Southern Brazil landslide : ಬ್ರೆಜಿಲ್‌ ಹೆದ್ದಾರಿಯಲ್ಲಿ ಭೂಕುಸಿತ : 2 ಸಾವು 30ಕ್ಕೂ ಅಧಿಕ ಜನ ನಾಪತ್ತೆ

ಬ್ರೆಜಿಲ್‌ : ದಕ್ಷಿಣ ಬ್ರೆಜಿಲ್‌ನ ಹೆದ್ದಾರಿಯ (Southern Brazil landslide) ಒಂದು ಕಡೆಯಲ್ಲಿ ಭೂಕುಸಿತ ಉಂಟಾಗಿದ್ದು ಭಾರೀ ಅವಘಡ ಸಂಭವಿಸಿದೆ. ಈ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವತ್ತಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಇದರೊಂದಿಗೆ ಸುಮಾರು 20 ಕಾರುಗಳು ಮತ್ತು ಕೆಲವು ಟ್ರಕ್‌ಗಳು ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ಪೊಲೀಸ್‌ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಈ ಭೂಕುಸಿತವು ಭಾರೀ ಮಳೆಯಿಂದಾಗಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಪರಾನಾ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಪರಿಣಾಮವಾಗಿ ಸೋಮವಾರದಿಂದ ಬೆಟ್ಟದ ಮಣ್ಣು ಕುಸಿಯಲು ಆರಂಭಗೊಂಡಿದೆ. ಏಕಾಏಕಿ ಹೆದ್ದಾರಿ ಬಿಆರ್‌ 267 ರ ಅರ್ಧ ಭಾಗ ಕುಸಿದು ಬಿದ್ದಿದೆ. ” ಕಾಣೆಯಾದವರ ನಿಖರವಾದ ಸಂಖ್ಯೆಯನ್ನು ತಿಳಿಯುವುದು ಕಷ್ಟ. ವಾಹನದಲ್ಲಿ ಒಂದರಿಂದ ಐದು ಜನರು ಇರಬಹುದು. ನಾವು 30 ರಿಂದ 50 ಜನರು ಕಾಣೆಯಾಗಿರುವ ಅಂದಾಜಿನೊಂದಿಗೆ ಶೋಧಕಾರ್ಯ ನಡೆಯುತ್ತಿದೆ” ಎಂದು ಸ್ಥಳೀಯ ತುರ್ತು ಪ್ರತಿಕ್ರಿಯೆ ಮುಖ್ಯಸ್ಥ ಮನೋಯೆಲ್‌ ವಾಸ್ಕೋ ತಿಳಿಸಿದ್ದಾರೆ.

ತುರ್ತು ಸೇವೆಗಳು ಬಿಡುಗಡೆ ಮಾಡಿದ ವೈಮಾನಿಕ ಚಿತ್ರಗಳು ಹೆದ್ದಾರಿ ಕುಸಿದಿರುವುದನ್ನು ಅದರಲ್ಲಿ ನೋಡಬಹುದಾಗಿದೆ. ಅದು ಹೆದ್ದಾರಿಯ ದೊಡ್ಡ ಭಾಗವಾಗಿದ್ದು, ಅದರ ಮೇಲೆ ವಾಹನಗಳು ಸಂಚಾರ ಮಾಡುತ್ತಿರುವುದನ್ನು ನೋಡಬಹುದು. ಇದರ ಮಧ್ಯೆ ಕೆಟ್ಟ ಹವಾಮಾನ ಮತ್ತು ದೂರದ ಸ್ಥಳವು ಶೋಧ ಕಾರ್ಯವನ್ನು ಸಂಕೀರ್ಣಗೊಳಿಸುತ್ತಿದೆ ಎಂದು ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ.

ಬದುಕುಳಿದವರನ್ನು ಹುಡುಕುವ ಭರವಸೆಯಲ್ಲಿ ಅವರು ಸ್ಥಳ ಪತ್ತೆಹಚ್ಚುವ ಡ್ರೋನ್‌ ಕ್ಯಾಮೆರಾಗಳ ಸಹಾಯದಿಂದ ಶೋಧ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇಲ್ಲಿಯವರೆಗೆ ಎರಡು ಶವಗಳು ಪತ್ತೆಯಾಗಿದ್ದು, ಕರಾವಳಿ ಪಟ್ಟಣವಾದ ಗೌರಾಟುಬಾ ಹತ್ತಿರದ ನಗರ ಸೇರಿದಂತೆ ಒಟ್ಟು ಆರು ಜನರನ್ನು ರಕ್ಷಣೆ ಮಾಡಲಾಗಿದೆ. ” ಇದು ಭಯಾನಕವಾಗಿತ್ತು. ನಮ್ಮ ಕಾರು ಕಂದಕಕ್ಕೆ ಬಿತ್ತು, ಕಾರಿನ ಮೇಲೆ ಮಣ್ಣು ಬಿತ್ತು. ನಾವು ದೇವರ ದಯೆಯಿಂದ ಮಾತ್ರ ಜೀವಂತವಾಗಿದ್ದೇವೆ” ಎಂದು ಮೇಯರ್‌ ರಾಬರ್ಟೊ ಜಸ್ಟಸ್‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದಲ್ಲಿ ಹಂಚೊಕೊಂಡಿದ್ದಾರೆ.

ಇದನ್ನೂ ಓದಿ : Zombie Virus: ಜಗತ್ತಿಗೆ ಹೊಸ ಕಂಟಕ: ರಷ್ಯಾದಲ್ಲಿ ಮಂಜುಗಡ್ಡೆಯಲ್ಲಿ ಹೂತಿದ್ದ 48,500 ವರ್ಷಗಳಷ್ಟು ಹಳೆಯ ವೈರಸ್ ಗೆ ಪುನರ್ಜನ್ಮ

ಇದನ್ನೂ ಓದಿ : Covid in China: ಚೀನಾದಲ್ಲಿ ಕೋವಿಡ್ ಮತ್ತಷ್ಟು ಉಲ್ಬಣ: ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಸಿಗದೆ ನರಳಾಟ; ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

ಬ್ರೆಜಿಲ್‌ ಯಾವಾಗಲೂ ಮಾರಣಾಂತಿಕ ಭೂಕುಸಿತಕ್ಕೆ ಒಳಗಾಗುತ್ತದೆ. ಫೆಬ್ರವರಿಯಲ್ಲಿ ಸುಂದರವಾದ ಆಗ್ನೇಯ ಪ್ರವಾಸಿ ಪಟ್ಟಣವಾದ ಪೆಟ್ರೋಪೊಲೀಸ್‌ನಲ್ಲಿ ಸರಣಿ ಭೂಕುಸಿತದಲ್ಲಿ 200ಕ್ಕೂ ಅಧೀಕ ಜನರು ಸಾವನ್ನಪ್ಪಿದ ಘಟನೆ ಕೂಡ ನಡೆದಿದೆ.

Southern Brazil landslide: Landslide on Brazil highway: 2 dead, more than 30 people missing

Comments are closed.