Keerthy Suresh : ಸೋಲಿನಿಂದ ಕಂಗೆಟ್ಟ ಸೌತ್ ನಟಿಗೆ ಸಖತ್ ಅಫರ್, ಹೊಂಬಾಳೆ ನೆಕ್ಸ್ಟ್ ಮೂವಿಗೆ‌ ಕೀರ್ತಿ ಸುರೇಶ್ ನಾಯಕಿ

ಸಾಲು ಸಾಲು ಸಿನಿಮಾ ಸೋಲಿನಿಂದ ಕಂಗೆಟ್ಟಿದ್ದ ನಟಿ ಕೀರ್ತಿ ಸುರೇಶ್ ಗೆ (Keerthy Suresh) ಇತ್ತೀಚಿಗೆ ರಿಲೀಸ್ ಆಗಿರೋ ಸಿನಿಮಾ ಸರ್ಕಾರು ವಾರಿ ಪಾಟ ಕೊಂಚ ಹೆಸರು ತಂದಿದೆ. ಒಂದೊಳ್ಳೆ ಗೆಲುವು ಎಂಬಂತೆ ಸರ್ಕಾರು ವಾರಿ ಪಾಟ ಸಿನಿಮಾ ಪ್ರದರ್ಶನ ಕಂಡಿದೆ. ಇದರ ಬೆನ್ನಲ್ಲೇ ಕೀರ್ತಿ ಸುರೇಶ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದು, ಕೀರ್ತಿ ಸುರೇಶ್ ತಮ್ಮ ಮುಂದಿನ ಸಿನಿಮಾಗಾಗಿ ಕನ್ನಡದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಜೊತೆ ಸೇರಿದ್ದಾರಂತೆ.

ಕನ್ನಡದಲ್ಲಿ ವಿಜಯ್ ಕಿರಂಗದೂರು ಸಾರಥ್ಯದಲ್ಲಿ ಕೆಜಿಎಫ್ ನಂತಹ ಸಿನಿಮಾ ನೀಡಿದ ಹೊಂಬಾಳೆ ಸಂಸ್ಥೆ ಈಗ ಕನ್ನಡವನ್ನು ದಾಟಿ ಇತರ ಭಾಷೆ ಸಿನಿಮಾಗಳ ನಿರ್ಮಾಣಕ್ಕೂ ಮನಸ್ಸು ಮಾಡಿದೆ. ಹೀಗಾಗಿ ಹೊಂಬಾಳೆ ಫಿಲ್ಸ್ಮ್ ಕಾಲಿವುಡ್ ನಲ್ಲಿ ನಿರ್ಮಿಸುತ್ತಿರುವ ಸಿನಿಮಾವೊಂದಕ್ಕೆ ಕೀರ್ತಿ ಸುರೇಶ್ ನಾಯಕಿ ಎನ್ನಲಾಗ್ತಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಹೊಂಬಾಳೆ ಫಿಲ್ಮ್ಷ್ ಈಗಾಗಲೇ‌ ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಮಲೆಯಾಳಂನಲ್ಲೂ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಈಗ ತಮಿಳಿನಲ್ಲಿ ಬಿಗ್ ಬಜೆಟ್ ಸಿನಿಮಾ ವೊಂದನ್ನು ನಿರ್ಮಿಸಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದ್ದು ಇದಕ್ಕೆ ಸುಧಾ‌ಕೊಂಗರ್ ನಿರ್ದೇಶನವಿದೆ. ಇದೇ ಸಿನಿಮಾಕ್ಕೆ ಕೀರ್ತಿ ಸುರೇಶ್ ನಾಯಕಿ ಎನ್ನಲಾಗ್ತಿದೆ. ನಿರ್ದೇಶಕಿ ಸುಧಾ ಕೊಂಗರ‌ ಈ ಹಿಂದೆ ಆಕ್ಷ್ಯನ್ ಕಟ್ ಹೇಳಿದ ಸೂರರೈ ಪೋಟ್ರು ಚಿತ್ರ ಸಾಕಷ್ಟು ಹೆಸರು ಮಾಡಿತ್ತು.‌ಇದೇ ಸಿನಿಮಾದ ನಟನೆಗಾಗಿ ಸೂರ್ಯ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರೆತಿತ್ತು.

ಈಗ ಸುಧಾ ಕೊಂಗರ ನಿರ್ದೇಶನದ ಹೊಸ ಸಿನಿಮಾಗೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಜೊತೆಯಾಗುತ್ತಿದ್ದು, ನೀರಿಕ್ಷೆಗಳು ದುಪ್ಪಟ್ಟಾಗಿವೆ. ಆದರೆ ಸಿನಿಮಾ ಯಾವುದು, ನಾಯಕನಟ ಯಾರು ಎಂಬುದರ ಬಗ್ಗೆ ಇದುವರೆಗೂ ಯಾವುದೇ ಅಪ್ಡೇಟ್ ಮಾಹಿತಿ ಸಿಕ್ಕಿಲ್ಲ. ಸದ್ಯ ಹೊಂಬಾಳೆ ಮೂವಿಸ್ ಒಂದಾದ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಲೇ ಇದೆ. ಕನ್ನಡದ ಬಹುತೇಕ ಹಿಟ್ ನಟರಿಗಾಗಿ ಹೊಂಬಾಳೆ ಫಿಲ್ಮ್ಸ್ ಸಿನಿಮಾ ಮಾಡ್ತಿದ್ದು, ಕನ್ನಡದ ನಂಬರ್ ಒನ್ ನಟಿ ಖ್ಯಾತಿಯ ಮೋಹಕ ತಾರೆ ರಮ್ಯ ಗೂ ಹೊಂಬಾಳೆ ಫಿಲ್ಮ್ಸ್ ಸಿನಿಮಾ ನಿರ್ಮಿಸಲಿದೆ ಎಂಬ ಮಾತು ಕೇಳಿ ಬಂದಿತ್ತು. ಈಗ ಹೊಂಬಾಳೆ ಜೊತೆ ಕೀರ್ತಿ ಸುರೇಶ್ ಮತ್ತೊಮ್ಮೆ ತೆರೆಗೆ ಬರೋದು ಫಿಕ್ಸ್ ಎನ್ನಲಾಗ್ತಿದೆ.

ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ನಿಮ್ಮ ಮನೆ ಬಾಗಿಲಿಗೆ : ಯಶ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್

ಇದನ್ನೂ ಓದಿ : Shilpa Shetty broke her leg: ಶೂಟಿಂಗ್ ವೇಳೆ ಅವಘಡ: ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ

Keerthy Suresh is the heroine for Hombale Films next movie

Comments are closed.