Apple iPhone 15 Pro: ಆ್ಯಪಲ್‌ ಐಫೋನ್‌ಗೆ ಭೌತಿಕ ಸಿಮ್ ಬೇಕಿಲ್ಲ; ಇ-ಸಿಮ್ ಮೂಲಕವೇ ಫೋನ್ ಮಾಡಬಹುದು!

ಆ್ಯಪಲ್ ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಿರುವ ಹೊಸ ಐಫೋನ್‌ಗಳಲ್ಲಿ ಸಿಮ್ ಕಾರ್ಡ್ ಹಾಕುವ ಸೌಲಭ್ಯವನ್ನು ತೆಗೆದುಹಾಕಲಿದೆ ಎಂದು ವರದಿಯಾಗಿದೆ. ಸಿಮ್ ಕಾರ್ಡ್‌ಗಳು ಇಲ್ಲದೆಯೇ ಕಾರ್ಯನಿರ್ವಹಿಸುವ ಇ-ಸಿಮ್‌ ಎಂಬ ಹೊಸ ಮಾದರಿಯನ್ನು ಐಫೋನ್ 15 ಪ್ರೊದಲ್ಲಿ ಆ್ಯಪಲ್ ಪರಿಚಯಿಸಲಿದೆ. Apple ಕಂಪನಿ ಈಗಾಗಲೇ ತನ್ನ iPhone XR, XS ಮತ್ತು XS Max ನಲ್ಲಿ eSIM  ಎಂಬ ಕಾನ್ಸೆಪ್ಟನ್ನು ಮಾರುಕಟ್ಟೆಗೆ ಪರಿಚಯಿಸಿದೆ.  ಇದರ ಜೊತೆಗೆ 2023 ರಲ್ಲಿ ಬಿಡುಗಡೆ ಮಾಡಲಿರುವ iPhone 15 Pro ಗೆ  ಭೌತಿಕವಾದ SIM ಕಾರ್ಡ್ ಸ್ಲಾಟ್ ಇಲ್ಲದೆಯೇ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಹಾಗೇನಾದರೂ ಆದಲ್ಲಿ iPhone 15 Pro ಭೌತಿಕ ಸಿಮ್ ಕಾರ್ಡ್ ಇಲ್ಲದ ಮೊದಲ ಸ್ಮಾರ್ಟ್‌ಫೋನ್ ಎಂಬ ಖ್ಯಾತಿಗೆ ಪಾತ್ರವಾಗಲಿದೆ.

ಈಗಾಗಲೇ ಅಂತರ್ಜಾದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ 2023 ರಲ್ಲಿ ಬಿಡುಗಡೆಯಾಗಲಿರುವ Apple iPhone 15 Pro ಮತ್ತು Pro Max ಮಾದರಿಗಳು ಭೌತಿಕ SIM ಕಾರ್ಡ್ ಸ್ಲಾಟ್ ಅನ್ನು ಹೊಂದಿರುವುದಿಲ್ಲ. ಬದಲಿಗೆ, ಸಾಧನಗಳು ಸಂಪರ್ಕಕ್ಕಾಗಿ eSIM ಕಾರ್ಡ್‌ಗಳಿಗೆ ಮಾತ್ರ ಬೆಂಬಲವನ್ನು ಹೊಂದಿರುತ್ತದೆ.

ಅಲ್ಲದೇ ಹೆಚ್ಚುವರಿಯಾಗಿ ಆ್ಯಪಲ್ ಐಫೋನ್ 15 ಮಾದರಿಗೆ ಪೆರಿಸ್ಕೋಪ್ ಲೆನ್ಸ್ ಅನ್ನು ನೀಡಬಹುದು. ಇದು ಸಾಧ್ಯವಾದಲ್ಲಿ ಸುಧಾರಿತ ಆಪ್ಟಿಕಲ್ ಜೂಮ್ ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಪರಿಚಯಿಸಲಿದೆ.

ಆ್ಯಪಲ್ ಅನೇಕ ಹೊಸ ವೈಶಿಷ್ಟ್ಯಗಳನ್ನು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಿಸಲು ಮೊದಲಿನಿಂದಲೂ ಹೆಸರುವಾಸಿಯಾಗಿದೆ. ಅವುಗಳಲ್ಲಿ ಕೆಲವು ಆಡಿಯೊ ಜ್ಯಾಕ್ ಮತ್ತು ಚಾರ್ಜಿಂಗ್ ಅಡಾಪ್ಟರ್‌ಗಳನ್ನು ಬಿಟ್ಟು ಐಫೋನ್‌ಗಳನ್ನು ಮಾರುಕಟ್ಟೆಗೆ ತಂದು ಸಹ ಅದು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಐಫೋನ್‌ಗಳಿಗೆ ಚಾರ್ಜಿಂಗ್ ಅಡಾಪ್ಟರ್ ಅನ್ನು ನೀಡದೇ  ಬಿಡುಗಡೆ ಮಾಡುವುದು ಪರಿಸರ ಸ್ನೇಹಿ ಎಂದು  ಈ ಜಾಗತಿಕ ಟೆಕ್ ಲೋಕದ ದಿಗ್ಗಜ ಕಂಪನಿಯು ವಾದಿಸುತ್ತದೆ!

ಇದೀಗ ಭೌತಿಕವಾಗಿ ಸಿಮ್ ಕಾರ್ಡ್ ಇಲ್ಲದೇ ಐಫೋನ್ ಬಿಡುಗಡೆ ಮಾಡುವುದು ಸಹ ಆ್ಯಪಲ್ ಕಂಪನಿಯ  ಇಂತಹುದೇ ಹೊಸ ಪ್ರಯತ್ನವಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರಿಗೆ ಸದಾ ಹೊಸ ಹೊಸ ರೀತಿಯ ಉತ್ಪನ್ನಗಳನ್ನು ಒದಗಿಸುವ ಉದ್ದೇಶ ಹೊಂದಿರುವ ಆ್ಯಪಲ್ ಕಂಪನಿಯ ಭೌತಿಕ ಸಿಮ್ ಇಲ್ಲದ ಐಫೊನ್ ಬಿಡುಗಡೆ ಪ್ರಯತ್ನ ಎಷ್ಟು ಸಕ್ಸೆಸ್ ಆಗುತ್ತದೆ ನೋಡಬೇಕಷ್ಟೇ.

ಇದನ್ನೂ ಓದಿ: Android Phone Security: ನಿಮ್ಮ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ ಬಳಸಿ ಮೊಬೈಲನ್ನು ಸುರಕ್ಷಿತವಾಗಿಡುವುದು ಹೇಗೆ?

Comments are closed.