Russia vs Ukraine: ಅಧಿಕೃತವಾಗಿ ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು(Russia vs Ukraine) ಘೋಷಿಸಿದ್ದು ಅಧಿಕೃತವಾಗಿ ರಷ್ಯಾ  ಉಕ್ರೇನ್ ವಿರುದ್ಧ ಯುದ್ಧ (Russia Ukraine War Declare) ಆರಂಭವಾದಂತಾಗಿದೆ. ಆದರೆ ಈ ಮಿಲಿಟರಿ ಕಾರ್ಯಾಚರಣೆಯಲ್ಲಿ ಪೂರ್ವ ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪ್ರದೇಶವಾದ ಡೊನ್ಬಾಸ್ ಅನ್ನು ರಕ್ಷಿಸಲು ರಷ್ಯನ್ ಪಡೆಗಳಿಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಸೂಚನೆ ನೀಡಿದ್ದಾರೆ.

ರಷ್ಯಾದ ರಾಷ್ಟ್ರೀಯ ದೂರದರ್ಶನದಲ್ಲಿ ಪ್ರಸಾರವಾದ ಭಾಷಣದಲ್ಲಿ, ಪುಟಿನ್ ಉಕ್ರೇನಿಯನ್ ಪಡೆಗಳು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗುವಂತೆ ಒತ್ತಾಯಿಸಿದರು, ಸಂಭವನೀಯ ರಕ್ತಪಾತದ ಎಲ್ಲಾ ಜವಾಬ್ದಾರಿಯು ಸಂಪೂರ್ಣವಾಗಿ ಉಕ್ರೇನ್ ಸರ್ಕಾರದ ಆತ್ಮಸಾಕ್ಷಿಯ ಮೇಲಿರುತ್ತದೆ ಎಂದು ಹೇಳಿದರು. ರಷ್ಯಾದ ಸೇನಾ ಕಾರ್ಯಾಚರಣೆಯು ಉಕ್ರೇನ್‌ನ “ಸೈನ್ಯೀಕರಣ” ವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್ ರಷ್ಯಾಕ್ಕೆ ಬೆದರಿಕೆಯನ್ನು ಒಡ್ಡುವುದಿಲ್ಲ ಎಂದು ಹೇಳಿದ ನಂತರವೂ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಉಕ್ರೇನ್ ಮೇಲೆ ಅಧಿಕೃತವಾಗಿ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಗುರುವಾರ ಬೆಳಗ್ಗೆ ಉಕ್ರೇನ್ ತನ್ನ ವಾಯುಪ್ರದೇಶದಲ್ಲಿ ನಾಗರಿಕ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಡ್ನಿಪ್ರೊ, ಖಾರ್ಕಿವ್ ಮತ್ತು ಝಪೊರಿಝಿಯಾದಲ್ಲಿನ ಮೂರು ವಿಮಾನ ನಿಲ್ದಾಣಗಳನ್ನು ಸಂಚಾರಕ್ಕೆ ಮುಚ್ಚಲಾಗಿದೆ. ಉಕ್ರೇನ್‌ನ ಪೂರ್ವ ಗಡಿಯ ಸಮೀಪವಿರುವ ರೋಸ್ಟೋವ್‌ನ ಸುತ್ತಮುತ್ತ ನಾಗರಿಕ ವಾಯುಪ್ರದೇಶವನ್ನು ಮುಚ್ಚಲು ರಷ್ಯಾ ಆದೇಶ ನೀಡಿದೆ ಎಂದು US ನೋಟಿಸ್‌ ಟು ಏರ್‌ಮೆನ್ (NOTAM) ಸೇವೆ ವರದಿ ಮಾಡಿದ ನಂತರ ಉಕ್ರೇನ್ ಈ ಕ್ರಮ ಕೈಗೊಂಡಿದೆ.

ಉಕ್ರೇನ್ ಮೇಲೆ ರಷ್ಯಾ ಘೋಷಿಸಿದ್ದ ಮಿಲಿಟರಿ ಕಾರ್ಯಾಚರಣೆಯಿಂದ ಉಂಟಾಗುವ ಎಲ್ ಹಾನಿಗಳಿಗೆ ರಷ್ಯಾವೇ ನೇರ ಹೊಣೆಯೆಂದು ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಕೆ ನೀಡಿದ್ದಾರೆ. ಅವರು ರಷ್ಯಾಕ್ಕೆ “ಯುದ್ಧದ ಪರಿಣಾಮಗಳ” ಕುರಿತು ಗುರುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದಾಗಿ ಘೋಷಿಸಿದರು ಮತ್ತು ಅದರ ಕ್ರಮಗಳಿಗಾಗಿ ಜಗತ್ತು “ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ

(Russia vs Ukraine military operation declared by Vladimir Putin)

Comments are closed.