Plastic Bottles :ನೀರು ಕುಡಿಯಲು ಪ್ಲಾಸ್ಟಿಕ್‌ ಬಾಟಲಿ ಉಪಯೋಗಿಸುತ್ತಿದ್ದರೆ ಈ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹುಷಾರ್‌!!

ಭಾರತದಲ್ಲಿ ಇತ್ತೀಚೆಗಷ್ಟೆ ಬ್ಯಾನ್‌ ಮಾಡಿದ ಸಿಂಗಲ್‌–ಯೂಸ್‌ (ಒಂದು ಸಲ ಮಾತ್ರ ಬಳಕೆಗೆ ಬರುವ) ಪ್ಲಾಸ್ಟಿಕ್‌ (Plastic) ನಂತರ ನಮ್ಮೆಲ್ಲರ ಗಮನ ದಿನನಿತ್ಯದ ಪ್ಲಾಸ್ಟಿಕ್‌ ಬಳಕೆಯ ಮೇಲೆ ಕೇಂದ್ರಿಕೃತವಾಗಿದೆ. ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳು ನಮ್ಮ ದೇಹಕ್ಕೆ ಹಾನಿಯುಂಟು ಮಾಡಬಲ್ಲದು. ಸಾಮಾನ್ಯವಾಗಿ ನಾವು ಎಲ್ಲರ ಕೈಯಲ್ಲೂ ಪ್ಲಾಸ್ಟಿಕ್‌ ಬಾಟಲಿ (Plastic Bottles) ಗಳಿರುವುದನ್ನು ನೋಡಿದ್ದೇವೆ. ಜನರು ನೀರು ಶೇಖರಿಸಲು ಉಪಯೋಗಿಸುವ ಅತಿ ಸಾಮಾನ್ಯ ಕಂಟೇನರ್‌ ಇದು.

ಅಗ್ಗದ ಬೆಲೆಯಲ್ಲಿ ಸುಲಭವಾಗಿ ದೊರಕುವ ಪ್ಲಾಸ್ಟಿಕ್‌ ಬಾಟಲಿಗಳು ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿವೆ. ಉನ್ನತ ದರ್ಜೆಯ ಪ್ಲಾಸ್ಟಿಕ್ ಗಳು ಬಳಕೆಗೆ ಯೋಗ್ಯವಾಗಿದ್ದರೂ, ಅವುಗಳು ಬಹಳಷ್ಟು ರಾಸಾಯನಿಕಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಒಯ್ಯುತ್ತದೆ. ಇದು ಪರಿಸರದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಆದರೆ ಪ್ಲಾಸ್ಟಿಕ್ ಬಾಟಲಿಗಳ ಅತಿಯಾದ ಬಳಕೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವೂ ಅವರಲ್ಲಿ ಒಬ್ಬರಾಗಿದ್ದರೆ ಇಂದೇ ನಿಮ್ಮ ಅಭ್ಯಾಸ ಬದಲಿಸಿಕೊಳ್ಳಿ. ಏಕೆಂದರೆ ಅದರಿಂದ ಸಾಕಷ್ಟು ಅಡ್ಡ ಪರಿಣಾಮಗಳಿವೆ.

ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಶೇಖರಿಸುವ ನೀರು ಹೇಗೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು?

  • ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ :
    ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಸಂಗ್ರಹಿಸದಂತೆ ಅಥವಾ ಕುಡಿಯದಂತೆ ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ಏಕೆಂದರೆ ಪ್ಲಾಸ್ಟಿಕ್‌ನಿಂದ ಅನೇಕ ಹಾನಿಕಾರಕ ರಾಸಾಯನಿಕಗಳು ನಮ್ಮ ದೇಹಕ್ಕೆ ಸೇರುತ್ತವೆ ಮತ್ತು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ, ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ.
  • ಯಕೃತ್ತಿನ ಕ್ಯಾನ್ಸರ್ :
    ಪ್ಲಾಸ್ಟಿಕ್‌ನಲ್ಲಿರುವ ಥಾಲೇಟ್ಸ್ ಎಂಬ ರಾಸಾಯನಿಕವು ಇದು ಯಕೃತ್ತಿನ ಕ್ಯಾನ್ಸರ್ ಗೆ ಕಾರಣವಾಗಬಹುದು. ಫ್ರೆಡೋನಿಯಾದಲ್ಲಿನ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ನಡೆಸಿದ ಇತ್ತೀಚಿನ ಅಧ್ಯಯನದಿಂದ ಬಾಟಲಿ ನೀರಿನಲ್ಲಿ, ವಿಶೇಷವಾಗಿ ಜನಪ್ರಿಯ ಬ್ರಾಂಡ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಮೈಕ್ರೋಪ್ಲಾಸ್ಟಿಕ್‌ಗಳಿವೆ ಎಂದು ತಿಳಿದುಬಂದಿದೆ.
  • BPA ಯ ಉತ್ಪಾದನೆ:
    ಈಸ್ಟ್ರೊಜೆನ್ ಅನುಕರಿಸುವ ರಾಸಾಯನಿಕವಾಗಿರುವ ಬೈಫಿನೈಲ್ A ನಂತಹ ರಾಸಾಯನಿಕಗಳು ಮಧುಮೇಹ, ಸ್ಥೂಲಕಾಯತೆ, ಫಲವತ್ತತೆಯ ಸಮಸ್ಯೆಗಳು, ನಡವಳಿಕೆಯ ಸಮಸ್ಯೆಗಳು ಮತ್ತು ಹುಡುಗಿಯರಲ್ಲಿ ಅವಧಿಗೂ ಮುಂಚಿನ ಪ್ರೌಢಾವಸ್ಥೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ಲಾಸ್ಟಿಕ್ ಬಾಟಲಿಯಿಂದ ನೀರನ್ನು ಸಂಗ್ರಹಿಸಿ ಕುಡಿಯದೇ ಇರುವುದು ಉತ್ತಮ.

ಇದನ್ನೂ ಓದಿ : Bloating Problem:ಹೊಟ್ಟೆ ಉಬ್ಬರಿಸುತ್ತದೆಯೇ? ಈ 7 ಆಹಾರಗಳನ್ನು ಸೇವಿಸಲೇಬೇಡಿ

  • ಡಯಾಕ್ಸಿನ್ ಉತ್ಪಾದನೆ:
    ಸೂರ್ಯನಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ, ಪ್ಲಾಸ್ಟಿಕ್ ಬಾಟಲಿಗಳು ರಾಸಾಯನಿಕಗಳ ಬಿಡುಗಡೆಗೆ ಕಾರಣವಾಗಬಹುದು. ಡಯಾಕ್ಸಿನ್‌ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಪ್ಲಾಸ್ಟಿಕ್‌ ಬಾಟಲಿಗಳಿಂದ ದೂರವಿರಿ
ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುವ ಹೊರತಾಗಿ, ಪ್ಲಾಸ್ಟಿಕ್ ಬಾಟಲಿಗಳು ಪರಿಸರಕ್ಕೂ ಒಳ್ಳೆಯದಲ್ಲ. ಹೆಚ್ಚಿನ ಪ್ಲಾಸ್ಟಿಕ್ ತ್ಯಾಜ್ಯವು ಭೂಮಿ ಮತ್ತು ಜಲಮೂಲಗಳಿಗೆ ಹೋಗಿ ಕೊನೆಗೊಳ್ಳುತ್ತವೆ. ಹಾಗೆ ಸೇರಿದ ಪ್ಲಾಸ್ಟಿಕ್‌ಗಳು ಸಮುದ್ರ ಜೀವಿಗಳ ಮೇಲೂ ಅಡ್ಡಿಪಡಿಪರಿಣಾಮ ಬೀರುತ್ತವೆ. ಇದರಿಂದ ಭೂ ಮಾಲಿನ್ಯವನ್ನು ಉಂಟಾಗುತ್ತದೆ. ಸ್ಟೀಲ್ ಫ್ಲಾಸ್ಕ್‌ಗಳು, ಗಾಜಿನ ಬಾಟಲಿಗಳು, ಸ್ಟೇನ್‌ಲೆಸ್ ಸ್ಟೀಲ್ ಬಾಟಲಿಗಳು ಅಥವಾ ಅಲ್ಯೂಮಿನಿಯಂ ಬಾಟಲಿಗಳು, ಮರುಬಳಕೆ ಮಾಡಬಹುದಾದ ಮತ್ತು ಪರಿಸರಕ್ಕೂ ಹಾನಿಯುಂಟು ಮಾಡದಂತಹ ವಸ್ತುಗಳನ್ನೇ ಆಯ್ದು ಕೊಳ್ಳುವುದು ಉತ್ತಮ. ಆದಷ್ಟು ಪ್ಲಾಸ್ಟಿಕ್‌ ಬಾಟಲಿಗಳನ್ನು ಉಪಯೋಗಿಸುವುದನ್ನು ಕಡಿಮೆ ಮಾಡಿ, ಆರೋಗ್ಯ ಮತ್ತು ಪರಿಸರ ಎರಡನ್ನೂ ಕಾಪಾಡುವದೇ ಜಾಣತನ.

ಇದನ್ನೂ ಓದಿ : Loan Apps : ಸಾಲ ಕೊಡುವ ಆಪ್‌ಗಳಲ್ಲಿ ಅಸಲಿ ಎಷ್ಟು, ನಕಲಿ ಎಷ್ಟು? ಎಚ್ಚರ ತಪ್ಪಿದರೆ ನಷ್ಟ ನಿಮಗೇ!

(Plastic Bottles for drinking water beware of side effects)

Comments are closed.