Fire to the chariot : ರಥೋತ್ಸವದ ವೇಳೆ ಅವಘಡ: ಪಟಾಕಿ ಸಿಡಿದು ರಥಕ್ಕೆ ತಗುಲಿದ ಬೆಂಕಿ

ಬೆಳಗಾವಿ : ರಥೋತ್ಸವ ಅಂದಮೇಲೆ ಊರಲ್ಲಿ ಸಂಭ್ರಮ ಇರುತ್ತೆ. ಪಟಾಕಿ ಸದ್ದು, ವಾದ್ಯಗಳ ಝೇಂಕಾರ, ಜನರ ಕೂಗು ಹೀಗೆ ಆ ಸಡಗರವನ್ನ ಬಣ್ಣಿಸೋಕೆ ಸಾಧ್ಯವೇ ಇಲ್ಲ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ರಥೋತ್ಸವವೊಂದರಲ್ಲಿ ಉಂಟಾದ ಅವಘಡದಿಂದಾಗಿ ದೇವರನ್ನು ಹೊತ್ತಿದ್ದ ರಥವೇ ಬೆಂಕಿಯಲ್ಲಿ (Fire to the chariot) ಹೊತ್ತಿ ಉರಿದಿದೆ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದ ಶಿವಪೇಟೆಯ ಶ್ರೀ ಜಡಿಶಂಕರಲಿಂಗ ದೇವರ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ನಿನ್ನೆ ಶ್ರೀ ಜಡಿ ಶಂಕರಲಿಂಗ ದೇವರ 38ನೇ ಮಹಾರಥೋತ್ಸವವನ್ನು ಆಯೋಜಿಸಲಾಗಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ನೆರೆದಿದ್ದ ಭಕ್ತರು ಪಟಾಕಿ ಸಿಡಿಸಿದ್ದಾರೆ. ಆದರೆ ಈ ಪಟಾಕಿಯು ರಥಕ್ಕೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಅಲರ್ಟ್​ ಆದ ಗ್ರಾಮಸ್ಥರು ರಥಕ್ಕೆ ಹತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್​ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ರಥೋತ್ಸವದ ದಿನದಂದೇ ಇಂತಹದ್ದೊಂದು ಅವಘಡ ನಡೆದಿರೋದು ಯಾವುದಾದರೂ ದುರಂತದ ಮುನ್ಸೂಚನೆ ಇರಬಹುದಾದ ಅಂತಾ ಗ್ರಾಮಸ್ಥರು ಮಾತನಾಡಿಕೊಳ್ಳುವಂತಾಗಿದೆ. ರಥಕ್ಕೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ತಾಯಿ ಅಡುಗೆ ಮಾಡುತ್ತಿದ್ದಾಗ ಎಲ್‌ಪಿಜಿ ಸಿಲಿಂಡರ್ ಸ್ಫೋಟ, ಐದು ಮಕ್ಕಳು ಸಾವು

ಬಿಹಾರ : ತಾಯಿ ಅಡುಗೆ ಮಾಡುತ್ತಿದ್ದ ವೇಳೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಪೋಟಗೊಂಡು ಐವರು ಮಕ್ಕಳು ಸುಟ್ಟು ಕರಕಲಾಗಿ, ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯ ರಾಜಾವರ ಗ್ರಾಮದಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ನಂತರದಲ್ಲಿ ಜಿಲ್ಲಾಡಳಿತ ಉನ್ನತಮಟ್ಟದ ತನಿಖೆಗೆ ಆದೇಶಿಸಿದೆ. ಛೋಟು ಪಾಸ್ವಾನ್ ಅವರ ಪುತ್ರ ಅಂಕುಶ್ (12 ವರ್ಷ), ನಾಲ್ವರು ಪುತ್ರಿಯರಾದ ಅಂಶು ಕುಮಾರಿ (8 ವರ್ಷ), ಸೀಮಾ ಕುಮಾರಿ (4 ವರ್ಷ), ಶಿವನಿ ಕುಮಾರಿ (6 ವರ್ಷ) ಮತ್ತು ಸೋನಿ ಕುಮಾರಿ (3 ವರ್ಷ) ಮೃತ ದುರ್ದೈವಿಗಳಾಗಿದ್ದಾರೆ. ಅಡುಗೆ ಮನೆಯಲ್ಲಿ ಮಕ್ಕಳ ತಾಯಿ ಅಡುಗೆ ಮಾಡುತ್ತಿದ್ದು, ಪಕ್ಕದಲ್ಲೇ ಮಕ್ಕಳು ಆಟವಾಡುತ್ತಿದ್ದರು. ಇದೇ ವೇಳೆ ತಾಯಿ ಯಾವುದೋ ಕೆಲಸದ ನಿಮಿತ್ತ ಕೊಠಡಿಯಿಂದ ಹೊರಗೆ ಹೋದಾಗ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದೆ. ಐವರು ಮಕ್ಕಳು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ತಾಯಿ ಮನೆಯೊಳಗೆ ಬರುವ ಹೊತ್ತಿಗಾಗಲೇ ಮಕ್ಕಳ ಪ್ರಾಣಪಕ್ಷಿ ಹಾರಿ ಹೋಗಿತ್ತು. ಬೆಂಕಿಯ ತೀವ್ರತೆ ಅಕ್ಕಪಕ್ಕದ ಸ್ಥಳಕ್ಕೂ ವ್ಯಾಪಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಫೋಟ ಹಾಗೂ ಬೆಂಕಿ ಅವಘಡದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಗ್ರಾಮದ ಜನರು ಸ್ಥಳಕ್ಕೆ ಆಗಮಿಸಿದರು. ಬೆಂಕಿ ನಂದಿಸಿದ ನಂತರ, ಸುಟ್ಟ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು, ಆದರೆ ಅದಕ್ಕೂ ಮೊದಲು ಐವರೂ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ಪಡೆದ ಬಂಕಾ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ಗುಪ್ತಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಸಿಲಿಂಡರ್‌ ಸ್ಪೋಟದ ಕುರಿತು ರಾಜೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ಸಿಲಿಂಡರ್‌ ಸ್ಪೋಟಗೊಂಡಿದೆ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತೀಚಿನ ದಿನಗಳಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣದ ಸಂಖ್ಯೆ ಹೆಚ್ಚುತ್ತಿದ್ದು, ಅಮಾಯಕರು ಬಲಿಯಾಗುತ್ತಿದ್ದಾರೆ.

ಇದನ್ನು ಓದಿ : 1st PUC students pass : ಪ್ರಥಮ ಪಿಯುಸಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣ : ರಾಜ್ಯ ಸರಕಾರ ಮಹತ್ವದ ಆದೇಶ

ಇದನ್ನೂ ಓದಿ :Surya Namaskar Yoga : ಪಿಯು ಕಾಲೇಜಿನಲ್ಲಿ‌ ಸೂರ್ಯನಮಸ್ಕಾರ ಯೋಗಾಭ್ಯಾಸ: ಕೇಂದ್ರ ಶಿಕ್ಷಣ ಸಚಿವಾಲಯದ ಆದೇಶ

The fire to the chariot during the carnival in Belgaum

Comments are closed.