ಬ್ರಿಟನ್ : Queen Elizabeth II : ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಸೆಪ್ಟೆಂಬರ್ 8ರ ಮಧ್ಯಾಹ್ನ 3:10ರ ಸುಮಾರಿಗೆ ನಿಧನರಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರ.ದೀರ್ಘಾವದಿಯ ರಾಣಿಯ ಅಂತ್ಯಕ್ರಿಯೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ವಿಶ್ವದ ಅನೇಕ ಗಣ್ಯಾತಿಗಣ್ಯರು ಆಗಮಿಸಿದ್ದರು. ಇದೀಗ ಎರಡನೇ ಎಲಿಜಬೆತ್ರ ಮರಣ ಪ್ರಮಾಣ ಪತ್ರ ಬಿಡುಗಡೆಯಾಗಿದ್ದು ರಾಣಿ ಎಲೆಜಬೆತ್ ವೃದ್ಧಾಪ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಕಾರಣ ನೀಡಲಾಗಿದೆ. 96 ವರ್ಷ ವಯಸ್ಸಿನ ಎರಡನೇ ಎಲಿಜಬೆತ್ ಸ್ಕಾಟಿಷ್ ಹೈಲ್ಯಾಂಡ್ಸ್ನಲ್ಲಿರುವ ಬಾಲ್ಮೋರಲ್ ಕ್ಯಾಸೆಲ್ ಎಸ್ಟೇಟ್ನಲ್ಲಿ ನಿಧನರಾಗಿದ್ದಾರೆ.
ಬ್ರಿಟೀಷ್ ಇತಿಹಾಸದಲ್ಲಿಯೇ ಸುದೀರ್ಘ ಸೇವೆ ಸಲ್ಲಿಸಿದ ರಾಣಿ ಎಂಬ ಖ್ಯಾತಿಗೆ ಎರಡನೇ ಎಲಿಜಬೆತ್ ಪಾತ್ರರಾಗಿದ್ದಾರೆ, 1952ರಿಂದ 70 ವರ್ಷಗಳ ಕಾಲ ಎರಡನೇ ಎಲಜಬೆತ್ ಬ್ರಿಟೀಷ್ ಮುಖ್ಯಸ್ಥೆಯಾಗಿ ಆಳ್ವಿಕೆ ನಡೆಸಿದ್ದಾರೆ. ಸ್ಕಾಟ್ಲೆಂಡ್ನ ನ್ಯಾಷನಲ್ ರೆಕಾರ್ಡ್ಸ್ ಬಿಡುಗಡೆ ಮಾಡಿದ ಪ್ರಮಾಣ ಪತ್ರದಲ್ಲಿ ಸೆಪ್ಟೆಂಬರ್ 16ರಂದು ರಾಣಿಯ ಏಕೈಕ ಪುತ್ರಿ ರಾಜಕುಮಾರಿ ಅನ್ನಿ ಎರಡನೇ ಎಲೆಜಬೆತ್ರ ಮರಣವನ್ನು ನೋಂದಾಯಿಸಿದ್ದಾರೆ.
ಸೆಪ್ಟೆಂಬರ್ 13ರಂದು ಬಕಿಂಗ್ಹ್ಯಾಮ್ ಅರಮನೆ ಹೊರಡಿಸಿ ಹೇಳಿಕೆಯಲ್ಲಿ ಅನ್ನಿ ತಾವು ತಮ್ಮ ತಾಯಿಯ ಜೀವನದ ಕೊನೆಯ 24 ಗಂಟೆಗಳ ಕ್ಷಣದಲ್ಲಿ ತಾವು ಅವರೊಂದಿಗೆ ಇದ್ದೆ ಎಂದು ಹೇಳಿದ್ದಾರೆ. ಮರಣ ಪ್ರಮಾಣ ಪತ್ರದಲ್ಲಿ ರಾಣಿ ಎರಡನೇ ಎಲಿಜಬೆತ್ರ ಮರಣದ ಸ್ಥಳವನ್ನು ಬಾಲ್ಮೋರಲ್ ಕ್ಯಾಸಲ್ ಎಂದು ಹೇಳಿದೆ.ಮರಣ ಪ್ರಮಾಣ ಪತ್ರದಲ್ಲಿ ಉದ್ಯೋಗ ಎಂದು ಬರೆಯಲಾದ ವಿಭಾಗದಲ್ಲಿ ಹರ್ ಮೆಜೆಸ್ಟಿ ದಿ ಕ್ವೀನ್ ಎಂದು ನಮೂದಿಸಲಾಗಿದೆ. ರಾಣಿಯು ಇಂಗ್ಲೆಂಡ್‌ನಲ್ಲಿ ಮರಣಹೊಂದಿದ್ದರೆ, ಆಕೆಯ ಮರಣವನ್ನು ನೋಂದಾಯಿಸುವ ಅಗತ್ಯವಿಲ್ಲ, ಏಕೆಂದರೆ ಕಾನೂನು ಸಾರ್ವಭೌಮ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ.
ಆದರೆ 1836 ರ ಹಿಂದಿನ ಶಾಸನವು ಸ್ಕಾಟ್ಲೆಂಡ್‌ನಲ್ಲಿ ಅನ್ವಯಿಸುವುದಿಲ್ಲ, ಇದು ಇಂಗ್ಲೆಂಡ್ ಮತ್ತು ವೇಲ್ಸ್‌ಗೆ ಪ್ರತ್ಯೇಕ ಕಾನೂನು ವ್ಯವಸ್ಥೆಯನ್ನು ಹೊಂದಿದೆ ಮತ್ತು “ಪ್ರತಿಯೊಬ್ಬ ವ್ಯಕ್ತಿಯ ಸಾವು” ಅನ್ನು ನೋಂದಾಯಿಸಬೇಕು ಎಂದು ಷರತ್ತು ವಿಧಿಸುತ್ತದೆ.
ಇದನ್ನೂ ಓದಿ : Siraj replaces Jasprit Bumrah: ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾ ಸೇರಿದ ಆರ್‌ಸಿಬಿ ವೇಗಿ ಸಿರಾಜ್
Queen Elizabeth II Died Of Old Age Says Her Death Certificate