ಇಸ್ಲಾಮಾಬಾದ್: ತೀವ್ರ ಹಣಕಾಸಿನ ಮುಗ್ಗಟ್ಟಿನಲ್ಲಿ (Pakistan Economic Crisis) ಸಿಲುಕಿಕೊಂಡಿರುವ ಪಾಕಿಸ್ತಾನವು ಪದೇ ಪದೇ ವಿಶ್ವ ಸಮುದಾಯ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮುಂದೆ ಸಾಲಕ್ಕಾಗಿ (Pakistan Loans) ಮಂಡಿಯೂರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ‘ಅಣ್ವಸ್ತ್ರ ಸಜ್ಜಿತ ದೇಶವೆಂದು (Nuclear Country) ಬಡಾಯಿ ಮಾಡುತ್ತೀರಿ, ವಿಶ್ವದ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುತ್ತೀರಿ. ವಿಶ್ವದ ಮುಂದೆ ದೇಶವನ್ನು ಬೆತ್ತಲು ಮಾಡುತ್ತಿದ್ದೀರಿ’ ಎಂದು ಆಡಳಿತಗಾರರ (Pak PM Imran Khan) ವಿರುದ್ಧ ಜನರು ಸಿಟ್ಟು ಹೊರಹಾಕಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎ್) ಆರನೇ ಕಂತಿನ ಸಾಲವನ್ನು ಬಿಡುಗಡೆ ಮಾಡಿದೆ ಎಂದು ಹಣಕಾಸು ಸಚಿವ ಶೌಕತ್ ತರಿನ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟಿಗರು. ಲಜ್ಜೆಗೇಡಿ, ಹೊಣೆಗೇಡಿ ಸರ್ಕಾರ ಎಂದು ಟೀಕಿಸಿದ್ದಾರೆ. ಸಾಲ ಮಾಡುತ್ತಿರುವುದಕ್ಕೆ ನಾಚಿಕೆ ಪಡಬೇಕು. ಬದಲಿಗೆ ಇವರು ಢಾಣಡಂಗುರ ಬಾರಿಸಿಕೊಂಡು ಹಿಗ್ಗುತ್ತಿದ್ದಾರೆ ಎಂದು ಅನೇಕ ಟ್ವಿಟಿಗರು ಜಾಡಿಸಿದ್ದಾರೆ.
ದೇಶದ ಈ ಪರಿಸ್ಥಿತಿಗೆ ಅಸರ್ಮಪಕ ಹಣಕಾಸು ನಿರ್ವಹಣೆ, ಬ್ರಹ್ಮಾಂಡ ಭ್ರಷ್ಟಾಚಾರಗಳು ಕಾರಣ. ಇಂಥ ಸೋರಿಕೆಯನ್ನು ತಡೆಯುವುದನ್ನು ಬಿಟ್ಟು, ಸಾಲಕ್ಕೆ ಪದೇ ಪದೇ ಕೈಯೊಡ್ಡಿ ದೇಶದ ಮಾನವನ್ನು ಕಳೆಯಲಾಗುತ್ತಿದೆ. ಇದರಿಂದ ಸರ್ಕಾರದ ಮೇಲೆ ಜನರ ವಿಶ್ವಾಸ ಣಗೊಳ್ಳುತ್ತಿದೆ ಎಂದು “ಇಸ್ಲಾಂ ಖಬರ್’ ಪತ್ರಿಕೆ ಸಂಪಾದಕೀಯ ಬರೆದಿದೆ. ಅಣ್ವಸ್ತ್ರ ಹೊಂದಿದ್ದರೂ ದಿನನಿತ್ಯದ ಖಚಿರ್ಗೆ ಸಾಲ ಪಡೆಯುತ್ತಿರುವ ಏಕೈಕ ದೇಶ ಪಾಕಿಸ್ತಾನ. ಈ ಭಿೆ ಬೇಡುವಿಕೆ ದಶಕದಿಂದಲೂ ಮುಂದುವರಿದಿರುವುದು ನಾಚಿಕೆಗೇಡು. ದೇಶದಲ್ಲಿ ಇಂಧನ ತೈಲ ಬೆಲೆ, ವಿದ್ಯುತ್ ಶುಲ್ಕಗಳು ಐತಿಹಾಸಿಕ ಮಟ್ಟದಲ್ಲಿ ಏರಿಕೆ ಆಗಿದೆ. ಜನರ ಬದುಕು ದಿನೇ ದಿನೇ ರ್ದುಬರವಾಗುತ್ತಿದೆ ಎಂದು ಸರ್ಕಾರದ ವೈಲ್ಯವನ್ನು ಪತ್ರಿಕೆ ಪಟ್ಟಿ ಮಾಡಿದೆ.
ಐಎಂಎ್ 6ನೇ ಕಂತಿನಲ್ಲಿ 1 ಶತಕೋಟಿ ಡಾಲರ್ ಸಾಲ ನೀಡಿದೆ. ಪಾಕಿಸ್ತಾನಕ್ಕೆ ಆರು ಶತಕೋಟಿ ಡಾಲರ್ ಸಾಲ ನೀಡುವ ಪ್ರಸ್ತಾವನೆಗೆ ಐಎಂಎ್ ಮಂಡಳಿ 2019ರ ಜುಲೈ 3ರಂದು ಒಪ್ಪಿಗೆ ನೀಡಿತ್ತು.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು (Pakistan PM Imran Khan) ರಷ್ಯಾ ಉಕ್ರೇನ್ ಯುದ್ಧದ (Russia vs Ukraine War) ನಡುವೆಯೇ ರಷ್ಯಾದ ರಾಜಧಾನಿ ಮಾಸ್ಕೋಗೆ (Moscow) ಭೇಟಿ ನೀಡಿದ್ದಾರೆ. ಇಂಡಿಯಾ ಟುಡೆ ವರದಿಯ ಪ್ರಕಾರ ನಾನು ಎಷ್ಟು ರೋಮಾಂಚನಕಾರಿ ಸಮಯದಲ್ಲಿ ರಷ್ಯಾಕ್ಕೆ ಬಂದಿದ್ದೇನೆ, ನನಗೆ ತುಂಬಾ ಉತ್ಸಾಹ ಉಕ್ಕುತ್ತಿದೆ!” ಎಂದು ಪಾಕ್ ಪ್ರಧಾನಿ ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ್ದನ್ನು ತಮ್ಮ ರಷ್ಯಾ ಭೇಟಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ನಡುವೆಯೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರಷ್ಯಾ ಭೇಟಿ ಹಾಸ್ಯಕ್ಕೆ ಕಾರಣವಾಗಿದೆ. ಬುಧವಾರ, ಫೆಬ್ರುವರಿ 23ರಂದು ಸಂಜೆ ಮಾಸ್ಕೋದಲ್ಲಿ ರಷ್ಯಾದ ಸರ್ಕಾರದ ಸಚಿವ ಸಂಪುಟದ ಕೆಲವು ಸಚಿವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬರಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ
(Pakistan Economic Crisis people anger about loans)