Ranil Wickremesinghe : ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್​ ವಿಕ್ರಮಸಿಂಘೆ ಆಯ್ಕೆ

ಶ್ರೀಲಂಕಾ : Ranil Wickremesinghe  : ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರನಿಲ್​ ವಿಕ್ರಮ ಸಿಂಘೆ ಇಂದು ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಶ್ರೀಲಂಕಾದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ವಿದೇಶಕ್ಕೆ ಹಿಂದಿನ ಶ್ರೀಲಂಕ ಅಧ್ಯಕ್ಷ ಗೊಟಬಯ ರಾಜಪಕ್ಸೆ ಪಲಾಯನ ಮಾಡಿದ್ದರು. ದೇಶದ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸಿದ್ದ ಶ್ರೀಲಂಕಾ ಸರ್ಕಾರದ ವಿರುದ್ಧ ಜನರ ದಂಗೆ ಕಾವೇರುತ್ತಿದ್ದಂತೆಯೇ ಗೊಟಬಯ ರಾಜಪಕ್ಸೆ ಪತ್ನಿ ಹಾಗೂ ತಮ್ಮ ಅಂಗರಕ್ಷಕರ ಸಮೇತ ವಿದೇಶಕ್ಕೆ ಪಲಾಯನ ಮಾಡಿದ್ದರು.

73 ವರ್ಷದ ರನಿಲ್​ ವಿಕ್ರಮ ಸಿಂಘೆ 225 ಮಂದಿ ಸದಸ್ಯರು ಇರುವ ಸದನದಲ್ಲಿ 134 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ರನಿಲ್​ ವಿಕ್ರಮ ಸಿಂಘೆಗೆ ತೀವ್ರ ಪೈಓಟಿ ನೀಡಿದ್ದ ಭಿನ್ನಮತೀಯ ಆಡಳಿತ ಪಕ್ಷದ ಡಲ್ಲಾಸ್​ ಅಲಹಪ್ಪೆರುಮ 82 ಮತಗಳನ್ನು ಗಳಿಸಲಷ್ಟೇ ಶಕ್ತರಾದರು. ಎಡಪಕ್ಷ ಜನತಾ ವಿಮುಕ್ತಿ ಪೆರಮುನ ನಾಯಕರಾದ ಅನುರ ಕುಮಾರ್​ ಡಿಸಾನಾಯಕೆ ಕೇವಲ ಮೂರು ಮತಗಳನ್ನು ಗಳಿಸಿದರು. ನವೆಂಬರ್ 2024 ರಲ್ಲಿ ಕೊನೆಗೊಳ್ಳುವ ರಾಜಪಕ್ಸೆ ಉಳಿದ ಅವಧಿಯನ್ನು ಪೂರೈಸಲು ಹೊಸ ಅಧ್ಯಕ್ಷರು ಜನಾದೇಶವನ್ನು ಹೊಂದಿರುತ್ತಾರೆ.

ಇದಕ್ಕೂ ಮೊದಲು, ಅಭೂತಪೂರ್ವ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ದ್ವೀಪ ರಾಷ್ಟ್ರದಲ್ಲಿ ಉಂಟಾದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯ ನಡುವೆ ರಹಸ್ಯ ಮತದಾನದ ಮೂಲಕ ಮತದಾನ ನಡೆಯಿತು. ನಿರ್ಣಾಯಕ ಚುನಾವಣೆಯಲ್ಲಿ 223 ಶಾಸಕರು ಮತ ಚಲಾಯಿಸಿದರೆ ಇಬ್ಬರು ಸಂಸದರು ಗೈರಾಗಿದ್ದರು. ನಾಲ್ಕು ಮತಗಳು ತಿರಸ್ಕೃತಗೊಂಡಿದ್ದು, 219 ಮತಗಳು ಮಾನ್ಯವಾಗಿವೆ.

ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಪಲಾಯನ; ತುರ್ತು ಪರಿಸ್ಥಿತಿ ಘೋಷಣೆ

ಶ್ರೀಲಂಕಾ :ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾ (Sri Lanka Crisis) ಅಧ್ಯಕ್ಷ ಗೊಟಾಬಯ ರಾಜಪಕ್ಸೆ(Rajapaksa) ಅವರು ದೇಶದಿಂದ ಪಲಾಯನ ಮಾಡಿದ ಕೆಲವೇ ಗಂಟೆಗಳ ನಂತರ ಬುಧವಾರ ಅನಿರ್ದಿಷ್ಟ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.”ಅಧ್ಯಕ್ಷರು ದೇಶದಿಂದ ಹೊರಗಿರುವ ಕಾರಣ, ದೇಶದ ಪರಿಸ್ಥಿತಿಯನ್ನು ನಿಭಾಯಿಸಲು ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ” ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ವಕ್ತಾರ ದಿನೌಕ್ ಕೊಲಂಬಗೆ ತಿಳಿಸಿದ್ದಾರೆ.

ರಾಜಪಕ್ಸೆ ಅವರು ಮಿಲಿಟರಿ ವಿಮಾನದಲ್ಲಿ ಮಾಲ್ಡೀವ್ಸ್‌ಗೆ ಹಾರಿದ ನಂತರ ಹೆಚ್ಚುತ್ತಿರುವ ಪ್ರತಿಭಟನೆಗಳನ್ನು ತಡೆಯಲು ರಾಜಧಾನಿ ಕೊಲಂಬೊವನ್ನು ಒಳಗೊಂಡಿರುವ ಪಶ್ಚಿಮ ಪ್ರಾಂತ್ಯದಾದ್ಯಂತ ಅನಿರ್ದಿಷ್ಟ ಕರ್ಫ್ಯೂ ವಿಧಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸಾವಿರಾರು ಪ್ರತಿಭಟನಾಕಾರರು ಪ್ರೀಮಿಯರ್ ಕಛೇರಿಯ ಮೇಲೆ ಗುಂಪುಗೂಡಿದ್ದರು. ಕಾಂಪೌಂಡ್ ಅನ್ನು ಅತಿಕ್ರಮಿಸದಂತೆ ತಡೆಯಲು ಪೊಲೀಸರನ್ನು ಅಶ್ರುವಾಯು ಪ್ರಯೋಗಿಸಿದರು.

ಇದನ್ನು ಓದಿ : Samsung Smartphone Launch :ಸ್ಯಾಮ್ ಸಂಗ್ ನಿಂದ ಮತ್ತೆರಡು ಸ್ಮಾರ್ಟ್ ಫೋನ್ ಬಿಡುಗಡೆ

ಇದನ್ನೂ ಓದಿ : dangerous apps : ಸ್ಮಾರ್ಟ್​ಫೋನ್​ ಬಳಕೆದಾರರೇ ಎಚ್ಚರ : ನಿಮ್ಮ ಹಣವನ್ನು ಕದಿಯುತ್ತವೆ ಈ ಆ್ಯಪ್​ಗಳು

Ranil Wickremesinghe Elected Sri Lanka’s New President

Comments are closed.