Turkey coal mine blast : ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ ..25ಕ್ಕೂ ಹೆಚ್ಚು ಸಾವು.. ಹಲವರು ಗಂಭೀರ

ಟರ್ಕಿ : ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ(Turkey coal mine blast) 25ಕ್ಕೂ ಜನರು ಸಾವನ್ನಪ್ಪಿದ್ದು, ಹಲವು ಗಣಿಯಲ್ಲೇ ಸಿಲುಕಿ ಬಿದ್ದಿರುವ ಘಟನೆ ಟರ್ಕಿಯ ಉತ್ತರ ಬಾರ್ಟಿನ ಪ್ರಾಂತ್ಯದಲ್ಲಿ ನಡೆದಿದೆ. ಕಪ್ಪು ಸಮುದ್ರದ ಕರಾವಳಿಗೆ ಹೊಂದಿಕೊಂಡಿರುವ ಅಮಸ್ರಾದ ಬಳಿಯ ಕಲ್ಲಿದ್ದಲು ಗಣಿ ಇದಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸರ್ಕಾರಿ ಸ್ವಾಮ್ಯದ ಟರ್ಕಿಶ್ ಹಾರ್ಡ್ ಕೋಲ್ ಎಂಟರ್‌ಪ್ರೈಸಸ್‌ಗೆ ಈ ಗಣಿ ಸೇರಿದ್ದು ಅಂತಾ ಗೊತ್ತಾಗಿದ್ದು. ಕಲ್ಲಿದ್ದಲು ಗಣಿಯ ಸುಮಾರು 300 ಮೀಟರ್ ಆಳದಲ್ಲಿ ಕೆಲಸ ಮಾಡುವಾಗ ಈ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ವೇಳೆಯಲ್ಲಿ ಗಣಿಯಲ್ಲಿ ಸುಮಾರು 110ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದರು ಅಂತಾ ಗೊತ್ತಾಗಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಟರ್ಕಿ ಆರೋಗ್ಯ ಸಚಿವ 11 ಮಂದಿಯನ್ನ ಇದುವರೆಗೂ ರಕ್ಷಿಸಲಾಗಿದ್ದು, ಉಳಿದವರ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವರು, 4 ಸಹಾರಾ ತುರ್ತು ಸಹಾಯ ಕೇಂದ್ರಗಳನ್ನ ತೆರೆಯಲಾಗಿದ್ದು, 51 ಆಂಬ್ಯುಲೆನ್ಸ್, 168 ಆಂಬ್ಯುಲೆನ್ಸ್ ಸಿಬ್ಬಂದಿ, 15 UMKE ತಂಡಗಳು, 67 UMKE ಸಿಬ್ಬಂದಿ, 22 ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ಮಾಹಿತಿ ನೀಡಿದ್ದಾರೆ.

ಇನ್ನು ಪ್ರಾಥಮಿಕ ಮಾಹಿತಿ ಪ್ರಕಾರ ಕಲ್ಲಿದ್ದಲು ಗಣಿಗಳಲ್ಲಿ ಕಂಡುಬರುವ ದಹನಕಾರಿ ಅನಿಲಗಳ ಫೈರ್ ಡ್ಯಾಂಪ್ ನಿಂದಾಗಿ ಈ ಸ್ಫೋಟ ಸಂಭವಿಸಿರಬಹುದೆಂದು ಊಹಿಸಲಾಗಿದೆ. ಮಧ್ಯ ರಾತ್ರಿ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸುದ್ದಿ ತಿಳಿದ ತಕ್ಷಣ ಗಣಿ ಕಾರ್ಮಿಕರ ಕುಟುಂಬದವರು, ಸ್ನೇಹಿತರು ಸ್ಥಳದಲ್ಲಿ ಜಮಾಯಿಸಿದ್ರು. ತಮ್ಮವರನ್ನ ಹುಡುಕಾಡುತ್ತಿದ್ದ ದೃಶ್ಯ ಕಂಡು ಬಂತು.

ಇದನ್ನೂ ಓದಿ : Virat Kohli Rohit Sharma : ರೋಹಿತ್ ಅಭಿಮಾನಿಯನ್ನು ಕೊಂದ ವಿರಾಟ್ ಫ್ಯಾನ್, ಕೊಹ್ಲಿಯನ್ನು ಅರೆಸ್ಟ್ ಮಾಡಲು ಆಗ್ರಹ

ಇದನ್ನೂ ಓದಿ : College girl molested : ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ, ಆಟೋದಲ್ಲಿ ದರದರನೇ ಎಳೆದೊಯ್ದು ಬಿಸಾಡಿದ ದುರುಳ.. ಬೆಚ್ಚಿ ಬೀಳಿಸೋ ದೃಶ್ಯ ಸೆರೆ

ಇದನ್ನೂ ಓದಿ : Kantara: ಕೆಜಿಎಫ್​ 2, ಆರ್​ಆರ್​ಆರ್​ ಸಿನಿಮಾಗಳ ರೇಟಿಂಗ್​ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ ‘ಕಾಂತಾರ’

Turkey coal mine blast a terrible explosion in a coal mine has killed more than 25 people and trapped many in the mine

Comments are closed.