PSL ಪಂದ್ಯದ ವೇಳೆ ಬಾಂಬ್ ಸ್ಫೋಟ: ಕ್ರೀಡಾಂಗಣಕ್ಕೆ ಕಲ್ಲು ಎಸೆದ ಅಭಿಮಾನಿಗಳು

ಪಾಕಿಸ್ತಾನ ಸೂಪರ್‌ ಲೀಗ್‌ ವೇಳೆಯಲ್ಲಿ ಬಾಂಬ್‌ ಸ್ಪೋಟಗೊಂಡು (PSL 2023 Bomb blast) ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಪಾಕಿಸ್ತಾನದ ಕ್ವೆಟ್ಟಾದಲ್ಲಿರುವ ಬುಗ್ಟಿ ಕ್ರೀಡಾಂಗಣದಲ್ಲಿ ಪಿಎಸ್‌ಎಲ್‌ನ ಪ್ರದರ್ಶನ ಪಂದ್ಯವನ್ನು ನಡೆಯುತ್ತಿತ್ತು. ಆದರೆ ಕ್ವೆಟ್ಟಾ ಸ್ಟೇಡಿಯಂ ಬಳಿ ಬಾಂಬ್ ಸ್ಫೋಟಗೊಂಡ ನಂತರ ಮುನ್ನೆಚ್ಚರಿಕೆಯಾಗಿ ಪೇಶಾವರ್ ಝಲ್ಮಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವಿನ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.

ಕ್ವೆಟ್ಟಾದಲ್ಲಿನ ಮೂಸಾ ಚೌಕ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ, ಇದು ನಗರದ ಬುಗ್ಟಿ ಸ್ಟೇಡಿಯಂನಿಂದ ಸ್ವಲ್ಪ ದೂರದಲ್ಲಿ ಈ ಬಾಂಬ್‌ ಸ್ಪೋಟ ಸಂಭವಿಸಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಮೈದಾನದಲ್ಲಿ ಸ್ಪೋಟ ಸಂಭವಿಸಿದ್ರೆ ಬಾರೀ ದುರಂತ ಸಂಭವಿಸುವ ಸಾಧ್ಯತೆಯಿದೆ. ಸ್ಥಳಕ್ಕೆ ರಕ್ಷಣಾ ತಂಡಗಳು ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸುತ್ತಿವೆ. ಇನ್ನು ಪ್ರದರ್ಶನ ಪಂದ್ಯದ ವೇಳೆಯಲ್ಲಿ ಬಾಂಬ್‌ ಸ್ಪೋಟ ಸಂಭವಿಸಿದೆ. ಇದಕ್ಕೂ ಮೊದಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ಕಲ್ಲುತೂರಾಟ ನಡೆಸಿದ್ದಾರೆ. ಪ್ರೇಕ್ಷಕರು ಕಲ್ಲು ತೂರಾಟ ನಡೆಸುತ್ತಿರುವುದು ಹಾಗೂ ಬಾಂಬ್‌ ಸ್ಪೋಟವಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪಾಕಿಸ್ತಾನದ ಮಾಧ್ಯಮಗಳ ವರದಿಗಳ ಪ್ರಕಾರ, ಅನೇಕ ಭದ್ರತಾ ಸಿಬ್ಬಂದಿಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ದುರಂತದ ಪ್ರಮಾಣದ ಕುರಿತು ಹೆಚ್ಚಿನ ವರದಿಗಳನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ. ಇನ್ನು ಪಾಕಿಸ್ತಾನ ತಂಡದ ಹಾಲಿ ಸ್ಟಾರ್‌ಗಳ ಜೊತೆಗೆ ಶಾಹಿದ್ ಅಫ್ರಿದಿ ಸೇರಿದಂತೆ ಕೆಲವು ಮಾಜಿ ಸ್ಟಾರ್‌ಗಳು ಕೂಡ ಈ ಬಾರಿಯ ಪಾಕಿಸ್ತಾನ ಸೂಪರ್‌ ಲೀಗ್‌ ನಲ್ಲಿ ಭಾಗಿಯಾಗಿದ್ದಾರೆ. ಇದೇ ಫೆಬ್ರವರಿ 13 ರಂದು ಪ್ರಾರಂಭವಾಗಿ ಮಾರ್ಚ್ 19 ರಂದು ಮುಕ್ತಾಯಗೊಳ್ಳುತ್ತದೆ. ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣ, ಲಾಹೋರ್‌ನ ಗಡಾಫಿ ಕ್ರೀಡಾಂಗಣ, ಮುಲ್ತಾನ್ ಕ್ರಿಕೆಟ್ ಮೈದಾನ ಮತ್ತು ರಾವಲ್ಪಿಂಡಿ ಪಂದ್ಯಗಳನ್ನು ಆಯೋಜಿಸುತ್ತದೆ.

ಇದನ್ನೂ ಓದಿ : Border-Gavaskar Test series: ಟೀಮ್ ಇಂಡಿಯಾ ಕ್ಯಾಂಪ್’ನಲ್ಲಿ 10 ಸ್ಪಿನ್ನರ್ಸ್, ಇದು ಕೋಚ್ ದ್ರಾವಿಡ್ ಸ್ಪಿನ್ ಚಾಲೆಂಜ್

ಇದನ್ನೂ ಓದಿ : Pervez Musharraf : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಇನ್ನಿಲ್ಲ

ಇದನ್ನೂ ಓದಿ :RuPay Prime Volleyball League : ರುಪೇ ಪ್ರೈಮ್‌ ವಾಲಿಬಾಲ್‌: ಕೋಲ್ಕತ್ತಾ ಥಂಡರ್‌ ಬೋಲ್ಟ್ಸ್‌ಗೆ ಮಣಿದ ಬೆಂಗಳೂರು ಟಾರ್ಪೆಡೋಸ್‌

PSL 2023: Bomb blast during PSL match: fans throw stones into stadium

Comments are closed.