World Heart Day : ಇಂದು ವಿಶ್ವ ಹೃದಯ ದಿನಾಚರಣೆ : ನಿಮಗೂ ಇರಲಿ ಹೃದಯದ ಕಾಳಜಿ

ಇಂದು ವಿಶ್ವದೆಲ್ಲೆಡೆ “ವಿಶ್ವ ಹೃದಯ ದಿನ” (World Heart Day) ಆಚರಿಸಲಾಗುತ್ತಿದೆ. ನಮ್ಮ ಹೃದಯವನ್ನು ಆರೋಗ್ಯದಿಂದ ಕಾಪಾಡಿಕೊಂಡರೆ ನಮ್ಮ ಪೂರ್ತಿ ಆರೋಗ್ಯವನ್ನು ಕಾಪಾಡಿಕೊಂಡ ಹಾಗೆ. ನಮ್ಮ ಹೃದಯ ರೋಗ ಮತ್ತು ಹೃದಯರಕ್ತನಾಳದ ಸಮಸ್ಯೆಗಳನ್ನು ತಡೆಗಟ್ಟುವ ಹಾಗೂ ಅದರ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಇದರ ಮೂಲ ಗುರಿ ಆಗಿದೆ. ಹೃದಯ ರೋಗಕ್ಕೆ ಸಂಬಂಧಪಟ್ಟ ಲಕ್ಷಣಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಹಾಗೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ತಡೆಗಟ್ಟುವುದು ಹಾಗೂ ಅದರ ನಿಯಂತ್ರಣಕ್ಕೆ ಬೇಕಾಗುವಂತಹ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವಂತೆ ತಿಳಿಸುವುದಾಗಿದೆ.

1999 ರಿಂದ ವಿಶ್ವ ಹೃದಯ ಸಂಸ್ಥೆ ಪ್ರತಿ ವರ್ಷದ ಸೆಪ್ಟೆಂಬರ್‌ನಲ್ಲಿ ಕೊನೆಯ ಭಾನುವಾರವನ್ನು ವಿಶ್ವ ಹೃದಯ ದಿನವನ್ನು ಆಯೋಜಿಸುತ್ತಿದೆ. ಆದರೆ 2011 ರಿಂದ ವಿಶ್ವ ಹೃದಯ ದಿನ (World Heart Day)ವನ್ನು ಸೆಪ್ಟೆಂಬರ್‌ ಕೊನೆಯ ಭಾನುವಾರದ ಬದಲಾಗಿ ಸೆಪ್ಟೆಂಬರ್‌ 29ರಂದು ಆಚರಿಸಲಾಗುತ್ತಿದೆ. ವಿಶ್ವ ಹಾರ್ಟ್‌ ಫೆಡರೇಶನ್‌ ಸಂಸ್ಥೆಯು ಪ್ರತಿ ವರ್ಷವು ವಿಶ್ವ ಹೃದಯ ದಿನ ದಂದು ವಿಭಿನ್ನ ವಿಷಯವನ್ನು ಇಟ್ಟುಕೊಂಡು ಕಾರ್ಯಕ್ರಮವನ್ನು ಆಚರಿಸುತ್ತದೆ. ಈ ವರ್ಷ ಕೂಡ ವಿಶ್ವದೆಲ್ಲೆಡೆ ವಿಶ್ವ ಹೃದಯ ದಿನವನ್ನು ಬೆಂಬಲಿಸುವಂತೆ ಹೃದಯ ರೋಗಗಳನ್ನು ತಡೆಗಟ್ಟುವ ಬಗ್ಗೆ ಜನರನ್ನು ಒಂದು ಗೂಡಿಸುವುದಾಗಿದೆ.

ಇದನ್ನೂ ಓದಿ : ಇಂದು ವಿಶ್ವ ಹೃದಯ ದಿನ : ಹೃದಯದ ಆರೋಗ್ಯ ಕಾಪಾಡುವ ಆಹಾರಗಳು

ಇದನ್ನೂ ಓದಿ : ಅತಿಯಾಗಿ ಕಾಡುವ ಒಣ ಕೆಮ್ಮು : ಕಾಳು ಮೆಣಸು ಲಿಂಬೆಯ ಅಕ್ರೂಟ್‌ ರಾಮಬಾಣ

ಇದನ್ನೂ ಓದಿ : ಮಕ್ಕಳ ಜ್ಞಾಪಕಶಕ್ತಿ ಹೆಚ್ಚಿಸುತ್ತೆ ಮೊಳಕೆ ಕಾಳು

ಇದನ್ನೂ ಓದಿ : ಕಾಡುತ್ತಿರುವ ಮಂಡಿ ನೋವಿಗೆ ಮನೆಯಲ್ಲೇ ಔಷಧ : ಈ ಜೆಲ್‌ ಒಮ್ಮೆ ಟ್ರೈ ಮಾಡಿ

ವಿಶ್ವ ಹೃದಯ ದಿನದ ಮಹತ್ವ:

ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಹೃದಯವು ಮುಖ್ಯ ಅಂಗಗಳಲ್ಲಿ ಒಂದಾಗಿದೆ. ಹಾಗೆ ದೇಹದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ತಮ್ಮ ಹೃದಯದ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಕೆಲವೊಂದಷ್ಟು ತಪ್ಪು ಜೀವನಶೈಲಿಯಿಂದಾಗಿ ಹೃದಯ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಇದ್ದರಿಂದಾಗಿ ಪ್ರಪಂಚದ್ಯಾಂತ ಸಾವಿಗೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ.
ಪ್ರತಿ ವರ್ಷ ಸರಿಸುಮಾರು 17ಮಿಲಿಯನ್‌ನಷ್ಟು ಜನರು ಹೃದಯ ಸಂಬಂಧಿ ಕಾಯಿಲೆಯಿಂದ ಸಾಯುತ್ತಿದ್ದಾರೆ. ಹೀಗಾಗಿ ವಿಶ್ವ ಹೃದಯ ಸಂಸ್ಥೆಯು ಹೃದಯ ಆರೋಗ್ಯದ ಮಹತ್ವದ ಬಗ್ಗೆ ತಿಳಿಸಲು ಅದರ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಆಯೋಜಿಸಿದೆ. ವಿಶ್ವ ಹೃದಯ ಸಂಸ್ಥೆಯು ಹೃದಯ ಕಾಯಿಲೆಗಳನ್ನು ತಡೆಗಟ್ಟುವಿಕೆಗಾಗಿ ಮೀಸಲಾಗಿರುವ ಜಾಗತಿಕ ಸಂಸ್ಥೆಯಾಗಿದೆ.

Today is World Heart Day, may you also take care of your heart

Comments are closed.