Hijab Row Updates : ಹೈಕೋರ್ಟ್‌ನಲ್ಲಿ ಪ್ರತಿಧ್ವನಿಸಿದ ಪಿಎಫ್‌ಐ, ಸಿಎಫ್‌ಐ, ಜಮಾತ್ ಇ ಇಸ್ಲಾಮಿ ಸಂಘಟನೆಗಳ ಹೆಸರು ಮತ್ತು ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ

ಬರೋಬ್ಬರಿ 11 ದಿನಗಳ ಸುದೀರ್ಘ ವಾದ ಪ್ರತಿವಾದದ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡುತ್ತಿರುವ ಶಾಲಾ ಕಾಲೇಜುಗಳ ತರಗತಿಯಲ್ಲಿ ಹಿಜಾಬ್ (Hijab Row Updates ) ಧರಿಸುವ ಕುರಿತ ವಿಚಾರಣೆ ಇಂದು ಶುಕ್ರವಾರ, ಫೆಬ್ರುವರಿ 25ರಂದು ಮುಕ್ತಾಯಗೊಂಡಿದೆ. ಪ್ರಕರಣದ ಸಂಪೂರ್ಣ ವಿಚಾರಣೆಯನ್ನು ಆಲಿಸಿರುವ ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್​ ಅವರನ್ನು ಒಳಗೊಂಡ ಪೂರ್ಣ ಪೀಠ ತೀರ್ಪನ್ನು ಕಾಯ್ದಿರಿಸಿದೆ. ಜೊತೆಗೆ ಮಧ್ಯಂತರ ಅರ್ಜಿದಾರರು, ವಾದಿ ಪ್ರತಿವಾದಿಗಳು ಲಿಖಿತ ರೂಪದಲ್ಲಿ ತಮ್ಮ ವಾದವನ್ನು ಹೈಕೋರ್ಟ್‌ಗೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.

ಇಂದಿನ ವಿಚಾರಣೆಯ ಬಹುಮುಖ್ಯ ಅಂಶವೆಂದರೆ ಹೊಸ ಅರ್ಜಿದಾರರ ಪರವಾಗಿ ವಕೀಲ ಸುಭಾಶ್ ಝಾ ಅವರು ವಾದ ಮಂಡಿಸಿದ್ದಾರೆ. ಹಿಜಾಬ್ ಗಲಾಟೆಗೆ ಸಂಬಂಧಿಸಿದ ಸಂಘಟನೆಗಳಾದ ಪಿಎಫ್‌ಐ, ಸಿಎಫ್‌ಐ, ಜಮಾತ್ ಇ ಇಸ್ಲಾಮಿಗಳ ಪಾತ್ರವಿದೆ. ಇವುಗಳಿಗೆ ವಿದೇಶದಿಂದ ಆರ್ಥಿಕ ನೆರವು ದೊರೆಯುತ್ತಿದೆ. ಅಲ್ಲದೇ ಶಿವಮೊಗ್ಗದಲ್ಲಿ ಭಜರಂಗದಳ ಸಂಘಟನೆಯ ಕಾರ್ಯಕರ್ತ ಹರ್ಷ ಅವರ ಕೊಲೆಯ ಹಿಂದೂ ಈ ಸಂಘಟೆನಗಳು ಪಾತ್ರ ವಹಿಸಿವೆ ಎಂದು ಮಂಡಿಸಿದ ಅವರು, ಇದುವರೆಗೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಒಮ್ಮೆಲೆ ಹಿಜಾಬ್ ಧಾರಣೆ ಆರಂಭಿಸಿದರ ಕುರಿತು ಸಿಬಿಐ ತನಿಖೆಗೆ ವಹಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದರು. ಸುಭಾಶ್ ಝಾ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ಈ ಸಂಘಟನೆಗಳ ಪಾತ್ರದ ಆರೊಪದ ಬಗ್ಗೆ ನಿಮ್ಮ ಬಳಿ ದಾಖಲೆಗಳಿವೆಯೇ ಎಂದು ಪ್ರಶ್ನಿಸಿತು.

ಇದನ್ನೂ ಓದಿ: Hijab Meaning: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

ಇದಕ್ಕೂ ಮುನ್ನ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ರವಿವರ್ಮಕುಮಾರ್, ಶಾಸಕರಿಗೆ ಕಾಲೇಜಿನ ತೀರ್ಮಾನ ಕೈಗೊಳ್ಳಲು ಹಕ್ಕುಗಳಿಲ್ಲ. ಶಾಸಕರು ಕಾಲೇಜಿನ ಆಡಳಿತವನನ್ನು ಹೈಜಾಕ್ ಮಾಡಿದ್ದಾರೆ ಎಂದು ವಾದಿಸಿದರಲ್ಲದೇ, ಶಾಸಕರ ಕೈಗೆ ಕಾಲೇಜು ಆಡಳಿತ ನಡೆಸಲು ಅವಕಾಶ ನೀಡುವುದು ಕಾನೂನು ಬಾಹಿರ ಎಂದು ವಾದಿಸಿದರು. ಅಂತಿಮವಾಗಿ ದಿನದ ಅಂತ್ಯಕ್ಕೆ ಹೈಕೋರ್ಟ್ ಪ್ರಕರಣದ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.

ಇದನ್ನೂ ಓದಿ: Vladimir Putin Profile: ವ್ಲಾದಿಮಿರ್ ಪುಟಿನ್: ಬೇಹುಗಾರಿಕಾ ಸಂಸ್ಥೆ ಕೆಜಿಬಿ ಏಜೆಂಟ್‌ನಿಂದ ರಷ್ಯಾವನ್ನು ಕೈಮುಷ್ಠಿಯಲ್ಲಿ ಇಟ್ಟುಕೊಂಡ ಅಧ್ಯಕ್ಷನಾಗಿ ಬೆಳೆದ ಬಗೆಯಿದು

(Hijab Row Updates HC reserve order after 11 days hearing)

Comments are closed.