ಕೈದಿ ಸತ್ತಿದ್ದಾನೆ ಎಂದುಕೊಂಡವರಿಗೆ ಮರಣೋತ್ತರ ಪರೀಕ್ಷೆ ವೇಳೆ ಕಾದಿತ್ತು ಶಾಕ್​

ಸತ್ತಿದ್ದಾನೆ ಎಂದು ಘೋಷಣೆ ಮಾಡಿದ ಕೈದಿಯ ಶವವನ್ನು ಮರಣೋತ್ತರ ಪರೀಕ್ಷೆಗೆಂದು(Prisoner declared dead) ವೈದ್ಯರು ಆತನನ್ನು ಕತ್ತರಿಸಲು ಮುಂದಾಗುತ್ತಿದ್ದಂತೆಯೇ ಎದ್ದು ಕೂತ ಅತ್ಯಂತ ವಿಚಿತ್ರ ಘಟನೆಯೊಂದು ವರದಿಯಾಗಿದೆ.ಸ್ಪೇನ್​ನ ವಿಲ್ಲಬೋನಾದಲ್ಲಿರುವ ಆಸ್ಟುರಿಯಾಸ್​ ಸೆಂಟ್ರಲ್​ ಪೆನಿಟೆನ್ಶಿಯರಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕೈದಿ ಗೊಂಜಾಲೊ ಮೊಂಟೊಯಾ ಜಿಮೆನೆಜ್​ ಮೃತಪಟ್ಟಿದ್ದಾನೆ ಎಂದು ಪೊಲೀಸರು ಘೋಷಣೆ ಮಾಡಿದರು. ಬಳಿಕ ಇವರನ್ನು ಕೂಡಲೇ ಒವಿಡೋದಲ್ಲಿರುವ ಇನ್​ಸ್ಟಿಟ್ಯೂಟ್​​ ಆಫ್​ ಲೀಗಲ್​ ಮೆಡಿಸಿನ್​​ಗೆ ಕರೆದುಕೊಂಡು ಹೋಗಲಾಯ್ತು.


ಗೊಂಜಾಲೋ ಮೊಂಟೊಯಾ ಜಿಮೆನೆಜ್​​ ದೇಹವನ್ನು ಪರೀಕ್ಷಿಸಿದ ಇಬ್ಬರು ವೈದ್ಯರು ಕೂಡ ಈತ ಮೃತಪಟ್ಟಿದ್ದಾನೆ ಎಂದು ಹೇಳಿದ್ದರು. ವಿಧಿವಿಜ್ಞಾನ ತಜ್ಞರು ಕೂಡ ಇದನ್ನು ಅಧಿಕೃತಗೊಳಿಸಿದ್ದರು ಎಂದು ಆಸ್ಟುರಿಯಾಸ್​ ಸೆಂಟ್ರಲ್​ ಪೆನಿಟೆನ್ಶಿಯರಿಯ ವಕ್ತಾರ ಮಾಹಿತಿ ನೀಡಿದ್ದಾರೆ. ವೈದ್ಯರು ಅಧಿಕೃತ ಘೋಷಣೆ ಮಾಡುತ್ತಿದ್ದಂತೆಯೆ ಗೊಂಗಾಲೋ ಮೊಂಟೊಯಾ ಜಿಮೆನೆಜ್​ ಕುಟುಂಬಸ್ಥರಿಗೂ ಮಾಹಿತಿಯನ್ನು ರವಾನಿಸಲಾಗಿತ್ತು.
ಜೈಲಿನಲ್ಲಿ ಅನಾರೋಗ್ಯಕ್ಕೀಡಾಗಿದ್ದ ಗೊಂಜಾಲೋ ಮೊಂಟೊಯಾ ಜಿಮೆನೆಜ್​ ಮೃತಪಟ್ಟಿದ್ದಾನೆ ಎಂದು ಘೋಷಣೆ ಮಾಡಲಾಗಿತ್ತು. ಗೊಂಜಾಲೋ ಮೊಂಟೊಯಾ ಜಿಮೆನೆಜ್​ ದೇಹದಲ್ಲಿ ಸೈನೋಸಿಸ್​ ಲಕ್ಷಣಗಳು ಇದ್ದವು ಎಂದು ವೈದ್ಯರು ಹೇಳಿದ್ದರು. ಆಮ್ಲಜನಕದ ಕೊರತೆಯಿಂದಾಗಿ ಚರ್ಮದ ಬಣ್ಣವು ಬದಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.


ಈ ಎಲ್ಲಾ ವರದಿಗಳು ಸಿದ್ಧಗೊಂಡ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಗೊಂಜಾಲೋ ಮೊಂಟಾಯೋ ಜಿಮೆನೆಜ್​ರನ್ನು ಮರಣೋತ್ತರ ಪರೀಕ್ಷೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆಯಲ್ಲಿ ವೈದ್ಯರಿಗೆ ಗೊಂಜಾಲೋ ಮೊಂಟಾಯೋಜಿಮೆನೆಜ್​ ಮಾತನಾಡುತ್ತಿರುವುದು ವೈದ್ಯರ ಗಮನಕ್ಕೆ ಬಂದಿದೆ. ಶವವೆಂದು ಚೀಲದ ಒಳಗಿದ್ದ ಗೊಂಜಾಲೋ ಬದುಕಿದ್ದಾರೆಂದು ವೈದ್ಯರಿಗೆ ತಿಳಿದುಬಂದಿದೆ.

ಇದನ್ನು ಓದಿ : ಕೇರಳ ಚಿನ್ನ ಸಾಗಣೆ ಪ್ರಕರಣದಲ್ಲಿ ಮತ್ತೊಂದು ತಿರುವು : ಶಿವಶಂಕರ್​ ವಿರುದ್ಧ ಆಕ್ರೋಶ ಹೊರಹಾಕಿದ ಸ್ವಪ್ನಾ

ಇದನ್ನೂ ಓದಿ :ಲೈಂಗಿಕ ಕಾರ್ಯಕರ್ತೆಯಾದ ಶ್ರುತಿ ಹರಿಹರನ್ : ಏನಿದು ಕಹಾನಿ ಇಲ್ಲಿದೆ ಡಿಟೇಲ್ಸ್

Prisoner declared dead doctors wakes up shortly before post-mortem

Comments are closed.