Russia vs Ukraine War : ರಷ್ಯಾ ಉಕ್ರೇನ್ ಯುದ್ಧ: ಭಾರತೀಯರ ಮೇಲೆ ಏನೇನು ಪರಿಣಾಮವಾಗಲಿದೆ?

ರಷ್ಯಾ ಮತ್ತು ಉಕ್ರೆನ್ ನಡುವೆ ಯುದ್ಧ ಆರಂಭವಾಗಿಬಿಟ್ಟಿದೆ. (Russia vs Ukraine War) ಇದು ಕೇವಲ ಈ ಎರಡು ದೇಶಗಳ ಮೇಲಷ್ಟೇ ಅಲ್ಲದೇ ಜಾಗತಿಕವಾಗಿ ಹಲವು ದೇಶಗಳ ಮೇಲೆ ಪರಿಣಾಮ ಬೀರುವುದು ಖಚಿತವಾಗಿದೆ. ಈಗಾಗಲೇ ಭಾರತದ ಷೇರು ಮಾರುಕಟ್ಟೆ ಕುಸಿತಗೊಂಡಿದೆ. ತೈಲ ಬೆಲೆ (Oil Price Hike) ವಿಪರೀತ ಹೆಚ್ಚಲ್ಪಟ್ಟಿದೆ.

ರಷ್ಯಾವು ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿರುವುದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಹೆಚ್ಚಳಕ್ಕೆ ಕಾರಣವಾಗವುದು ಖಚಿತವಾಗಿದೆ. ಈಗಾಗಲೇ ಅಂತರಾಷ್ಟ್ರೀಯ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆಯು ಎರಿಕೆಯಾಗುವುದು ಖಚಿತವಾದಂತಾಗಿದೆ.

ಅಂದಹಾಗೆ ಆಹಾರ ಪೂರೈಕೆಯಲ್ಲೂ ಸಹ ವ್ಯತ್ಯಯ ಉಂಟಾಗುವ ಕುರಿತು ವರದಿಯಾಗಿದೆ. ಭಾರತವು ರಷ್ಯಾ ದೇಶದಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಗೋಧಿಯನ್ನು ಆಮದು ಮಾಡಿಕೊಳ್ಳುತ್ತದೆ. ಈ ಯುದ್ಧದಿಂದ ಭಾರತಕ್ಕೆ ಆಮದಾಗುವ ಗೋಧಿಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಿಂದ ಗೋಧಿ ಬೆಲೆ ಭಾರತದಲ್ಲಿ ಏರುಮುಖವಾಗುವ ಸಾಧ್ಯತೆಯಿದೆ.

ಮೊಬೈಲ್ ಫೋನ್‌ಗಳ ತಯಾರಿಕೆಯಲ್ಲಿ ಪಲ್ಲಾಡಿಯಂ ಎಂಬ ಲೋಹವನ್ನು ಬಳಸುತ್ತಾರೆ. ಈ ಲೋಹವು ರಷ್ಯಾದಲ್ಲಿ ಸಿಗುತ್ತಿದ್ದು ಉಕ್ರೇನ್ ಮೇಲಿನ ಯುದ್ಧದಿಂದ ಮೊಬೈಲ್–ಸ್ಮಾರ್ಟ್‌ಫೋನ್‌ಗಳ ಮೇಲಿನ ಬೆಲೆ ಏರಿಕೆಯಾಗುವ ಸಂಭವವಿದೆ.

ಇಷ್ಟೇ ಅಲ್ಲದೇ ಜನಸಾಮಾನ್ಯರು ಬಳಸುವ ದಿನನಿತ್ಯದ ಅಗತ್ಯತೆಗಳಾದ ಎಣ್ಣೆ ತೈಲ ಮುಂತಾದ ಬೆಲೆಗಳು ಸಹ ಏರಿಕೆಯಾಗುವ ಎಲ್ಲ ಲಕ್ಷಣಗಳಿವೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಸ್ಥಿತಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ (India Share Market) ತತ್ತರಿಸಿದೆ. ಮುಂಬೈ ಷೇರುಪೇಟೆ (Mumbai Share market) ಸೂಚ್ಯಂಕ ಸೆನ್ಸೆಕ್ಸ್ (index Sensex) ಇಂದು ಗುರುವಾರ 1850 ಅಂಶಗಳ ಬೃಹತ್ ಪ್ರಮಾಣದ ಕುಸಿತದ ಮೂಲಕ ದಿನವನ್ನು ಆರಂಭಿಸಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ (Bombay Stock Exchange) ನ ಈ ಸೂಚ್ಯಂಕವು 1430 ಅಂಕಗಳ ಕುಸಿತದೊಂದಿಗೆ 55,802 ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ. ಅಇದರ ಜೊತೆಗೆ ಕಚ್ಚಾ ತೈಲ ದರ ಬೆಲೆಯು 100 ಯುಎಸ್​ಡಿದಾಟಿದೆ. ಅಷ್ಟೇ ಅಲ್ಲದೇ ರಷ್ಯಾ ಉಕ್ರೇನ್ ಯುದ್ಧದ ಪ್ರಭಾವ ಚಿನ್ನದ ಬೆಲೆಯ ಮೇಲೂ ಆಗಿದ್ದು ಹಳದಿ ಲೋಹದ ಬೆಲೆ ಏರಿಕೆ ಆಗಿದೆ.

ಇದನ್ನೂ ಓದಿ: Russia Ukraine War: ದೇಶದ ಜನರನ್ನುದ್ದೇಶಿಸಿ ಉಕ್ರೇನ್‌ ಅಧ್ಯಕ್ಷರ ಭಾವನಾತ್ಮಕ ಭಾಷಣ; ಚಿನ್ನ, ತೈಲ ದರದಲ್ಲಿ ಭಾರಿ ಏರಿಕೆ, ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ

(Russia vs Ukraine War whats effect of Indians)

Comments are closed.