Anushka Sharma Qala Look : ರೆಟ್ರೊ ಸ್ಟೈಲ್‌ನಲ್ಲಿ ಅನುಷ್ಕಾ ಶರ್ಮಾ : ಸಖತ್‌ ವೈರಲ್‌ ಆದ ಖಾಲಾ ಲುಕ್

ಬಾಲಿವುಡ್‌ನಲ್ಲಿ ಅನುಷ್ಕಾ ಶರ್ಮಾ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅನ್ವಿತಾ ದತ್‌ ಅಭಿನಯದ ಖಾಲಾ ಸಿನಿಮಾದಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ (Anushka Sharma Qala Look) ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುಷ್ಕಾ ಶರ್ಮಾ ಖಾಲಾ ಪಾತ್ರದ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಅನುಷ್ಕಾ ರೆಟ್ರೋ ಲುಕ್‌ ನಟಿಯ ಅಭಿಮಾನಿಗಳಿಗೆ ಆಶ್ಚರ್ಯ ಉಂಟು ಮಾಡಿದೆ. ಅನುಷ್ಕಾ ಅವರು ಘೋಡ ಪೆ ಸವಾರ್‌ ಟ್ರ್ಯಾಕ್‌ನ ಗ್ರೇಸ್ಕೇಲ್‌ ಮಾಂಟೇಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ಸಿನಿಮಾದಲ್ಲಿ ಖಾಲಾ ಹಾಡಿರುವ ಟ್ರ್ಯಾಕ್‌ನ್ನು ಲಿಪ್‌ ಸಿಂಕ್‌ ಮಾಡುವ ನಟಿಯಾಗಿ ನಟಿಸಿದ್ದಾರೆ. ಅನುಷ್ಕಾ ಶರ್ಮಾ ತಮ್ಮ ಅತಿಥಿ ಪಾತ್ರದಿಂದ ಕೆಲವು ಬಿಟಿಎಸ್‌ ಶೇರ್‌ ಮಾಡಿದ್ದಾರೆ.

ಈ ಪೋಟೋಗಳು ಅಕ್ಷರಶಃ ಸಾಮಾಜಿಕ ಜಾಲತಾಣದಲ್ಲಿ ಹೊಸ ಸೆನ್ಸೇಷನ್‌ ಆಗಿಬಿಟ್ಟಿದೆ. ನಟಿ ಅನುಷ್ಕಾಳ ಹೊಸ ಪೋಟೋಗಳನ್ನು ಸಾಕಷ್ಟು ಅಚ್ಚರಿಯಿಂದ ಜನ ನೋಡುತ್ತಿದ್ದಾರೆ. ನಟಿ ತನ್ನ ಹಂಚಿಕೊಂಡ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ ಹಾಡಿನ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ಯಾರಾದರೂ ಹೇಗೆ ತಾನೇ ಇದನ್ನು ಅವರಿಗೆ ಅರ್ಥ ಮಾಡಿಸಲು ಸಾಧ್ಯ? ಅನ್ವಿತಾ ದತ್‌ ನೀವು ಮಾತ್ರ ಹೇಳುತ್ತೀರಿ ಎಂದು ಬರದಿದ್ದಾರೆ.

ಇದನ್ನೂ ಓದಿ : Kantara Hindi OTT : “ಕಾಂತಾರ” ಹಿಂದಿ ಓಟಿಟಿ ರಿಲೀಸ್‌ ಡೇಟ್ಸ್‌ ಫಿಕ್ಸ್‌ : ನೆಟ್‌ಫ್ಲಿಕ್ಸ್‌ಗೆ ಲಗ್ಗೆ ಇಟ್ಟ ಕನ್ನಡದ ಮೊದಲ ಸಿನಿಮಾ

ಇದನ್ನೂ ಓದಿ : Padaraya Movie : ಪಾದರಾಯ ಸಿನಿಮಾದಲ್ಲಿ ಕಿಚ್ಚ ಸುದೀಪ್ : ತೆರೆಗೆ ಬರಲಿದೆ ನೈಜ ಘಟನೆಯ ಸಿನಿಮಾ

ಇದನ್ನೂ ಓದಿ : Directed by Natesh Hegde: “ಕಾಂತಾರ” ಮತ್ತು “ಆರ್‌ಆರ್‌ಆರ್‌” ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನಿರ್ದೇಶಕ ನಟೇಶ್‌ ಹೆಗ್ಡೆ

ಸುದೀರ್ಘ ನಾಲ್ಕು ವರ್ಷಗಳ ನಂತರ ಅನುಷ್ಕಾ ಶರ್ಮಾ ತೆರೆ ಮೇಲೆ ಅವರ ಸಖತ್‌ ಥ್ರಿಲ್‌ ಆಗಿದೆ.ಇದೀಗ ಅನೇಕ ಟ್ವೀಟ್‌ಗಳು ಅದನ್ನು ಸಾಬೀತುಪಡಿಸಿವೆ. ವಿಶೇಷವಾಗಿ ನಟಿ ಮಗುವಿನ ಜನನದ ನಂತರ ಸಿನಿರಂಗಕ್ಕೆ ಬರಲು ಸಜ್ಜಾಗಿದ್ದಾರೆ. ಹಾಗೇ ಅನುಷ್ಕಾ ಜಾಹೀರಾತು ಹಾಗೂ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಅವರ ಇತ್ತೀಚಿನ ಈ ಬಿಟಿಎಸ್‌ ಪೋಟೋಸ್‌ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದೆ.

Anushka Sharma Qala Look: Anushka Sharma in retro style: Qala look that went viral

Comments are closed.