ಭಾನುವಾರ, ಏಪ್ರಿಲ್ 27, 2025
HomeWorldSri Lankan PM Ranil Wickremesinghe : ಶ್ರೀಲಂಕಾ ಹಂಗಾಮಿ ಅಧ್ಯಕ್ಷರಾಗಿ ರನಿಲ್​ ವಿಕ್ರಮ ಸಿಂಘೆ ನೇಮಕ

Sri Lankan PM Ranil Wickremesinghe : ಶ್ರೀಲಂಕಾ ಹಂಗಾಮಿ ಅಧ್ಯಕ್ಷರಾಗಿ ರನಿಲ್​ ವಿಕ್ರಮ ಸಿಂಘೆ ನೇಮಕ

- Advertisement -

Sri Lanka : ಶ್ರೀಲಂಕಾದ ಆರ್ಥಿಕತೆಯನ್ನು ದುರುಪಯೋಗಪಡಿಸಿಕೊಂಡಿರುವ ಸರ್ಕಾರದ ವಿರುದ್ಧ ಸಾರ್ವಜನಿಕರು ದಂಗೆ ಎದ್ದ ಬಳಿಕ ಅಧ್ಯಕ್ಷ ಗೊಟಬಯ ರಾಜಪಕ್ಸೆ ಇಂದು ಮಿಲಿಟರಿ ಜೆಟ್​​ನಲ್ಲಿ ಪತ್ನಿ ಹಾಗೂ ಅಂಗ ರಕ್ಷಕರ ಸಮೇತ ಮಾಲ್ಡೀವ್ಸ್​ ದ್ವೀಪ ರಾಷ್ಟ್ರಕ್ಕೆ ಪರಾರಿಯಾದ ಬಳಿಕ ಶ್ರೀಲಂಕಾದ ಪ್ರಧಾನಿ ರನಿಲ್​ ವಿಕ್ರಮ ಸಿಂಘೆ (Sri Lankan PM Ranil Wickremesinghe) ಅವರನ್ನು ದೇಶದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಶ್ರೀಲಂಕಾ ಹಾಲಿ ಅಧ್ಯಕ್ಷ ರಾಜಪಕ್ಸೆ ವಿದೇಶದಲ್ಲಿರುವ ಈ ಸಂದರ್ಭದಲ್ಲಿ ತಮ್ಮ ಕಾರ್ಯಗಳನ್ನು ನಿರ್ವಹಿಸಲು ಪ್ರಧಾನಿ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ ಎಂದು ಸಂಸತ್​​ನ ಸ್ಪೀಕರ್​ ಮಹಿಂದ ಯಾಪಾ ಅಬೇವರ್ದನ ಘೋಷಣೆ ಮಾಡಿದ್ದಾರೆ. ಇದು ಸಂವಿಧಾನದ 37(1)ನೇ ಪರಿಚ್ಛೇದದ ಅಡಿಯಲ್ಲಿದೆ ಎಂದರು. ಅಧ್ಯಕ್ಷ ರಾಜಪಕ್ಸೆ (73) ತಮ್ಮ ಪತ್ನಿ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳೊಂದಿಗೆ ಮಿಲಿಟರಿ ಜೆಟ್‌ನಲ್ಲಿ ದೇಶವನ್ನು ತೊರೆದರು ಎಂದು ಶ್ರೀಲಂಕಾ ವಾಯುಪಡೆಯ ಸಂಕ್ಷಿಪ್ತ ಹೇಳಿಕೆ ತಿಳಿಸಿದೆ.

ಶ್ರೀಲಂಕಾದಿಂದ ರಾಜಪಕ್ಸೆ ನಿರ್ಗಮನದ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆಯೇ ಸಂತೋಷ ವ್ಯಕ್ತಪಡಿಸಿದ ಸಿಂಹಳಿಯರು ಗಾಲ್ ಫೇಸ್ ಗ್ರೀನ್‌ನಲ್ಲಿ ಜಮಾಯಿಸುತ್ತಾ ಜನಪ್ರಿಯ ನುಡಿಗಟ್ಟು ಅರಗಲಾಯತ ಜಯವೇವಾ ಅಥವಾ ಸಿಂಹಳೀಯ ಭಾಷೆಯಲ್ಲಿ “ಹೋರಾಟಕ್ಕೆ ವಿಜಯ” ಮತ್ತು “ಗೋ ಹೋಮ್ ಗೋಟಾ” ಎಂದು ಘೋಷಣೆ ಕೂಗಿದೆ.

ಪ್ರತಿಭಟನಾಕಾರರು ರಾಜಧಾನಿಯ ಮೂರು ಮುಖ್ಯ ಕಟ್ಟಡಗಳಾದ ಅಧ್ಯಕ್ಷರ ಭವನ, ಅಧ್ಯಕ್ಷೀಯ ಕಾರ್ಯದರ್ಶಿ ಮತ್ತು ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸವಾದ ಟೆಂಪಲ್ ಟ್ರೀಸ್ ಅನ್ನು ಆಕ್ರಮಿಸಿಕೊಂಡಿದ್ದಾರೆ, 22 ಮಿಲಿಯನ್ ಜನಸಂಖ್ಯೆ ಹೊಂದಿರುವ ಶ್ರೀಲಂಕಾ ದೇಶವು ಅಭೂತಪೂರ್ವ ಆರ್ಥಿಕ ಪ್ರಕ್ಷುಬ್ಧತೆಯ ಹಿಡಿತದಲ್ಲಿದೆ, ಏಳು ದಶಕಗಳಲ್ಲೇ ಅತ್ಯಂತ ಕೆಟ್ಟದಾದ ಆರ್ಥಿಕ ಬಿಕ್ಕಟ್ಟಿನಲ್ಲಿದೆ, ಲಕ್ಷಾಂತರ ಜನರು ಆಹಾರ, ಔಷಧ, ಇಂಧನ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಣಗಾಡುತ್ತಿದ್ದಾರೆ. ಶ್ರೀಲಂಕಾ ಈಗ ದಿವಾಳಿಯಾದ ದೇಶವಾಗಿದೆ ಎಂದು ಪ್ರಧಾನಿ ವಿಕ್ರಮಸಿಂಘೆ ಕಳೆದ ವಾರ ಹೇಳಿದ್ದಾರೆ.

ಇದನ್ನು ಓದಿ : COVID booster doses : ಜು. 15ರಿಂದ 75 ದಿನಗಳ ಕಾಲ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್​ ಬೂಸ್ಟರ್​ ಡೋಸ್​ ಉಚಿತ

ಇದನ್ನೂ ಓದಿ : Virat Kohli Mets Childhood Friend : ‘’ಚಿರು ಹೇಗಿದ್ದೀಯಾ ?’’ 18 ವರ್ಷಗಳ ಹಿಂದಿನ ಗೆಳೆಯನನ್ನು ಇಂಗ್ಲೆಂಡ್’ನಲ್ಲಿ ಭೇಟಿ ಮಾಡಿದ ಕೊಹ್ಲಿ, ಖುಷಿ ಹಂಚಿಕೊಂಡ ಸ್ನೇಹಿತ..!

Sri Lankan PM Ranil Wickremesinghe appointed as acting President: Speaker

RELATED ARTICLES

Most Popular