Lokayukta Ride : ರಾಜ್ಯದ ಹಲವು RTO ಚೆಕ್‌ ಪೋಸ್ಟ್‌ಗಳ ಮೇಲೆ ಏಕಾಏಕಿ ಲೋಕಾಯುಕ್ತರ ದಾಳಿ

ಬೆಂಗಳೂರು : ರಾಜ್ಯದ ಎಲ್ಲೆಡೆ ಚೆಕ್‌ ಪೋಸ್ಟ್‌ಗಳ ಮೇಲೆ ಬೆಳ್ಳಂ ಬೆಳಗ್ಗೆ ಏಕಾಏಕಿ ಲೋಕಾಯುಕ್ತರು ದಾಳಿ ( Lokayukta Ride) ನಡೆಸಿದ್ದಾರೆ. ವಾಹನ ಸವಾರರಿಂದ ಸಂಗ್ರಹಿಸುವ ತೆರಿಗೆ ಹಣದ ವಸೂಲಿಯ ದೂರಿನ ಹಿನ್ನಲೆಯಲ್ಲಿ ರಾಜ್ಯದ ಹಲವು ಕಡೆಯಲ್ಲಿ RTO ಚೆಕ್‌ ಪೋಸ್ಟ್‌ (RTO Check Post)ಗಳ ಮೇಲೆ ಲೋಕಾಯಕ್ತರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಹೊರವಲಯಗಳಾದ ಅತ್ತಿಬೆಲೆ, ಬೀದರ್‌ ಜಿಲ್ಲೆಯ ಹುಮ್ನಾಬಾದ್‌, ಹಾಗೂ ಬಳ್ಳಾರಿಯ ಹಗರಿ ಆರ್‌ಟಿಓ ಸುಂಕ ಕಟ್ಟೆ ಮೇಲೆ ಕೂಡ ದಾಳಿ ನಡೆಸಿದ್ದಾರೆ.

ಇವತ್ತು ಬೆಳಿಗ್ಗೆ ನಾಲ್ಕು ಗಂಟೆಯ ವೇಳೆಯಲ್ಲಿ ಬೀದರ್‌ , ಕಲ್ಬುರ್ಗಿ ಎಸ್ಪಿ ಪಿ. ಕರ್ನೂಲ್‌ ತಂಡದ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತರ ದಾಳಿ(Lokayukta Ride) ವೇಳೆಯಲ್ಲಿ ಒಂದೂವರೆ ಲಕ್ಷ ರೂಪಾಯಿ ಹಣ ಚೆಕ್‌ ಪೋಸ್ಟ್‌ (RTO Check Post)ನಲ್ಲಿ ಕಂಡು ಬಂದಿದೆ. ಅಧಿಕಾರಿಗಳು ಪರಿಶೀಲನೆ ವೇಳೆಯಲ್ಲಿ ಪತ್ತೆಯಾದ ಹಣದ ಮೇಲೆ ಅನುಮಾನ ಮೂಡಿದೆ. ಹಣ ದಂಡದೋ ಅಥವಾ ಲಂಚದ ಹಣವೋ ಎಂದು ಅಧಿಕಾರಿಗಳು ಪರಿಶೀಲಿಸುವುದಕ್ಕೆ ಪ್ರಾರಂಭಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಆರ್‌ಟಿಓ ಅಧಿಕಾರಿ ಹೇಮಂತ್‌ ಬಳಿ ಮಾಹಿತಿಯನ್ನು ಪಡೆಯುತ್ತಿದ್ದಾರೆ

ರಾಜ್ಯದಾದ್ಯಂತ ದಸರಾ ಹಬ್ಬದ ಹಿನ್ನಲೆಯಲ್ಲಿ ಬೆಂಗಳೂರು ಹಾಗೂ ಹೊಸದುರ್ಗದ ಕಡೆ ಓಡಾಡುತ್ತಿದ್ದ ಖಾಸಗಿ ಬಸ್‌ ಮೇಲೆ ಆರ್‌ಟಿಓ ಅಧಿಕಾರಿಗಳ ದಾಳಿ ಹಿನ್ನಲೆಯಲ್ಲಿ ಎರಡು ಖಾಸಗಿ ಬಸ್‌ನ್ನು ವಶಪಡಿಸಿಕೊಂಡಿದ್ದಾರೆ. ಈ ದಾಳಿಯು ತುಮಕೂರು ಆರ್‌ಟಿಓ ಇನ್ಸ್‌ಪೇಕ್ಟರ್‌ ನೇತೃತ್ವದಲ್ಲಿ ನಡೆದಿರುತ್ತದೆ. ವಾಹನ ಪರವಾನಿಗೆ ಹಾಗೂ ಟ್ಯಾಕ್ಸ್‌ ಇಲ್ಲದೇ ಓಡಾಡುತ್ತಿರುವ ಬಸ್‌ಗಳ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತ್ರ ಓಡಿಸಲು ಪರವಾನಿಗೆ ಇರುವ ಬಸ್‌ಗಳು, ಬೆಂಗಳೂರಿನ ಹೊರವಲಯವಾದ ಹೊಸದುರ್ಗದ ನಡುವೆ ಓಡಾಟ ನಡೆಸುತ್ತಿದ್ದನ್ನು ಗಮನಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಫ್ಯಾಕ್ಟರಿಗೆ ಬಳಸುತ್ತಿದ್ದ ಬಸ್‌ಗಳಲ್ಲಿ ಜನರಿದ್ದ ಕಾರಣ ದಾಳಿ ನಡೆಸಿದ್ದರು.

ಇದನ್ನೂ ಓದಿ : ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಮರುಜೀವ: ಸಂತ್ರಸ್ಥರ ಕುಟುಂಬದ ಜೊತೆ ರಾಹುಲ್‌ ಗಾಂಧಿ ಸಂವಾದ

ಇದನ್ನೂ ಓದಿ : ಶೋಭಾ ಕರಂದ್ಲಾಜೆ ಇನ್ಮುಂದೇ ಶೋಭಾ ಗೌಡ : ಹೆಸರು ಬದಲಾವಣೆ ಹಿಂದಿದೆ ಬಾರೀ ಲೆಕ್ಕಾಚಾರ

ಇದನ್ನೂ ಓದಿ : ನಿಷೇಧಿತ ಐಎಸ್​ ಉಗ್ರ ಸಂಘಟನೆಯೊಂದಿಗೆ ನಂಟು ಶಂಕೆ : ಹಣ್ಣಿನ ವ್ಯಾಪಾರಿ ಬಂಧನ

ಗಡಿ ಪ್ರದೇಶದಲ್ಲಿ ವಾಹನಗಳಿಂದ ಹಣ ವಸೂಲಿಯ ಆರೋಪದ ಹಿನ್ನಲೆಯಲ್ಲಿ ಲೋಕಾಯುಕ್ತರು ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ನಂಗಲಿ ಆರ್‌ಟಿಓ ಚೆಕ್‌ ಪೋಸ್ಟ್‌(RTO Check Post) ಮೇಲೆ ಲೋಕಾಯುಕ್ತ ಎಸ್ಪಿ ಉಮೇಶ್‌ ನೇತೃತ್ವದ ಟೀಮ್ ದಾಳಿ ನಡೆಸಿ, ಅಲ್ಲಿನ ಅಧಿಕಾರಿಗಳ ದಾಖಲಾತಿಗಳನ್ನು ಪರಿಶೀಲನೆಯನ್ನು ಮಾಡುತ್ತಿದ್ದಾರೆ.‌ ಇಂದು ಬೆಳಗ್ಗಿನ ಜಾವದಲ್ಲಿ ಲೋಕಾಯಕ್ತ ಪೋಲಿಸರಾದ DYSP ಅಯ್ಯನಗೌಡ ನೇತೃತ್ವದಲ್ಲಿ ವಿಜಯಪುರ ಜಿಲ್ಲೆ ಹೊಸಪೇಟೆಯ ಹೊರವಲಯದ ಶನೇಶ್ವರ ದೇವಾಲಯದ ಬಳಿ ಇರುವ ಆರ್‌ಟಿಓ ಚೆಕ್‌ ಪೋಸ್ಟ್‌ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಯಾರು ಇರಲಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಘನ ವಾಹನಗಳು ಸೇರಿದಂತೆ ಇತರ ಕೆಲವು ವಾಹನ ಚಾಲಕರ ಬಳಿ ಹಣ ವಸೂಲಿ ಆರೋಪ ಕೇಳಿ ಬಂದಿದ್ದರಿಂದ ದಾಳಿ ನಡೆಸಿದ್ದಾರೆ. ಹಾಗೆ ಬೆಂಗಳೂರು – ಮುಂಬೈ ರಾಷ್ಟೀಯ ಹೆದ್ದಾರಿಯ ನಾಲ್ಕು ಚೆಕ್‌ ಪೋಸ್ಟ್‌ಗಳ ಮೇಲು ಕೂಡ ಅಧಿಕಾರಿಗಳು ದಾಳಿ ನಡೆಸಿದ್ದು. ಆ ಸಮಯದಲ್ಲಿ ಚೆಕ್‌ ಪೋಸ್ಟ್‌ನಲ್ಲಿ ಹಣವಿರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Lokayukta attacks on many RTO check posts in the state

Comments are closed.