Konark Temple : ಶ್ರೀಕೃಷ್ಣ ಪುತ್ರ ನ ರೋಗ ವಾಸಿ ಮಾಡಿತ್ತು ಈ ದೇವಾಲಯ – ಕೋನಾರ್ಕ್‌ ನಲ್ಲಿ ಕಾಣಬಹುದು ವಿಜ್ಞಾನ ವಿಸ್ಮಯ

Konark Temple : ಸೂರ್ಯ ಜಗತ್ತಿಗೆ ಬೆಳಕು ನೀಡುವಾತ. ಸೂರ್ಯನಿಲ್ಲದ ಒಂದು ದಿನವನ್ನು ನಾವು ಕಲ್ಪಿಸೋಕೆ ಸಾಧ್ಯವಿಲ್ಲ. ಒಂದು ವೇಳೆ ಈ ಸೂರ್ಯನಿಲ್ಲದಿದ್ರೆ ಇಡೀ ಭೂಮಿಯೇ ನಾಶವಾಗಿ ಬಿಡುತ್ತೆ. ಅಕ್ಕಾಗಿಯೇ ಇರಬೇಕು ನಮ್ಮ ಧರ್ಮದಲ್ಲಿ ಸೂರ್ಯನಿಗೆ ದೇವರ ಸ್ಥಾನ ನೀಡಲಾಗಿದೆ. ಮುಂಜಾನೆ ಎದ್ದ ತಕ್ಷಣ ಸೂರ್ಯ ನಮಸ್ಕಾರ  ಮಾಡುವ ಪದ್ದತಿ ನಮ್ಮಲ್ಲಿದೆ. ಹಲವು ರೋಗಗಳಿಗೆ ಸೂರ್ಯನೇ ಪರಿಹಾರ ಅನ್ನೋದನ್ನ ವಿಜ್ಞಾನ ಕೂಡಾ ಒಪ್ಪಿಕೊಂಡಿದೆ . ಇಂತಹ  ಹಲವು ಮಾತುಗಳಿಗೆ ಸಾಕ್ಷಿಯಂತಿದೆ

ಈ ದೇವಾಲಯ ಇದು ಸಾಮಾನ್ಯವಾದ ದೇವಾಲಯವಲ್ಲ. ಈ ದೇವಾಲಯಕ್ಕೆ ೧೦೦೦ ವರ್ಷಗಳ ಇತಿಹಾಸವಿದೆ. ಇದು ಕಲೆ, ವಿಜ್ಞಾನ ಹಾಗೂ ಭಕ್ತಿಯ ಸಮ್ಮಿಲನವಾದ ದೇವಾಲಯ. ಇಲ್ಲಿ ಅಗ್ರ ಪೂಜೆ ಸಲ್ಲೋದು ಸೂರ್ಯನಾರಾಯಣನಿಗೆ ಅನ್ನೋದೆ ವಿಶೇಷ. ಯಾಕಂದ್ರೆ ಇದು  ಕೋನಾರ್ಕ್‌ ನಲ್ಲಿರುವ ಸೂರ್ಯನ ದೇವಾಲಯ. ಇನ್ನು ಕೋನ್‌ ಅಂದ್ರೆ ದೃಷ್ಟಿ ಹಾಗೂ ಆರ್ಕ್‌ ಅಂದ್ರೆ ಸೂರ್ಯ ಅನ್ನೋ  ಅರ್ಥ ಇದೆ. ಹೀಗಾಗಿ ಕೋನಾರ್ಕ್‌ ಅನ್ನೋ ಹೆಸರು ಬಂತು ಅಂತ ಹೇಳಲಾಗುತ್ತೆ

ಇನ್ನು ಈ ದೇವಾಲಯದ ವೈಶಿಷ್ಟ್ಯಗಳ ಬಗ್ಗೆ ಹೇಳೋದಾದ್ರೆ ಒಂದೆರಡಲ್ಲ. ಇಲ್ಲಿ ಪ್ರತಿಯೊಂದು ಕಲ್ಲು ಒಂದೊಂದು ಕಥೆಯನ್ನು ಹೇಳುತ್ತೆ.  ಮೊದಲಿಗೆ ಹೇಳೋದಾದ್ರೆ  ಈ ದೇವಾಲಯವನ್ನು ಸೂರ್ಯದೇವ ೭ ಕುದುರೆಗಳ  ರಥದಲ್ಲಿ ಇರುವಂತೆ ಬಿಂಬಿಸುವ ರೀತಿಯಲ್ಲಿ ಇದನ್ನು ಕೆತ್ತಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೇವಾಲಯದ ಮುಂಬಾಗದಲ್ಲಿ ೭ ಕುದುರೆಗಳ ಶಿಲ್ಪಗಳಿವೆ. ಇದು ವಾರದ ಏಳು ದಿನಗಳ ಸಂಕೇತ ಅಂತಾನೂ ನಂಬಲಾಗುತ್ತೆ.  ಜೊತೆಗೆ ೭ ಬಣ್ಣಗಳಿಂದ  ಆದ ಒಂದು ಸೂರ್ಯನ ಕಿರಣ ಅಂತನೂ ಹೇಳಲಾಗುತ್ತೆ.  

 ಇನ್ನು ಈ ದೇವಾಲಯದ ಸುತ್ತಲಿರುವ  ೨೪ ಚಕ್ರಗಳು ಇಲ್ಲಿನ ಮತ್ತೊಂದು ವಿಶೇಷ.  ಇಲ್ಲಿ ಸೂರ್ಯನ ಚಲನೆಗೆ ಅನುಸಾರವಾಗಿ ಚಕ್ರದ ಮೇಲೆ ಬೆಳಕು ಬೀಳುತ್ತೆ. ಇದರಿಂದ ನಾವು ನಿರ್ಧಿಷ್ಟವಾಗಿ ಸಮಯವನ್ನು ತಿಳಿಬಹುದು ಅಂತಾರೆ ಇಲ್ಲಿಗೆ ಬರುವ  ಜನರು. ಇದನ್ನು ಹೊರತು ಪಡಿಸಿ  ಇನ್ನೊಂದು ಅಚ್ಚರಿ ಇದೆ , ಅದೇನಂದ್ರೆ  ಈ ದೇವಾಲಯ ಪೂರ್ವಕ್ಕೆ ಮುಖಮಾಡಿದ್ದು ಇಲ್ಲಿ  ಬೀಳುವ ಸೂರ್ಯನ ಮೊದಲ ಕಿರಣ  ಗರ್ಭಗೃಹದ ವಿಗ್ರಹದ ಮೇಲೆಯೇ ಬೀಳುತ್ತೆ ಹೀಗಾಗಿ ಸೂರ್ಯನಿಗೆ ಪ್ರತಿ ಮುಂಜಾನೆ ಸೂರ್ಯನಿಂದಲೇ ಸೂರ್ಯಾರತಿ ಆಗುತ್ತೆ ಅನ್ನೋದೆ ವಿಶೇಷ .

ಕೇವಲ ಇಷ್ಟು ಮಾತ್ರವಲ್ಲ , ಈ ದೇವಾಲಯದ ಶಿಲ್ಪಗಳು ಮನುಷ್ಯ ಜೀವನವನ್ನು ಕೂಡಾ ಪ್ರತಿನಿಧಿಸುತ್ತವೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈ ದೇವಾಲಯದಲ್ಲಿ ಮೂರು ಸೂರ್ಯನ ಮೂರ್ತಿಗಳನ್ನು ನಾವು ಕಾಣಬಹುದು . ಮೊದಲನೆಯದು ಉದಯಕಾಲದ ಸೂರ್ಯ, ಇದು ಬಾಲ್ಯವನ್ನು ಪ್ರತಿನಿಧಿಸಿದರೆ , ಮಧ್ಯಾಹ್ನದ ಸೂರ್ಯ ಯೌವನದ ಗಂಭೀರ ಭಾವವನ್ನು ಪ್ರತಿಬಿಂಬಿಸುತ್ತೆ . ಇನ್ನು ಕೊನೆಯದಾಗಿ ಅಸ್ತಮದ ಸೂರ್ಯ, ನಮ್ಮ ಜೀವನದ ಅಸ್ತಮದ ಘಟ್ಟವಾದ ವೃದ್ಧಾಪ್ಯವನ್ನು ಸೂಚಿಸುತ್ತೆ. ಇನ್ನು ದೇವಾಲಯದ ಸುತ್ತಲ ಕೆತ್ತನೆಗಳು ಕೂಡಾ ಇದನ್ನೆ ಹೇಳುತ್ತೆ. ದೇವಾಲಯದ ತಳಭಾಗದಲ್ಲಿ ಮಕ್ಕಳಿಗೆ ಇಷ್ಟವಾದ ಪ್ರಾಣಿಗಳ ಚಿತ್ರವನ್ನು ಕೆತ್ತಲಾಗಿದೆ. ಅದರ ಸ್ವಲ್ಪ ಮೇಲೆ ಸಂಗೀತ ,ನೃತ್ಯದ ಶಿಲ್ಪಕಲೆಗಳಿವೆ. ಅದಕ್ಕಿಂತ ಕೊಂಚ ಮೇಲೆ ಶೃಂಗಾರದ ಶಿಲ್ಪವನ್ನು ಕಾಣಬಹುದು. ಇದು ನಮ್ಮ ಯೌವನದ ಪ್ರತೀಕ. ಇನ್ನು ಗೊಪುರದ ಭಾಗದಲ್ಲಿ ದೇವಾನು ದೇವತೆಗಳ ಚಿತ್ರವಿದೆ, ಇದು ವಾನಪ್ರಸ್ಥದ ಸೂಚನೆ ನೀಡುತ್ತವೆ ಅನ್ನೋದು ವಿದ್ವಾಂಸರ ಅಭಿಪ್ರಾಯ.

 ಇನ್ನು ಇಲ್ಲಿನ ಚಿತ್ರಗಳು ಮನುಷ್ಯನ ಮನಸ್ಥಿತಿಯ ಬಗ್ಗೆಯೂ ಬೆಳಕು ಚೆಲ್ಲುತ್ತವೆ. ಇಲ್ಲಿ ಮನುಷ್ಯನ ಶಿಲ್ಪದ ಮೇಲೆ ಮಲಗಿರು ಆನೆ, ಆನೆಯನ್ನು ಮಧಿಸುತ್ತಿರು ಸಿಂಹ ಮನುಷ್ಯನ ದರ್ಪ ಅಹಂಕಾರಗಳ ಪರಿಚಯ ಮಾಡುತ್ತೆ. ಸಿಂಹ ಬಲವನ್ನು ಸೂಚಿಸಿದ್ರೆ , ಆನೆ ಸಂಪತ್ತನ್ನು ಪ್ರತಿನಿಧಿಸುತ್ತೆ. ಇದೆರಡರ ಸಂಘ ಮನುಷ್ಯನ ಅಧಪತನಕ್ಕೆ ದಾರಿ ಅನ್ನೋದಾಗಿದೆ .

ಈ ದೇವಾಲಯ ಇತಿಹಾಸಕ್ಕೆ ಬರೋದಾದ್ರೆ ಈ ದೇವಾಲಯವನ್ನು ಗಂಗ ಅರಸ ನರಸಿಂಹ ದೇವ ಕ್ರಿ.ಶ ೧೨೫೦ ರ ಕಟ್ಟಿಸಿದ್ದ ಎನ್ನಲಾಗುತ್ತೆ. ಆತನಿಗೆ  ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಆತನ ಗುರುಗಳು  ಸೂರ್ಯದೇವಾಲಯವನ್ನು ಕಟ್ಟುವಂತೆ ಸಲಹೆ ನೀಡಿದ್ರಂತೆ.  ಅದರಂತೆ ೧೨ ಸಾವಿರ ಕಾರ್ಮಿಕರ ಸಹಾಯದಿಂದ ಇದನ್ನು ಕಟ್ಟಿಸಲಾಯಿತು. ಆದ್ರೆ ಇನ್ನೊಂದು ಕಥೆಯ ಪ್ರಕಾರ  ೧೨ ಸಾವಿರ ಕಾರ್ಮಿಕರು ಇದರೂ ಇದರ ಕಲಶವನ್ನು ನಿಲ್ಲಿಸಲಾಗಿರಲಿಲ್ಲ. ಆದರೆ ಅಲ್ಲಿನ ಶಿಲ್ಪಿಯೊಬ್ಬನ ಪುತ್ರ ೧೨ ವರ್ಷ ಪ್ರಾಯದ   ಧರ್ಮ ಎಂಬಾತ  ಕಲಶವನ್ನು ನಿರ್ಮಿಸಿದ ಅಂತ ಹೇಳಲಾಗುತ್ತೆ. ಆದ್ರೆ ಇದು ರಾಜನಿಗೆ ತಿಳಿದ್ರೆ ೧೨೦೦  ಮಂದಿಯ ಪ್ರಾಣಹರಣವಾಗುತ್ತೆ ಅಂತ ತಿಳಿದ ಆತ   ಹತ್ತಿರದ ನದಿಗೆ ಹಾರಿ ಪ್ರಾಣ ಬಿಟ್ಟ ಅಂತ ಹೇಳಲಾಗುತ್ತೆ.

 ಇನ್ನು ಈ ದೇವಾಲಯವನ್ನು ದ್ವಾಪರದಲ್ಲಿನ ಕೃಷ್ಣನ ಪುತ್ರನ ಜೊತೆಗೂ ತಳುಕು ಹಾಕಲಾಗುತ್ತೆ. ಕೃಷ್ಣ ಪುತ್ರ ಸಾಂಬ  ಕೃಷ್ಣನಿಂದಲೇ ಶಾಪಕ್ಕೆ ತುತ್ತಾಗಿ ರೋಗಿಷ್ಟ ಹಾಗೂ  ಕುರೂಪಿಯಾಗಿ  ಹೋಗಿದ್ದ. ಆಗ ಅದರ ಪರಿಹಾರವಾಗಿ ಸೂರ್ಯ ದೇವನಿಗೆಪೂಜೆ ಸಲ್ಲಿಸುವಂತೆ ನಾರದರು ಸಾಂಬನಿಗೆ ಸಲಹೆ ನೀಡಿದ್ರು .ಅದರಂತೆ ಸಾಂಬ ಕೋನಾರ್ಕ್‌ ಗೆ ಬಂದು ಸೂರ್ಯಾರಾಧನೆಯಲ್ಲಿ ತೊಡಗಿ ಮುಂದೆ  ಶಾಪ ಮುಕ್ತ ನಾದ ಅನ್ನೋ ಕಥೆ ಇದೆ. ಶಾಪ ಮುಕ್ತಿ ಹೊಂದಿದ ಕಾರಣ ಅಲ್ಲೇ ಒಂದು ಸೂರ್ಯ ಮಂದಿರ ಸ್ಥಾಪಿಸಿದ  ಮುಂದೆ ಅದನ್ನೇ ರಾಜ ನರಸಿಹ ದೇವ ದೊಡ್ಡದಾಗಿ ನಿರ್ಮಾಣ ಮಾಡಿದ ಅನ್ನೋ ನಂಬಿಕೆ ಇದೆ.

ಇನ್ನು ದೇವಾಲಯದ ಮೂರ್ತಿಯ ಬಗ್ಗೆ ಹೇಳೋದಾದ್ರೆ ಹಿಂದೆ ಸೂರ್ಯದೇವನ  ವಿಗ್ರಹ ಗಾಳಿಯಲ್ಲಿ ತೇಲುತ್ತಿತಂತೆ . ಇದಕ್ಕೆ ಕಾರಣ ಇಲ್ಲಿನ ಗೋಪುರದಲ್ಲಿದ್ದ ದೊಡ್ಡ ಅಯಸ್ಕಾಂತ. ಆದ್ರೆ ಈ ಅಯಸ್ಕಾಂತ  ಪಕ್ಕದ ಸಮುದ್ರದಲ್ಲಿ ಬರುತ್ತಿದ್ದ ಪ್ರೆಂಚ್‌ ವ್ಯಾಪಾರಿಗಳ ದಿಕ್ಕು ತಪ್ಪಿಸುತ್ತಿತ್ತಂತೆ ಹೀಗಾಗಿ ಅವರು ಇದನ್ನು  ದ್ವಂಸ ಮಾಡಿದ್ರು ಎನ್ನಲಾಗುತ್ತೆ. ಅಂದಹಾಗೆ ಈ ದೇವಾಲು ಇರೋದು ಒರಿಸ್ಸಾದ ಕೋನಾರ್ಕ್‌ ನಲ್ಲಿ. ಇಲ್ಲಿಗೆ ಹೋಗೋಕೆ ಟ್ರೈನ್‌ ಅಥವಾ ವಿಮಾನ ಹಿಡಿಬೇಕು. ಸದ್ಯ ಶಿಥಿಲಾವಸ್ಥೆಗೆ ತಲುಪಿರೋ ದೇವಾಲಯ, ಯನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯನ್ನು ಸೇರಿದೆ.  ಸಾಧ್ಯ ಆದ್ರೆ ಒಂದು ಬಾರಿ ಇಲ್ಲಿಗೆ ಭೇಟಿ ನೀಡಿ ನಮ್ಮ ಹಿರಿಯರ ಜ್ಞಾನವನ್ನು ತಿಳಿದು ಕೊಳ್ಳಿ.

ಇದನ್ನೂ ಓದಿ : ಬೆರಳ ತುದಿಯಲ್ಲಿ ಹಿಡಿದಿದ್ದಾಳೆ ಡ್ಯಾಂ : ಆಣೆಕಟ್ಟು ಕಾಯೋಕೆ ನಿಂತಿದ್ದಾಳೆ ಕಣಿವೆ ಮಾರಮ್ಮ

ಇದನ್ನೂ ಓದಿ : ತಿರುಮಲ ತಿರುಪತಿ ದರ್ಶನ ಮಾಡಲು ಸದವಕಾಶ; ಟಿಕೆಟ್‌ಗಳ ಸಂಖ್ಯೆ ಹೆಚ್ಚಿಸಲಿರುವ ಟಿಟಿಡಿ

(Sun Temple In Konark Odisha)

Comments are closed.