gold mine collapse : ಸುಡಾನ್​​ನಲ್ಲಿ ಚಿನ್ನದ ಗಣಿ ಕುಸಿದು 38 ಮಂದಿ ಸಾವು…!

gold mine collapse :ಪಶ್ಚಿಮ ಕೊರ್ಡೋಫಾನ್​ ಪ್ರಾಂತ್ಯದಲ್ಲಿ ನಿಷ್ಕ್ರಿಯಗೊಂಡ ಚಿನ್ನದ ಗಣಿ ಕುಸಿದ ಪರಿಣಾಮ ಕನಿಷ್ಟ 38 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಡಾನ್​ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೇಶದ ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಕಂಪನಿಗೆ ಸೇರಿದ ನಿಷ್ಕ್ರಿಯಗೊಂಡ ಚಿನ್ನದ ಗಣಿ ಇದಾಗಿತ್ತು.ಸುಡಾನ್​ ರಾಜಧಾನಿ ಖಾರ್ಟೌಮ್​ ದಕ್ಷಿಣಕ್ಕೆ ಸುಮಾರು 700 ಕಿಲೋಮೀಟರ್​ ದೂರದಲ್ಲಿರುವ ಫುಜಾ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಈ ಅವಘಡದಲ್ಲಿ ಅನೇಕರಿಗೆ ಗಾಯ ಕೂಡ ಉಂಟಾಗಿದ್ದು ಗಾಯಾಳುಗಳ ಸಂಖ್ಯೆ ಇನ್ನೂ ಬಹಿರಂಗಗೊಂಡಿಲ್ಲ ಎನ್ನಲಾಗಿದೆ.

‘ಉಮ್ ಡ್ರೈಸಾಯಾ ಗಣಿಯಲ್ಲಿ ಕುಸಿತದ ಪರಿಣಾಮವಾಗಿ ಸಾವಿಗೀಡಾದ 38 ಗಣಿ ಕಾರ್ಮಿಕರಿಗೆ ಸುಡಾನ್‌ನ ಮಿನರಲ್ ರಿಸೋರ್ಸಸ್ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೆಶಕ ಸಂತಾಪ ವ್ಯಕ್ತಪಡಿಸಿದ್ದಾರೆ’ ಎಂದು ಮಂಗಳವಾರ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪ್ರದೇಶವು ಗಣಿಗಾರಿಕೆಗೆ ಸೂಕ್ತವಲ್ಲದ ಹಿನ್ನೆಲೆಯಲ್ಲಿ ಕೋರ್ಡೋಫಾನ್​ ರಾಜ್ಯ ಸರ್ಕಾರ ಹಾಗೂ ರಾಜ್ಯದ ಭದ್ರತಾ ಸಮಿತಿಯು ನಿರ್ಧರಿಸಿದ ಹಿನ್ನೆಲೆಯಲ್ಲಿ ಗಣಿಗಾರಿಕೆಯನ್ನು ಬಂದ್​ ಮಾಡಲಾಗಿತ್ತು. ಆದರೆ ಸರ್ಕಾರದ ನಿರ್ಧಾರವನ್ನು ಉಲ್ಲಂಘಿಸಿ ಇಲ್ಲಿ ಅಕ್ರಮ ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು ಎಂದು ವರದಿಯಾಗಿದೆ.

ಉಮ್​ ಡ್ರೈಸಾಯಾ ಗಣಿಯಲ್ಲಿ ಉಂಟಾದ ಕುಸಿತದಿಂದಾಗಿ ಸಾವನ್ನಪ್ಪಿದ 38 ಗಣಿ ಕಾರ್ಮಿಕರಿಗೆ ಸುಡಾನ್​​ನ ಮಿನರಲ್​​ ರಿಸೋರ್ಸ್​ ಕಂಪನಿ ಲಿಮಿಟೆಡ್​ ವ್ಯವಸ್ಥಾಪಕ ನಿರ್ದೇಶಕ ಸಂತಾಪ ಸೂಚಿಸಿದ್ದಾರೆ. ಸುಡಾನ್​​ನ ನಹ್ರ ಅಲಿ ನೀಲ್​, ರೆಡ್​ ಸೀ, ದಕ್ಷಿಣ ಕೊರ್ಡೋಫಾನ್​, ಪಶ್ಚಿಮ ಕೊರ್ಡೋಫಾನ್​ ಹಾಗೂ ಉತ್ತರ ಕೊರ್ಡೋಫಾನ್​​ ಸೇರಿದಂತೆ ವಿವಿಧ ಸಾಂಪ್ರದಾಯಿಕ ಗಣಿಗಾರಿಕೆ ಉದ್ಯಮಗಳಲ್ಲಿ ಸುಮಾರು 20 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇದನ್ನು ಓದಿ :Taliban : ಅಫ್ಘನ್​ ಮಹಿಳೆಯರ ದೂರ ಪ್ರಯಾಣಕ್ಕೆ ಶಾಕಿಂಗ್ ನಿಯಮ ಘೋಷಿಸಿದ ತಾಲಿಬಾನ್​..!

ಇದನ್ನೂ ಓದಿ : Karnataka Bandh postponed : ಕರ್ನಾಟಕ ಬಂದ್ ಗೂ ವಿಘ್ನ: ಸ್ಟ್ರೈಕ್ ದಿನಾಂಕ ಬದಲಿಗೆ ಕರವೇ ಒತ್ತಾಯ

ಇದನ್ನೂ ಓದಿ : ಮದ್ಯದ ನಶೆಯಲ್ಲಿ ನೈಟ್​ ಕರ್ಫ್ಯೂ ಉಲ್ಲಂಘಿಸಿದ ನಟಿ ದಿವ್ಯಾ ಸುರೇಶ್​..!

ಇದನ್ನೂ ಓದಿ : ದಂಪತಿಗೆ ಮಕ್ಕಳಾದರೆ 23.56 ಲಕ್ಷ ರೂಪಾಯಿ ಸಾಲ; ಚೀನಾದ ಈ ಯೋಜನೆಯ ಫಲಾನುಭವ ಪಡೆಯಲು ಏನು ಮಾಡಬೇಕು?

Sudan officials say gold mine collapse leaves 38 people dead

Comments are closed.