ಪಾಕಿಸ್ತಾನ : Pak Horror: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಾರ್ವಜನಿಕ ವಲಯದ ಆಸ್ಪತ್ರೆಯೊಂದರ ಮೇಲ್ಛಾವಣಿಯಲ್ಲಿ ಹಲವಾರು ಕೊಳೆತ ಮೃತದೇಹಗಳು ಪತ್ತೆಯಾಗಿದೆ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹುದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಪಾಕಿಸ್ತಾನ ಪ್ರಾಂತ್ಯದ ಪಂಜಾಬ್ ಮುಖ್ಯಮಂತ್ರಿ ಪರ್ವೆಜ್ ಇಲಾಹಿ ಈ ವಿಚಾರದ ಬಗ್ಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದಾರೆ.
ಈ ಪ್ರಕರಣದ ಉನ್ನತ ತನಿಖೆಯನ್ನು ನಡೆಸಲು ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಲಾಗಿದೆ. ವಿಶೇಷ ಆರೋಗ್ಯ ಕಾರ್ಯದರ್ಶಿ ಮುಜಾಮಿಲ್ ಬಶೀರ್ ನೇತೃತ್ವದ ಆರು ಸದಸ್ಯರ ಸಮಿತಿಯು ತನಿಖೆಯನ್ನು ಪೂರ್ಣಗೊಳಿಸಲು ಹಾಗೂ ಜವಾಬ್ದಾರಿಯನ್ನು ನಿಗದಿಪಡಿಸಲು ಮೂರು ದಿನಗಳ ಕಾಲಾವಕಾಶವನ್ನು ನೀಡಿದೆ. ವರದಿಗಳ ಪ್ರಕಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಗ್ನ ಸ್ಥಿತಿಯಲ್ಲಿ 200 ಮೃತದೇಹಗಳು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಖ್ಯಮಂತ್ರಿಗಳ ಸಲಹೆಗಾರ ಚೌಧರಿ ಜಮಾನ್ ಗುಹ್ಹರ್ ಲಾಹೋರ್ನಿಂದ ಸುಮಾರು 350 ಕಿಲೋಮೀಟರ್ ದೂರದಲ್ಲಿರುವ ಮುಲ್ತಾನ್ನಲ್ಲಿರುವ ನಿಶ್ಟರ್ ಆಸ್ಪತ್ರೆಗೆ ಭೇಟಿ ನೀಡಿದರು ಹಾಗೂ ಆಸ್ಪತ್ರೆಯ ಶವಾಗಾರದ ಛಾವಣಿಯ ಮೇಲೆ ಹಲವಾರು ಶವಗಳು ಇರುವುದನ್ನು ಪತ್ತೆ ಮಾಡಿದ್ದಾರೆ. ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ, ಗುಜ್ಜರ್ ನಿಶ್ತಾರ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಓರ್ವ ವ್ಯಕ್ತಿ ತನ್ನ ಬಳಿ ಬಂದು ನೀವು ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಬಯಸಿದ್ದರೆ ಮೊದಲು ಶವಾಗಾರಕ್ಕೆ ಹೋಗಿ ಪರೀಕ್ಷಿಸಿ ಎಂದು ಸಲಹೆ ನೀಡಿದ್ದಾರೆ.
ಗುಜ್ಜರ್ ಶವಾಗಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶವಾಗಾರದ ಬಾಗಿಲನ್ನು ತೆರೆಯಲು ಸಿಬ್ಬಂದಿ ಸಿದ್ಧರಿರಲಿಲ್ಲ. ಆದರೆ ಶವಾಗಾರದ ಬಾಗಿಲು ತೆರೆಯದೇ ಹೋದಲ್ಲಿ ನಿಮ್ಮ ಮೇಲೆ ಎಫ್ಐಆರ್ ದಾಖಲಿಸುತ್ತೇನೆಂದು ಆಸ್ಪತ್ರೆ ಸಿಬ್ಬಂದಿ ಗುಜ್ಜರ್ ಅವಾಜ್ ಹಾಕಿದರು. ಕೊನೆಗೆ ಶವಾಗಾರದ ಬಾಗಿಲನ್ನು ತೆರೆದು ನೋಡಿದ ಸಂದರ್ಭದಲ್ಲಿ ಶವಾಗಾರದಲ್ಲಿ ಏನಿಲ್ಲವೆಂದರೂ ಕನಿಷ್ಟ 200 ಶವಗಳು ಇರುವುದನ್ನು ಪತ್ತೆ ಮಾಡಿದ್ದಾರೆ. ಸಂಪೂರ್ಣ ಬೆತ್ತಲಾದ ಪುರುಷ ಹಾಗೂ ಮಹಿಳೆಯ ಶವಗಳು ಅಲ್ಲಿದ್ದವು . ಮಹಿಳೆಯರ ಶವದ ಮೇಲೂ ಒಂದೇ ಒಂದು ತುಂಡು ಬಟ್ಟೆ ಇರಲಿಲ್ಲ.
ಏನು ನಡೆಯುತ್ತಿದೆ ಎಂಬುದನ್ನು ವಿವರಿಸಲು ವೈದ್ಯರಿಗೆ ಕೇಳಿದಾಗ, ವೈದ್ಯಕೀಯ ವಿದ್ಯಾರ್ಥಿಗಳು ಇದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸುತ್ತಿದ್ದರು ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆಂದು ಗುಜ್ಜರ್ ತಿಳಿಸಿದ್ದಾರೆ. ಈ ಶವಗಳ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ಆದೇಶ ನೀಡಿದ್ದು, ಈ ವಿಚಾರದಲ್ಲಿ ಭಾಗಿಯಾಗಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನು ಓದಿ : Surya Grahan 2022 : ಸೂರ್ಯ ಗ್ರಹಣ 2022 : ಈ ವರ್ಷದ ಕೊನೆಯ ಸೂರ್ಯಗ್ರಹಣ, ದೀಪಾವಳಿ ಹಬ್ಬದ ದಿನ ಸೂತಕದ ಛಾಯೆ
ಇದನ್ನೂ ಓದಿ : APJ Abdul Kalam Birthday : ಭಾರತದ “ಕ್ಷಿಪಣಿ ಮಾನವ ” ಡಾ. ಎಪಿಜೆ ಅಬ್ದುಲ್ ಕಲಾಂ ಜನ್ಮ ದಿನಾಚರಣೆ
Pak Horror: ‘200 Half-nude Decomposing’ Bodies Found at Rooftop of Hosp, Probe Order Against Staff