MS Dhoni starts Practicing : ಐಪಿಎಲ್‌ಗೆ ಧೋನಿ ತಾಲೀಮು ಶುರು, ಜಾರ್ಖಂಡ್’ನಲ್ಲಿ ಅಭ್ಯಾಸ ಆರಂಭಿಸಿದ “ತಲಾ”

ರಾಂಚಿ: ಭಾರತೀಯ ಕ್ರಿಕೆಟ್’ನ ದಿಗ್ಗಜ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಲ್ಕು ಬಾರಿ ಐಪಿಎಲ್ ಟ್ರೋಫಿ ಗೆದ್ದು ಕೊಟ್ಟಿರುವ ಮಹೇಂದ್ರ ಸಿಂಗ್ ಧೋನಿ (MS Dhoni) 2023ನೇ ಸಾಲಿನ ಐಪಿಎಲ್ ಟೂರ್ನಿಗೆ (IPL 2023) ತಾಲೀಮು ಶುರು ಮಾಡಿದ್ದಾರೆ. ತಮ್ಮ ತವರು ನೆಲ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ (Jharkhand State Cricket Association) ಕ್ರೀಡಾಂಗಣದಲ್ಲಿ ಧೋನಿ ಅಭ್ಯಾಸ(MS Dhoni starts Practicing) ಆರಂಭಿಸಿದ್ದು, ಶುಕ್ರವಾರ ಕೆಲ ಗಂಟೆಗಳ ಕಾಲ ಬ್ಯಾಟಿಂಗ್ ತಾಲೀಮು ನಡೆಸಿದ್ದಾರೆ.

2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದ ಧೋನಿ, ಸದ್ಯ ಐಪಿಎಲ್’ನಲ್ಲಿ ಮಾತ್ರ ಆಡುತ್ತಿದ್ದಾರೆ. 2023ರ ಐಪಿಎಲ್ ಟೂರ್ನಿಯ ನಂತರ ಎಲ್ಲಾ ಪ್ರಕಾರಗಳ ಕ್ರಿಕೆಟ್’ಗೆ ಧೋನಿ ವಿದಾಯ ಹೇಳುವ ಸಾಧ್ಯತೆಯಿದೆ. ಧೋನಿಯವರಿಗೆ ಈಗಾಗಲೇ 41 ವರ್ಷ ವಯಸ್ಸು. ಮುಂದಿನ ಐಪಿಎಲ್ ಮುಕ್ತಾಯದ ಹೊತ್ತಿಗೆ ಧೋನಿ 42ನೇ ವರ್ಷಕ್ಕೆ ಕಾಲಿಡಲಿದ್ದಾರೆ.

2022ರ ಐಪಿಎಲ್’ನಲ್ಲಿ ಎಂ.ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ತೊರೆದು, ರವೀಂದ್ರ ಜಡೇಜ ಅವರಿಗೆ ದಾರಿ ಮಾಡಿಕೊಟ್ಟಿದ್ದರು. ಆದರೆ ಜಡೇಜ ನಾಯಕತ್ವದಲ್ಲಿ CSK ತಂಡದ ಸತತ ಸೋಲುಗಳನ್ನು ಎದುರಿಸಿದ ಕಾರಣ, ಟೂರ್ನಿಯ ಮಧ್ಯದಲ್ಲೇ ಜಡೇಜ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಚೆನ್ನೈ ತಂಡದ ನಾಯಕತ್ವ ಮತ್ತೆ ಧೋನಿ ಹೆಗಲೇರಿತ್ತು. ಈ ಟೂರ್ನಿಯಲ್ಲಿ ಎಂ.ಎಸ್ ಧೋನಿ 14 ಪಂದ್ಯಗಳನ್ನಾಡಿದ್ದು, 33.14ರ ಸರಾಸರಿಯಲ್ಲಿ 232 ರನ್ ಕಲೆ ಹಾಕಿದ್ದರು. ಆರು ಬಾರಿ ಧೋನಿ ನಾಟೌಟ್ ಆಗಿ ಉಳಿದಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿತ್ತು. 2023ರ ಐಪಿಎಲ್’ನಲ್ಲೂ ಧೋನಿಯವರೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು CSK ಫ್ರಾಂಚೈಸಿ ಈಗಾಗಲೇ ಸ್ಪಷ್ಟ ಪಡಿಸಿದೆ. ಧೋನಿ ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಂಬತ್ತು ಬಾರಿ ಫೈನಲ್ ತಲುಪಿದ್ದು, 2010, 2011, 2018 ಹಾಗೂ 2021ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.

ಇದನ್ನೂ ಓದಿ : Shami replaces Bumrah: ಟಿ20 ವಿಶ್ವಕಪ್: ಬುಮ್ರಾ ಬದಲು ಶಮಿ ಆಯ್ಕೆ, ಬಿಸಿಸಿಐ ಅಧಿಕೃತ ಘೋಷಣೆ

ಇದನ್ನೂ ಓದಿ : Virat Kohli Rohit Sharma : ರೋಹಿತ್ ಅಭಿಮಾನಿಯನ್ನು ಕೊಂದ ವಿರಾಟ್ ಫ್ಯಾನ್, ಕೊಹ್ಲಿಯನ್ನು ಅರೆಸ್ಟ್ ಮಾಡಲು ಆಗ್ರಹ

MS Dhoni starts Practicing for IPL 2023

Comments are closed.