ್ಲ. ಆದರೆ ದಕ್ಷಿಣ ಕೊರಿಯಾದಲ್ಲಿ ಇರುವ ಸ್ವಾತಂತ್ರ್ಯವನ್ನು ನಾಟಕಗಳಲ್ಲಿ ತೋರಿಸಲಾಗುತ್ತದೆ. ಹೀಗಾಗಿ ಉತ್ತರ ಕೊರಿಯಾದ ಜನರು ಆ ಡ್ರಾಮಾಗಳನ್ನು ನೋಡಿದರೆ ತಮಗಿಲ್ಲದ ಸ್ವಾತಂತ್ರ್ಯದ ವಿರುದ್ಧ ದಂಗೆ ಏಳಬಹುದು ಎಂಬ ಆತಂಕದಲ್ಲಿ ಕಿಂಗ್ ಉನ್ ಜಾನ್ ಈ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.
ಅಂದಹಾಗೆ 2018ರಿಂದ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾದ ನಡುವೆ ಸಂಬಂಧ ಹದಗೆಟ್ಟ ಬಳಿಕ ಉತ್ತರ ಕೊರಿಯಾದಲ್ಲಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕೂ ಮೊದಲು ಇಲ್ಲಿನ ಜನರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಲಾಗಿತ್ತು.
ಇದನ್ನೂ ಓದಿ: Jharkhand Crime News : ಸೋದರ ಸಂಬಂಧಿಯ ಶಿರಚ್ಛೇದ ಮಾಡಿ : ಸೆಲ್ಫಿ ತೆಗೆದು ವಿಕೃತಿ ಮೆರೆದ ವ್ಯಕ್ತಿ
North Korea: North Korea executes 2 minors for watching and distributing K-dramas