Muhammad Noor Meskanzai : ಪಾಕಿಸ್ತಾನದಲ್ಲಿ ಮಾಜಿ ಮುಖ್ಯ ನ್ಯಾಯಾಧೀಶರ ಗುಂಡಿಕ್ಕಿ ಹತ್ಯೆ

ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ (Pakistan Former Chief Justice) ಮುಹಮ್ಮದ್ ನೂರ್ ಮೆಸ್ಕಂಜೈ (Muhammad Noor Meskanzai ) ಅವರನ್ನು ಶುಕ್ರವಾರ ಬಲೂಚಿಸ್ತಾನದ ಮಸೀದಿಯೊಂದರ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.ಖರನ್ ಪ್ರದೇಶದ ಮಸೀದಿಯ ಹೊರಗೆ ಮುಹಮ್ಮದ್ ನೂರ್ ಮೆಸ್ಕಂಜೈ ಮೇಲೆ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಮುಹಮ್ಮದ್ ನೂರ್ ಮೆಸ್ಕಂಜೈ ಅವರು, ಬಲೂಚಿಸ್ತಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು. ಪಾಕಿಸ್ತಾನದ ಮಾಧ್ಯಮಗಳ ವರದಿಯ ಪ್ರಕಾರ ಬಲೂಚ್ ಲಿಬರೇಶನ್ ಆರ್ಮಿಯ ಸ್ವಾತಂತ್ರ್ಯ ಹೋರಾಟಗಾರರು ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಾಧೀಶರ ಹತ್ಯೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇನ್ನು ಬಲೂಚಿಸ್ತಾನ್ ಮುಕ್ಯಮಂತ್ರಿ ಮೀರ್ ಅಬ್ದುಲ್ ಖುಡೂಸ್ ಬಿಜೆಂಜೊ ಅವರು ಮಾಜಿ ನ್ಯಾಯಾಧೀಶರ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸಿದ್ದಾರೆ.ಕ್ವೆಟ್ಟಾ ಬಾರ್ ಅಸೋಸಿಯೇಶನ್ (ಕ್ಯೂಬಿಎ) ಅಧ್ಯಕ್ಷ ಅಜ್ಮಲ್ ಖಾನ್ ಕಾಕರ್ ಕೂಡ ಮುಸ್ಕಂಜೈ ಹತ್ಯೆಯನ್ನು ಖಂಡಿಸಿದ್ದಾರೆ. ಮಾಜಿ ನ್ಯಾಯಾಧೀಶರ ಸಾವಿನಿಂದ ಪಾಕಿಸ್ತಾನದ ಪ್ರತಿಯೊಬ್ಬ ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ ಎಂದಿದ್ದಾರೆ.

ಶುಕ್ರವಾರದ ಸಂಜೆಯ ವೇಳೆಯಲ್ಲಿ ಮಸೀದಿಯಿಂದ ಹೊರಗಡೆ ಬರುತ್ತಿದ್ದ ವೇಳೆಯಲ್ಲಿ ಈ ದಾಳಿ ನಡೆದಿದೆ. ಪಾಕಿಸ್ತಾನದಲ್ಲಿ ದಿನೇ ದಿನೇ ಉಗ್ರರ ದಾಳಿ ಪ್ರಕರಣ ಹೆಚ್ಚುತ್ತಿದೆ. ಒಂದೆಡೆ ಆರ್ಥಿಕ ಸಂಕಷ್ಟದಿಂದಾಗಿ ಪಾಕಿಸ್ತಾನ ತತ್ತರಿಸ ಹೋಗಿದ್ರೆ ಇನ್ನೊಂದೆಡೆಯಲ್ಲಿ ಉಗ್ರರ ದಾಳಿ ಪ್ರಕರಣದಿಂದ ಜನರು ಬೇಸತ್ತು ಹೋಗಿದ್ದಾರೆ. ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಪಾಕಿಸ್ತಾನದಲ್ಲಿ ಒಟ್ಟು 42 ಉಗ್ರಗಾಮಿ ದಾಳಿಗಳು ನಡೆದಿದ್ದು, ಅಗಸ್ಟ್ ತಿಂಗಳಿಗೆ ಹೋಲಿಕೆ ಮಾಡಿದ್ರೆ ಶೇ. 35ರಷ್ಟು ಪ್ರಕರಣಗಳು ಏರಿಕೆ ಕಂಡಿವೆ.‌ ವಿಶ್ವದಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿಯೇ ಅತೀ ಹೆಚ್ಚು ಉಗ್ರರ ದಾಳಿ ಪ್ರಕರಣಗಳು ದಾಖಲಾಗುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : Turkey coal mine blast : ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ ..25ಕ್ಕೂ ಹೆಚ್ಚು ಸಾವು.. ಹಲವರು ಗಂಭೀರ

ಇದನ್ನೂ ಓದಿ : ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ, ಆಟೋದಲ್ಲಿ ದರದರನೇ ಎಳೆದೊಯ್ದು ಬಿಸಾಡಿದ ದುರುಳ.. ಬೆಚ್ಚಿ ಬೀಳಿಸೋ ದೃಶ್ಯ ಸೆರೆ

Pakistan Former Chief Justice Muhammad Noor Meskanzai Shot Dead Outside Mosque In Balochistan

Comments are closed.