Anand Pandit Motion Pictures : ಬಾಲಿವುಡ್‌ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪಾಲಾದ ” ಕಬ್ಜ” ಸಿನಿಮಾ ವಿತರಣಾ ಹಕ್ಕು

ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ಕಿಚ್ಚ ಸುದೀಪ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ “ಕಬ್ಜ”ದ ವಿತರಣಾ ಹಕ್ಕು ಬಾಲಿವುಡ್‌ ಪ್ರತಿಷ್ಠತ ನಿರ್ಮಾಣ ಸಂಸ್ಥೆಯ (Anand Pandit Motion Pictures) ಪಾಲಾಗಿದೆ. “ಕಬ್ಜ” ಸಿನಿಮಾದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್‌ ಪ್ರತಿಷ್ಠಿತ ಸಂಸ್ಥೆಯಾದ ಆನಂದ್‌ ಮೋಷನ್‌ ಪಿಕ್ಚರ್ಸ್‌ ತನ್ನದಾಗಿಸಿಕೊಂಡಿದೆ. ಈ ಸಿನಿಮಾದ ವಿತರಣಾ ಹಕ್ಕನ್ನು ತನ್ನದಾಗಿಸಿಕೊಂಡ ಬೆನ್ನಲ್ಲೇ ಮೊದಲ ಹಂತವಾಗಿ ಇಂದು ಹಿಂದಿ ಟೀಸರ್‌ ಬಿಡುಗಡೆ ಮಾಡಿದೆ.

“ಕಬ್ಜ” ಸಿನಿಮಾವನ್ನು ಆರ್‌. ಚಂದ್ರು ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್‌ ಲಾಂಛನದಲ್ಲಿ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಸಿನಿಮಾವು ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ತೆರೆ ಕಾಣಲಿದೆ. 1960ಮತ್ತು 1984ರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ ಭಾರತ ಭೂಗತ ಜಗತ್ತಿನ ರಾಜನಾಗುತ್ತಾನೆ. ಭೂಗತಲೋಕದ ರಾಜನಾದ ಅರ್ಕೇಶ್ವರ ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥಾಹಂದರವನ್ನು ಒಳಗೊಂಡ “ಕಬ್ಜ” ಸಿನಿಮಾ ಬಗ್ಗೆ ಬರೀ ಕನ್ನಡ ಸಿನಿರಂಗವಷ್ಟೇ ಅಲ್ಲದೇ, ಭಾರತೀಯ ಸಿನಿಮಾರಂಗದಲ್ಲಿಯೇ ಸಾಕಷ್ಟೂ ಕೂತೂಹಲ ಹಾಗೂ ನಿರೀಕ್ಷೆಗಳನ್ನು ಮೂಡಿಸಿದೆ.

“ಕಬ್ಜ” ಸಿನಿಮಾದ ವಿತರಣಾ ಹಕ್ಕನ್ನುಪಡೆದಿರುವ ಆನಂದ್‌ ಪಂಡಿತ್‌ ಮಾತನಾಡಿ, ಪ್ರೇಕ್ಷಕರ ಮನರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ ಮತ್ತು ಕಬ್ಜ ಸಿನಿಮಾ ಅಂತಹ ಮನರಂಜನೆಗೆ ಕಾರಣವಾಗಲಿದೆ ಎನ್ನುವ ಸಂಪೂರ್ನ ನಂಬಿಕೆ ನಮಗೆ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ನಾಯಕ ನಟ ಉಪೇಂದ್ರ ಭೂಗತಲೋಕದ ಕಥಾಹಂದರವನ್ನು ಒಳಗೊಂಡ “ಕಬ್ಜ” ಸಿನಿಮಾವು ಹಿಂದಿ ಅವತರಣಿಕೆಯನ್ನು ಬಾಲಿವುಡ್‌ನ ಹೆಸರಾಂತ ನಿರ್ಮಾಪಕರಾದ ಆನಂದ್‌ ಪಂಡಿತ್‌ ಮೋಷನ್‌ ಪಿಕ್ಚರ್ಸ್‌ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಅವರ ಸಹಕಾರ ಹೀಗೆ ಮುಂದುವರೆಯಲಿ ಎಂದಿದ್ದಾರೆ.

ಇದನ್ನೂ ಓದಿ : Aishwarya Upendra : ಉಪ್ಪಿ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ : ದೊಡ್ಮನೆ ಯುವರಾಜ್‌ಗೆ ಐಶ್ವರ್ಯಾ ನಾಯಕಿ

ಇದನ್ನೂ ಓದಿ : Krishna G Rao Health Update : ಕೆಜಿಎಫ್ ಹಿರಿಯ ನಟನ ಆರೋಗ್ಯ ಸ್ಥಿತಿ ಗಂಭೀರ : ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Khasagi Putagalu : ಪ್ರೇಕ್ಷಕರ ಮನಗೆದ್ದ “ಖಾಸಗಿ ಪುಟಗಳು” ಮೆಚ್ಚುಗೆ ಸೂಚಿಸಿದ ಸ್ಯಾಂಡಲ್‌ವುಡ್‌ ಸೆಲೆಬ್ರೆಟಿಗಳು

ಈ ಕುರಿತು ಸುದೀಪ್‌, “ದಕ್ಷಿಣ ಭಾರತೀಯ ಸಿನಿಮಾಗಳು ಭಾರತೀಯ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ ಈ ಅದ್ಭುತ ಸಂದರ್ಭದಲ್ಲಿ ಖ್ಯಾತ ವಿತರಕ ಆನಂದ್‌ ಪಂಡಿತ್‌ ಮೋಷನ್‌ ಪಿಕ್ಚರ್ಸ್‌ ನಮ್ಮ ” ಕಬ್ಜ” ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಇದು ಸಿನಿತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ” ಎಂದು ಹೇಳಿದ್ದಾರೆ. ನಿರ್ಮಾಪಕ ಹಾಗೂ ನಿರ್ದೇಶಕ ಆರ್‌. ಚಂದ್ರು ಈ ಕುರಿತು ಮಾತನಾಡಿ, “ಆನಂದ್‌ ಪಂಡಿತ್‌ ಮೋಷನ್‌ ಪಿಕ್ಚರ್ಸ್‌ ಸಂಸ್ಥೆಯು ಕೈ ಜೋಡಿಸಿರುವುದು ನಮ್ಮ ಬದ್ಧತೆ ಮತ್ತು ಪ್ರಯತ್ನಕ್ಕೆ ಸಿಕ್ಕ ಮನ್ನಣೆ” ಎಂದಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ತಿಳಿಸುವುದಾಗಿ ಹೇಳಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಉಪೇಂದ್ರ, ಸುದೀಪ್‌, ಶ್ರೀಯಾ ಶರಣ್‌ ಸೇರಿದಂತೆ ಬಹು ತಾರಾಗಣ ಬಳಗವಿದೆ. ಈ ಸಿನಿಮಾಕ್ಕೆ “ಕೆಜಿಎಫ್‌” ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆಯನ್ನು ನೀಡಿದ್ದಾರೆ.

Anand Pandit Motion Pictures: Bollywood’s prestigious production company Pala has the distribution rights of the movie “Kabza “.

Comments are closed.