ಮತ್ತೆ ಬರ್ತಿದೆ ಸಾಧಕರ ಕತೆ : ವಿಕೇಂಡ್ ವಿತ್ ರಮೇಶ್ ಸೀಸನ್ 5 ಪ್ರೋಮೋ ರಿಲೀಸ್

ಮನೋರಂಜನಾ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಮೂಡಿಸಿ ಟಿಆರ್‌ಪಿಯಲ್ಲಿ ಹೊಸ ದಾಖಲೆ ಬರೆಯುವಂತೆ ಮಾಡಿದ್ದ ಹಾಗೂ ನಾಡಿನ ಹಲವು ಹೆಸರಾಂತ ಸಾಧಕರ ಅಸಲಿ ಕತೆಯನ್ನು ಪರಿಚಯಿಸಿದ್ದ ಶೋ ವಿಕೇಂಡ್ ವಿತ್ ರಮೇಶ್. ಈಗಾಗಲೇ ನಾಲ್ಕು ಸೀಸನ್ ಗಳನ್ನು ಮುಗಿಸಿರೋ ಈ ಶೋದ ಐದನೇ ಸೀಸನ್ (Weekend with Ramesh Season 5) ಸದ್ಯದಲ್ಲೇ ಆರಂಭವಾಗಲಿದೆ ಅನ್ನೋ ಸಿಹಿ ಸುದ್ದಿಯನ್ನು ಜೀ ವಾಹಿನಿ ನೀಡಿದೆ.

ನಾಡಿನ ಮನೋರಂಜನಾ ಕ್ಷೇತ್ರದಲ್ಲಿ ಹಲವು ಗುಣಾತ್ಮಕ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾದ ಜೀ ವಾಹಿನಿ ಈಗ ಮತ್ತೊಮ್ಮೆ ತನ್ನ ಜನಪ್ರಿಯ ಕಾರ್ಯಕ್ರಮವನ್ನು ಪುನರಾರಂಭಿಸಲು ಸಿದ್ಧವಾಗಿದೆ. ರಾಜಕೀಯ,ಸಿನಿಮಾ,ಪೊಲೀಸ್ ಇಲಾಖೆ ಸೇರಿದಂತೆ ನಾಡಿನ ಎಲ್ಲ ಕ್ಷೇತ್ರದ ಸಾಧಕರ ಸಾಧನೆಯ ಹಾದಿ,ಬದುಕು,ಬವಣೆ ಎಲ್ಲವನ್ನು ಮನಮುಟ್ಟುವಂತೆ ತೆರೆಗೆ ತಂದ ಖ್ಯಾತಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕಿದೆ. ಸಿದ್ಧರಾಮಯ್ಯನವರಿಂದ ಆರಂಭಿಸಿ, ಸುಧಾ ಮೂರ್ತಿಯವರ ತನಕ ಎಲ್ಲ ಸಾಧಕರ ಸಾಧನೆಯನ್ನು ಕಂಡ ನಾಡಿನ ಜನರು ಪ್ರೇರಣೆಗೊಂಡಿದ್ದು ಸುಳ್ಳಲ್ಲ.

ಇಂಥ ಪ್ರೇರಣಾತ್ಮಕ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ತಿದ್ದ ಜನರಿಗೆ ಜೀ ವಾಹಿನಿ ಸಿಹಿಸುದ್ದಿ ನೀಡಿದೆ. ಈ ಬಗ್ಗೆ ಝೀ ವಾಹಿನಿ ಅಧಿಕೃತ ಪ್ರೋಮೋ ರಿಲೀಸ್ ಮಾಡಿದೆ. ನಟ ರಮೇಶ್ ಅರವಿಂದ್ ಹಾಗೂ ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಈ ಪ್ರೋಮೋದಲ್ಲಿ ಭಾಗಿಯಾಗಿದ್ದಾರೆ. ರಾಧಿಕಾ ನಾವು ಐಪೆಲ್ ಟವರ್ ನೋಡಲು ಹೋಗೋಣ್ವಾ ಎಂಬ ಪ್ರಶ್ನೆಗೆ ಅಯ್ಯೋ ಅದು ಸಾವಿರಾರು ಅಡಿ ಎತ್ತರ ನೋಡಿದ್ರೇ ಕತ್ತು ನೋವು ಬರುತ್ತೆ ಅಂತಾರೆ ರಮೇಶ್. ಅದಕ್ಕೆ ಪರವಾಗಿಲ್ಲ ಕಾಶ್ಮೀರಕ್ಕೆ ಹೋಗೋಣ ಅಂದ್ರೇ ಅಲ್ಲಿ ತುಂಬಾ ಚಳಿ ಎನ್ನುತ್ತಾರೆ.

ಇದನ್ನೂ ಓದಿ : ನಟ ಯಶ್‌ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ ಮಗ ಯಥರ್ವ್‌ ವಿಡಿಯೋ ಸಖತ್‌ ವೈರಲ್‌

ಇದನ್ನೂ ಓದಿ : ‘ಹೊಯ್ಸಳ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ : ಪೊಲೀಸ್‌ ಲುಕ್‌ನಲ್ಲಿ ಅಬ್ಬರಿಸಿದ ಡಾಲಿ

ಇದನ್ನೂ ಓದಿ : 100 ದಿನ ಪೂರೈಸಿದ ನಟ ಪುನೀತ್ ರಾಜ್‌ ಕುಮಾರ್ ಅಭಿನಯದ ಗಂಧದ ಗುಡಿ

ಹೋಗಲಿ ಇಲ್ಲೇ ಊಟಿ ಕೊಡೈಕೆನಾಲ್ ಗೆ ಹೋಗೋಣ ಅಂದ್ರೇ ಇಲ್ಲ ನಾನು ಕೆಲಸದಲ್ಲಿ ತುಂಬಾ ಬ್ಯುಸಿ ಇದ್ದಿನಿ ಎಂದಿದ್ದಾರೆ. ಅದಕ್ಕೆ ರಾಧಿಕಾ ಖುಷಿಯಿಂದ ಹೌದಾ? ಯಾವಾಗಾ ಶುರುವಾಗುತ್ತೆ ಎಂದು ಕೇಳಿದಾಗ ಹೇಳ್ತಿನಿ ಸಮಯ ಬಂದಾಗ ಎಂದಿದ್ದಾರೆ. ಒಟ್ಟಿನಲ್ಲಿ ನಾಡಿನ ಜನರ ಮನಗೆದ್ದಿದ್ದ ಶೋ ಮತ್ತೆ ಆರಂಭವಾಗೋ ಮುನ್ಸೂಚನೆ ಸಿಕ್ಕಿದ್ದು ಜನರ ಖುಷಿಗೆ ಕಾರಣವಾಗಿದೆ. ಪ್ರೇಕ್ಷಕರು ಈಗಾಗಲೇ ಈ ಸೀಸನ್ ನಲ್ಲಿ ಯಾವೆಲ್ಲ ಸಾಧಕರ ಬದುಕಿನ ಚಿತ್ರಣ ನೋಡಲು ಸಿಗಬಹುದು ಎಂಬ ಕುತೂಹಲದಿಂದ ಕಾಯ್ತಿದ್ದಾರೆ. ಸದ್ಯ ಕಾಮೆಡಿ ಹಾಗೂ ಸಿಂಗಿಂಗ್ ರಿಯಾಲಿಟಿ ಶೋಗಳ ಮೂಲಕ ಜೀ ಕನ್ನಡ ಜನರ ಮೆಚ್ಚುಗೆ ಗಳಿಸಿದೆ.

The Story of the Pros Again: Weekend with Ramesh Season 5 Promo Release

Comments are closed.