Sabbakki Paddu : ಉಪವಾಸದ ದಿನದಂದು ಮನೆಯಲ್ಲೇ ಮಾಡಿ ಸಬ್ಬಕ್ಕಿ ಪಡ್ಡು

(Sabbakki Paddu)ಹಬ್ಬ ಹರಿದಿನಗಳಲ್ಲಿ ಹಾಗೂ ಏಕಾದಶಿ ಸಮಯದಲ್ಲಿ ಹೆಚ್ಚಿನ ಜನರು ಉಪವಾಸ ಆಚರಿಸುತ್ತಾರೆ. ಈ ಉಪವಾಸದ ಸಮಯದಲ್ಲಿ ಕೆಲವೊಂದು ಫಲಹಾರಗಳನ್ನು ಹಾಗೂ ಒಂದಷ್ಟು ಹಣ್ಣುಗಳನ್ನು ಮಾತ್ರ ಸೇವಿಸುತ್ತಾರೆ. ಇನ್ನೂ ಕೆಲವರು ನೀರನ್ನು ಕೂಡ ಸೇವಿಸದೇ ಉಪವಾಸವನ್ನು ಮಾಡುತ್ತಾರೆ. ಅದರಲ್ಲಿ ಕೇವಲ ಫಲಹಾರವನ್ನು ಸೇವಿಸಿಕೊಂಡು ಉಪವಾಸವನ್ನು ಮಾಡುವವರಿದ್ದಾರೆ. ಹಾಗಾದರೆ ಮನೆಯಲ್ಲಿ ಸುಲಭ ರೀತಿಯಲ್ಲಿ ಫಲಹಾರವನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:

  • ಸಬ್ಬಕ್ಕಿ
  • ಆಲೂಗಡ್ಡೆ
  • ಹಸಿಮೆಣಸಿನಕಾಯಿ
  • ಕೊತ್ತಂಬರಿ ಸೊಪ್ಪು
  • ಜೀರಿಗೆ
  • ಶುಂಠಿ
  • ಉಪ್ಪು
  • ನೀರು

(Sabbakki Paddu) ತಯಾರಿಸುವ ವಿಧಾನ :

(ಸಬ್ಬಕ್ಕಿಯನ್ನು ನೆನೆಸುವ ಅಗತ್ಯವಿಲ್ಲ) ಸಣ್ಣ ಉರಿಯಲ್ಲಿ ಒಂದು ಬಾಣಲೆಯಲ್ಲಿ ಒಂದು ಕಪ್‌ ಸಬ್ಬಕ್ಕಿಯನ್ನು ಎರಡು ನಿಮಿಷದವರೆಗೆ ಹುರಿದುಕೊಳ್ಳಬೇಕು. ಹುರಿದ ಸಬ್ಬಕ್ಕಿ ಬಿಸಿ ಆರಿದ ನಂತರ ಮಿಕ್ಸ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಹೀಗೆ ನುಣ್ಣಗೆ ರುಬ್ಬಿದ ಸಬ್ಬಕ್ಕಿಯನ್ನು ಒಂದು ಪಾತ್ರೆಗೆ ಹಾಕಿ ನಂತರ ಅದಕ್ಕೆ ಬೇಯಿಸಿದ ಎರಡು ಆಲೂಗಡ್ಡೆ, ಒಂದು ಟೇಬಲ್‌ ಸ್ಪೂನ್‌ ಕೊತ್ತಂಬರಿ ಸೊಪ್ಪು, ಚಿಟಿಕೆ ಜೀರಿಗೆ, ಸಣ್ಣಗೆ ಹಚ್ಚಿದ ಶುಂಠಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹದಕ್ಕೆ ಸರಿಯಾಗಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಬೇಕು. ಮಿಕ್ಸ್‌ ಮಾಡಿ ಒಂದು ಅರ್ಧ ಗಂಟೆಗಳ ಕಾಲ ಹಾಗೆ ಬಿಡಬೇಕು. ನಂತರ ಪಡ್ಡಿನ ತವವನ್ನು ಗ್ಯಾಸ್‌ ಮೇಲೆ ಇಟ್ಟುಕೊಂಡು ಎಣ್ಣೆಯನ್ನು ಸವರಿ ಹಿಟ್ಟನ್ನು ಹಾಕಿದ ಮೇಲೆ ಮೀಡಿಯಮ್‌ ಉರಿಯಲ್ಲಿ ಎರಡು ಬದಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. ಆಗ ಬಿಸಿ ಬಿಸಿ ಸಬ್ಬಕ್ಕಿ ಪಡ್ಡು ತಯಾರಾಗುತ್ತದೆ. ಇದೇ ಹಿಟ್ಟನ್ನು ಬಳಸಿ ರೊಟ್ಟಿ ಕೂಡ ಮಾಡಬಹುದಾಗಿದೆ.

ಇದನ್ನೂ ಓದಿ : ಮನೆಯಲ್ಲೇ ಮಾಡಿ ಹೋಟೆಲ್‌ಸ್ಟೈಲ್‌ ಗರಿಗರಿ ಚಿಕನ್‌ ಕಬಾಬ್‌

ಇದನ್ನೂ ಓದಿ : ಗೋಬಿಯ ಈ ಸ್ನ್ಯಾಕ್ಸ್‌ ಸವಿದಿದ್ದೀರಾ; ಗೋಬಿ–ಪೆಪ್ಪರ್‌ ಫ್ರೈ ಹೀಗೆ ಮಾಡಿ

ಇದನ್ನೂ ಓದಿ : ಓಣಂಗೆ ಕೇರಳದ ಸ್ಪೆಷಲ್‌ ಡಿಶ್‌ ಆವಿಯಲ್‌ ಹೀಗೆ ಮಾಡಿ

ಇದನ್ನೂ ಓದಿ : ಸಂಜೆಯ ಟೀ ಟೈಮ್‌ಗೆ ಇದು ಬೆಸ್ಟ್‌ : ಶೇಂಗಾದಿಂದ ಮಾಡಿ ಈ ರೀತಿಯ ಸ್ನಾಕ್ಸ್‌

ಕಡಿಮೆ ಅವಧಿಯಲ್ಲಿ ಕಡಿಮೆ ಸಾಮಾಗ್ರಿಗಳನ್ನು ಬಳಸಿಕೊಂಡು ಬಹಳ ಬೇಗನೇ ತಯಾರಿಸಬಹುದಾದ ತಿಂಡಿಯಾಗಿದೆ. ಇದನ್ನು ಪುದಿನ ಚಟ್ನಿ ಜೊತೆಯಲ್ಲಿ ತಿನ್ನುವುದಕ್ಕೆ ರುಚಿಯಾಗಿರುತ್ತದೆ. ಸಬ್ಬಕ್ಕಿಯಿಂದ ಪಾಯಸ, ಉಪ್ಪಿಟ್ಟು, ಇಡ್ಲಿ, ದೋಸೆ ಹಾಗೂ ವಡೆಗಳನ್ನು ಕೂಡ ಮಾಡುತ್ತಾರೆ. ಒಟ್ಟಾರೆ ಸಬ್ಬಕ್ಕಿ ಅಂದರೆ ಮುಖ ಸಿಂಡರಿಸುವವರ ಮಧ್ಯದಲ್ಲಿ ಸಬ್ಬಕ್ಕಿಯಿಂದ ಮಾಡುವ ಸಿಹಿತಿಂಡಿಗಳನ್ನು ಇಷ್ಟಪಟ್ಟು ತಿನ್ನುವವರು ಇದ್ದಾರೆ. ಸಬ್ಬಕ್ಕಿಯನ್ನು ಸೇವಿಸುವುದರಿಂದ ದೇಹಕ್ಕೆ ತಂಪು ಕೂಡ ನೀಡುತ್ತದೆ.

Make sabbakki paddu at home on fasting day

Comments are closed.