Shinzo Abe : ಜಪಾನ್​ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡಿನ ದಾಳಿ

ಜಪಾನ್ : Shinzo Abe : ಜಪಾನ್​​ನ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ನಾರಾ ನಗರದಲ್ಲಿ ಗುಂಡಿನ ದಾಳಿ ನಡೆದಿದ್ದು ಮಾರಕ ದಾಳಿಯಲ್ಲಿ ಅವರು ಮೃತಪಟ್ಟಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಗುಂಡಿನ ದಾಳಿಗೆ ಒಳಗಾದ ಶಿಂಜೋ ಅಬೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎನ್ನಲಾಗಿದೆ. ಜಪಾನ್​​ನ ಮಾಜಿ ಪ್ರಧಾನಿ ಶಿಂಜೋ ಅಬೆ ಪ್ರಚಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ದಾಳಿಕೋರರು ಅವರ ಎದೆಗೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.


ಎದೆಯ ಮೇಲೆ ಗುಂಡು ಹಾರುತ್ತಿದ್ದಂತೆಯೇ ಶಿಂಜೋ ಅಬೆ ಕುಸಿದು ಬಿದ್ದಿದ್ದು ತೀವ್ರ ರಕ್ತಸ್ರಾವ ಉಂಟಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಗುಂಡಿನ ದಾಳಿಯನ್ನು ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ರಾಯಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.


ಮೇಲ್ಮನೆ ಚುನಾವಣೆಗೂ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಜಪಾನ್​ನ ಮಾಜಿ ಪ್ರಧಾನಿ ಶಿಂಜೋ ಅಬೆ ಸಾರ್ವಜನಿಕವಾಗಿ ಪ್ರಚಾರ ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಗುಂಡೇಟು ಶಿಂಜೋ ಅಬೆಯ ಎದೆಗೆ ನಾಟಿದ್ದು ಸ್ಥಳದಲ್ಲೇ ಶಿಂಜೋ ಅಬೆ ಕುಸಿದು ಬಿದ್ದಿದ್ದರು. ಅವರ ಎದೆಯ ಭಾಗದಲ್ಲಿ ತೀವ್ರ ರಕ್ತ ಸ್ರಾವ ಉಂಟಾಗಿತ್ತು ಎಂದು ವರದಿಯಾಗಿದೆ.
ಎದೆ ಭಾಗ ಮಾತ್ರವಲ್ಲದೇ 67 ವರ್ಷದ ನಾಯಕನ ಕುತ್ತಿಗೆ ಭಾಗಕ್ಕೂ ಗುಂಡೇಟು ತಗುಲಿದೆ ಎಂದು ಜಪಾನ್​ನ ಆಡಳಿತ ಪಕ್ಷ ಲಿಬರಲ್​ ಡೆಮಾಕ್ರಟಿಕ್​ ಹೇಳಿದೆ. ಆದರೆ ಇಲ್ಲಿಯವರೆಗೆ ಶಿಂಜೋ ಅಬೆ ಬದುಕಿದ್ದಾರಾ ಅಥವಾ ಮೃತಪಟ್ಟಿದ್ದಾರಾ ಎಂಬುದರ ಬಗ್ಗೆ ಪೊಲೀಸರು ಹಾಗೂ ಲಿಬರಲ್​ ಡೆಮಾಕ್ರಟಿಕ್​ ಪಕ್ಷವು ಅಧಿಕೃತ ಮಾಹಿತಿಯನ್ನು ಹೊರ ಹಾಕಿಲ್ಲ. ಉನ್ನತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಶಿಂಜೋ ಅಬೆ ಗುಂಡಿನ ದಾಳಿಯಲ್ಲಿ ಮೃತರಾಗಿದ್ದಾರೆ ಎನ್ನಲಾಗಿದೆ.


ಬಂಧಿತ ಆರೋಪಿಯಿಂದ ಪೊಲೀಸರು ಫೈರಿಂಗ್​ಗೆ ಬಳಸಲಾದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಗುಂಡೇಟಿನ ರಭಸಕ್ಕೆ ಶಿಂಜೋ ಅಬೆಗೆ ಹೃದಾಯಾಘಾತ ಕೂಡ ಸಂಭವಿಸಿತ್ತು ಎಂದು ಹೇಳಲಾಗ್ತಿದೆ. ಜಪಾನ್​ನ ಮಾಧ್ಯಮಗಳಲ್ಲಿ ಯಾರಾದರೂ ಸಾವನ್ನಪ್ಪಿದ್ದಾರೆ ಅವರು ನಿರ್ದಿಷ್ಟವಾಗಿ ಸಾವು ಎಂಬ ಪದವನ್ನು ಬಳಕೆ ಮಾಡುವುದಿಲ್ಲ. ಚಲನೆಯಿಲ್ಲ ಎಂಬ ಪದವನ್ನು ಬಳಕೆ ಮಾಡುತ್ತಾರೆ. ಅಧಿಕೃತವಾಗಿ ಸಾವು ಎಂದು ಘೋಷಣೆಯಾದ ಬಳಿಕವಷ್ಟೇ ಸಾವು ಎಂಬ ಪದ ಬಳಕೆ ಮಾಡಲಾಗುತ್ತದೆ.

ಇದನ್ನು ಓದಿ : Virat wrote emotional lines : ಧೋನಿ ಹುಟ್ಟುಹಬ್ಬಕ್ಕೆ 3 ಸಾಲುಗಳ ಭಾವನಾತ್ಮಕ ಸಂದೇಶ ಬರೆದ ಕಿಂಗ್ ಕೊಹ್ಲಿ

ಇದನ್ನೂ ಓದಿ : ಬ್ಯಾಟಿಂಗ್ ದಿಗ್ಗಜನ ಮಹಾಪತನ, 6 ವರ್ಷಗಳಲ್ಲಿ ಮೊದಲ ಬಾರಿ ಟಾಪ್-10ನಿಂದ ವಿರಾಟ್ ಕೊಹ್ಲಿ ಔಟ್ !

Shinzo Abe Showing No Vital Signs, ‘Feared Dead’ After Being Shot At In Nara

Comments are closed.