Redmi A1+ : ಸೀಮಿತ ಸಮಯದ ರಿಯಾಯಿತಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾದ ರೆಡ್‌ಮಿ A1 ಪ್ಲಸ್‌

ಬಜೆಟ್‌ ಫೋನ್‌ಗಳಿಗೆ ಹೆಸರುವಾಸಿಯಾಗಿರುವ ರೆಡ್‌ಮಿ (Redmi) ಈಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ (Smartphone) ಅನ್ನು ಭಾರತದ ಮಾರುಕಟ್ಟೆಗೆ (Indian Market) ಪರಿಚಯಿಸಿದೆ. ಇದು ಸೀಮಿತ ಸಮಯದ ರಿಯಾಯಿತಿಗಳನ್ನು ಖರೀದಿದಾರರಿಗೆ ನೀಡಿದೆ. ಕೆಲವು ವಾರಗಳ ಹಿಂದೆ ಅಗ್ಗದ ರೆಡ್‌ಮಿ A1 (Redmi A1+) ಅನ್ನು ಪರಿಚಯಿಸಿದ ನಂತರವೇ ಇದನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್‌ಫೋನ್‌ A1 ಗಿಂತ ಭಿನ್ನವಾಗಿದ್ದು, ಹೆಚ್ಚಿನ ಸುರಕ್ಷತೆಯನ್ನು ಪಡೆದುಕೊಂಡಿದೆ.

ರೆಡ್‌ಮಿ A1ಪ್ಲಸ್‌ (Redmi A1+) ನ ವಿಶೇಷತೆಗಳು:
ರೆಡ್‌ಮಿ A1 ಪ್ಲಸ್‌ ಸ್ಮಾರ್ಟ್‌ಫೋನ್‌ 6.52-ಇಂಚಿನ IPS HD+ ಡಿಸ್ಪ್ಲೇ ಪ್ಯಾನೆಲ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ರೆಸಲ್ಯೂಶನ್‌ 1600X720 ಆಗಿದೆ. ಇದು ಮಾಡರ್ನ್‌–ಫ್ಲೇರ್‌ ಆಕಾರಕ್ಕಾಗಿ 20:9 ಅನುಪಾತ ಪಡೆದುಕೊಂಡಿದೆ. ಈ ಫೋನ್ 2GB RAM ಮತ್ತು 32GB ಸಂಗ್ರಹಣೆ ಅಥವಾ 3GB RAM ಮತ್ತು 32GB ಸಂಗ್ರಹಣೆ ಹೊಂದಿದ್ದು ಕ್ವಾಡ್-ಕೋರ್ MediaTek Helio A22 ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಆದರೆ ಮುಖ್ಯವಾಗಿ Helio A22 ಚಿಪ್‌ಸೆಟ್ 5G ಬ್ಯಾಂಡ್‌ಗಳನ್ನು ಬೆಂಬಲಿಸುವುದಿಲ್ಲ. ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾವು 8 ಮೆಗಾಪಿಕ್ಸೆಲ್‌ಮುಖ್ಯ ಶೂಟರ್‌ ಅನ್ನು ಹೊಂದಿದೆ. ಅದರ ಪಕ್ಕದಲ್ಲೇ ಪೂರಕ QVGA ಸಂವೇದಕವನ್ನು ಹೊಂದಿದೆ. ಸೆಲ್ಫಿಗಾಗಿ ಈ ಫೋನ್‌ 5 ಮೆಗಾಪಿಕ್ಸೆಲ್‌ ಶೂಟರ್‌ಅನ್ನು ಪಡೆದುಕೊಂಡಿದೆ.

ರೆಡ್‌ಮಿ A1 ಪ್ಲಸ್‌, A1 ಗಿಂತ ಸ್ವಲ್ಪ ಭಿನ್ನವಾಗಿದೆ. A1 ಪ್ಲಸ್‌ ನಲ್ಲಿ ಹೆಚ್ಚಿನ ಸುರಕ್ಷಿತ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ. ಈ ಫೋನ್‌ 10W ಚಾರ್ಜಿಂಗ್‌ ಬೆಂಬಲಿಸುತ್ತದೆ ಮತ್ತು 5000 mAh ಬ್ಯಾಟರಿ ಕ್ಷಮತೆ ಹೊಂದಿದೆ. ಇನ್ನು ಈ ಫೋನ್ ಫಾಕ್ಸ್-ಲೆದರ್ ಫಿನಿಶಿಂಗ್‌ ಪಡೆದುಕೊಂಡಿದೆ. ಇದು ಮೂರು ಬಣ್ಣಗಳಲ್ಲಿ ಅಂದರೆ ಕಪ್ಪು, ನೀಲಿ ಮತ್ತು ಹಸಿರು ಆಯ್ಕೆಯಲ್ಲಿ ಲಭ್ಯವಿರುತ್ತದೆ.

ರೆಡ್‌ಮಿ A1 ಪ್ಲಸ್‌ ಬೆಲೆ ಮತ್ತು ಲಭ್ಯತೆ:
ಇದು ರೆಡ್‌ಮಿ A1 ಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ 2GB+32GB ರೂಪಾಂತರಕ್ಕೆ 7,499 ರೂಪಾಯಿಗಳಾಗಿದೆ. ಮತ್ತೊಂದು 3GB + 32GB ರೂಪಾಂತರಕ್ಕೆ 8,499 ರೂ. ಆಗಿದೆ. ಕಂಪನಿಯು ಈ ಫೋನಿನ ಮೇಲೆ ಅಕ್ಟೋಬರ್ 31, 2022 ರವರೆಗೆ 500 ರೂ. ಗಳ ಸೀಮಿತ ಸಮಯದ ರಿಯಾಯಿತಿಯನ್ನು ನೀಡಿದೆ. ಅದಕ್ಕನುಗುಣವಾಗಿ ಎರಡೂ ರೂಪಾಂತರದ ಫೋನುಗಳಿಗೆ ಕ್ರಮವಾಗಿ 6,999 ರೂ. ಮತ್ತು 7,999 ರೂ. ಗಳಾಗಿದೆ. ರೆಡ್‌ಮಿ A1 ಪ್ಲಸ್‌ ಸ್ಮಾರ್ಟ್‌ಫೋನ್‌ ಅನ್ನು ಫ್ಲಿಪ್‌ಕಾರ್ಟ್‌, Mi.com, Mi Home ಮತ್ತು ರಿಟೇಲ್‌ ಅಂಗಡಿಗಳಿಂದಲೂ ಖರೀದಿಸಬಹುದಾಗಿದೆ.

ಇದನ್ನೂ ಓದಿ : Moto E32 : ಎಂಟ್ರಿ–ಲೆವೆಲ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ ಮೊಟೊರೊಲಾ; ಬೆಲೆ ಮತ್ತು ವಿಶೇಷತೆಗಳು ಹೀಗಿದೆ….

ಇದನ್ನೂ ಓದಿ : Google Pixel 6a : ಗೂಗಲ್ ಪಿಕ್ಸೆಲ್ 6a, ಭಾರತದಲ್ಲಿ ಮಾರಾಟ ಪ್ರಾರಂಭ! ಭಾರಿ ರಿಯಾಯಿತಿ ಮತ್ತು ಕೊಡುಗೆ ನೀಡಿದ ಗೂಗಲ್‌!!

(Redmi A1+ is launched in India with limited time Discount)

Comments are closed.