Taliban :ಅಮೆರಿಕ ಬೆಂಬಲಿತ ಸರ್ಕಾರವನ್ನು ಕೆಡವಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಪಾರುಪತ್ಯವನ್ನು ಸ್ಥಾಪಿಸಿ ಅನೇಕ ತಿಂಗಳುಗಳೇ ಕಳೆದಿದೆ. ಅಪ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ವಹಿಸಿಕೊಂಡಾಗಿನಿಂದ ಅಲ್ಲಿನ ಜನತೆಯ ಪಾಡು ನರಕಕ್ಕಿಂತಲೂ ಕಡೆಯಾಗಿದೆ. ಮಹಿಳೆಯರಿಗಂತೂ ದಿನಕ್ಕೊಂದು ಕಾನೂನುಗಳನ್ನು ತಾಲಿಬಾನ್ ತರುತ್ತಲೇ ಇದೆ.
ಬುರ್ಕಾ ಕಡ್ಡಾಯ, ಕ್ರೀಡೆಗಳಲ್ಲಿ ಭಾಗವಹಿಸುವಂತಿಲ್ಲ, ಬಣ್ಣದ ಲೋಕಕ್ಕೆ ಕಾಲಿಡುವಂತಿಲ್ಲ ಹೀಗೆ ನಾನಾ ನಿಬಂಧನೆಗಳನ್ನು ಅಪ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲೆ ವಿಧಿಸಲಾಗಿದೆ. ಇದೇ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ತಾಲಿಬಾನ್ ಸರ್ಕಾರವು ದೂರದ ಪ್ರಯಾಣ ಮಾಡುವ ಮಹಿಳೆಯ ಜೊತೆಯಲ್ಲಿ ಪುರುಷ ಸಂಬಂಧಿ ಇಲ್ಲ ಎಂದಾದಲ್ಲಿ ಆಕೆಗೆ ರಸ್ತೆ ಸಾರಿಗೆ ಸೌಕರ್ಯವನ್ನು ನೀಡಲೇಬಾರದು ಎಂದು ಹೇಳಿದೆ.
ಸಚಿವಾಲಯು ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಹೆಡ್ಸ್ಕಾರ್ಫ್ ಧರಿಸದ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಡ್ರಾಪ್ ನೀಡುವಂತಿಲ್ಲ ಎಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಆಗಸ್ಟ್ 15ರಂದು ಅಪ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಸರ್ಕಾರವು ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕಿದೆ. ಸಚಿವಾಲಯದಿಂದ ಹೊರಗಿಡಲಾಗಿದೆ ಹಾಗೂ ಮಾಧ್ಯಮಿಕ ಶಿಕ್ಷಣದಿಂದಲೂ ಕೊಕ್ ನೀಡಲಾಗ್ತಿದೆ.
ಇದೀಗ ಈ ಸಾಲಿಗೆ ಹೊಸದೊಂದು ನಿಯಮಾವಳಿಯು ಸೇರ್ಪಡೆಯಾಗಿದೆ. 75 ಕಿಲೋಮೀಟರ್ಗೂ ಹೆಚ್ಚು ದೂರದ ಪ್ರದೇಶಕ್ಕೆ ಪ್ರಯಾಣಿಸಲಿಚ್ಚಿಸುವ ಮಹಿಳೆಯರು ತಮ್ಮೊಂದಿಗೆ ಪುರುಷ ಸಂಬಂಧಿಯನ್ನು ಕರೆದೊಯ್ಯಬೇಕು. ಒಂಟಿಯಾಗಿ ಪ್ರಯಾಣಿಸಲು ಇಚ್ಛಿಸುವ ಮಹಿಳೆಯರಿಗೆ ಸವಾರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸಚಿವಾಲಯದ ವಕ್ತಾರ ಸಾಡೆಕ್ ಅಕಿಫ್ ಮುಹಾಜಿರ್ ಹೇಳಿದ್ದಾರೆ. ಅಲ್ಲದೇ ಆ ಪುರುಷನು ಮಹಿಳೆಯ ಅತ್ಯಂತ ಹತ್ತಿರದ ಸಂಬಂಧಿ ಆಗಿರಬೇಕು ಎಂದೂ ಸೂಚಿಸಲಾಗಿದೆ.
ವಾರಗಳ ಹಿಂದಷ್ಟೇ ಅಫ್ಘಾನಿಸ್ತಾನದ ಟೆಲಿವಿಷನ್ ಚಾನೆಲ್ಗಳಿಗೆ ಮಹಿಳೆಯರನ್ನು ಶೋಗಳಲ್ಲಿ, ಧಾರಾವಾಹಿಗಳಲ್ಲಿ ತೋರಿಸುವಂತಿಲ್ಲ. ಹಾಗೂ ಮಹಿಳಾ ವರದಿಗಾರ್ತಿಯರು ಸುದ್ದಿ ಪ್ರಸ್ತುತ ಪಡಿಸುವ ವೇಳೆಯಲ್ಲಿ ಕಡ್ಡಾಯವಾಗಿ ಹೆಡ್ ಸ್ಕಾರ್ಫ್ ಧರಿಸಬೇಕು ಎನ್ನಲಾಗಿತ್ತು.
Taliban say Afghan women can’t go on long-distance road trips ‘without male escort’
ಇದನ್ನು ಓದಿ : Price Hike in 2022: ಮತ್ತೆ ದರ ಏರಿಕೆಯ ಬಿಸಿ; ಮುಂದಿನ 3 ತಿಂಗಳಲ್ಲಿ FMCJ ಉತ್ಪನ್ನಗಳ ಬೆಲೆ ಹೆಚ್ಚಳ ಖಚಿತ
ಇದನ್ನೂ ಓದಿ : China Population Loan : ದಂಪತಿಗೆ ಮಕ್ಕಳಾದರೆ 23.56 ಲಕ್ಷ ರೂಪಾಯಿ ಸಾಲ; ಚೀನಾದ ಈ ಯೋಜನೆಯ ಫಲಾನುಭವ ಪಡೆಯಲು ಏನು ಮಾಡಬೇಕು?