ಅಕ್ಟೋಬರ್ 1ಕ್ಕೆ CET Ranking ಪ್ರಕಟ: ವಿದ್ಯಾರ್ಥಿಗಳಿಗಾಗಿ ಹೆಚ್ಚಲಿದೆ ನಾಲ್ಕು ಸಾವಿರ ಸೀಟ್

ಬೆಂಗಳೂರು : CET Ranking seats increase : ಈ ಬಾರಿ ಇಂಜಿನಿಯರಿಂಗ್ ಪ್ರವೇಶ ಪಡೆಯೋ ಉತ್ಸಾಹದಲ್ಲಿರೋ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಇಟಿ ಫಲಿತಾಂಶ ಪ್ರಕಟ ಮಾಡುವುದರಲ್ಲಿ ವಿಳಂಭ ಮಾಡುವ ಮೂಲಕ ನಿರಾಸೆ ತಂದಿದೆ. ಆದರೆ ಈ ನಿರಾಸೆ ಮಧ್ಯದಲ್ಲೂ ಸಿಹಿಸುದ್ದಿಯೊಂದು ಕಾದಿದ್ದು, ಸಿಇಟಿ ಫಲಿತಾಂಶ ತಡವಾದ್ರೂ ಇಂಜಿನಿಯರಿಂಗ್‌ ಸ್ಟೂಡೆಂಟ್ಸ್ ಗೆ ಸರ್ಕಾರ ಒಟ್ಟಾರೆ ಸೀಟ್ ಹೆಚ್ಚಿಸುವ ಮೂಲಕ ಶುಭ ಸುದ್ದಿ ನೀಡಿದೆ.

ಹೌದು ರಾಜ್ಯದಲ್ಲಿ ರಿಪೀಟರ್ಸ್ ಅಂಕ ಪರಿಗಣನೆ ಸೇರಿದಂತೆ ವಿವಿಧ ಕಾರಣಕ್ಕೆ ಸಿಇಟಿ ಫಲಿತಾಂಶ ವಿಳಂಬವಾಗಿದೆ.ಆದರೆ ಇದರ ಮಧ್ಯೆಯೇ ಸರ್ಕಾರ Information Technology ಕೋರ್ಸ್ ಓದುವ ಇಚ್ಛೆ ಇರೋ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ. ಹೌದು IT ಕೋರ್ಸ್ ಸೀಟು ಹೆಚ್ಚಳ ಮಾಡಿ ಕೆಇಎ ಆದೇಶ ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಬಗ್ಗೆ ಮಾಹಿತಿ ನೀಡಿದ್ದು, ಶೇ.10ಕ್ಕಿಂತಲೂ ಐಟಿ ಕೋರ್ಸ್ ಸೀಟು ಹೆಚ್ಚಳ ಮಾಡಲಾಗಿದೆ‌.

ಅದರಲ್ಲೂ ಪ್ರಮುಖವಾಗಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗೋ ನಿಟ್ಟಿನಲ್ಲಿ ಸರ್ಕಾರ, ಸರ್ಕಾರಿ ಕೋಟಾದ ಸೀಟು ಹೆಚ್ಚಳ ಮಾಡಿದೆ. ಪರಿಣಿತರ ಸಮಿತಿ ವರದಿಯಂತೆ ಐಟಿ ಕೋರ್ಸ್ ಸೀಟ್ ಹೆಚ್ಚಳ ಮಾಡಲಾಗಿದ್ದು, ಈ ಕುರಿತು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.

ಈ ವರ್ಷ ಇನ್ಪಾರ್ಮೆಶನ್ ಟೆಕ್ನಾಲಜಿ ವಿಭಾಗಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು ಈಗಾಗಲೇ ಮ್ಯಾನೇಜಮೆಂಟ್ ಖೋಟಾದ ಸೀಟುಗಳು ಫುಲ್ ಆಗಿವೆ ಎನ್ನಲಾಗ್ತಿದೆ. ಹೀಗಾಗಿ ಪ್ರತಿಭಾನ್ವಿತ ಮಕ್ಕಳಿಗೆ ಅನ್ಯಾಯ ಆಗಬಾರದೆಂಬ ಕಾರಣಕ್ಕೆ 4 ಸಾವಿರಕ್ಕೂ ಹೆಚ್ಚು ಸೀಟು ಹೆಚ್ಚಿಸಿ ಕೆಇಎ ಅದೇಶ ಹೊರಡಿಸಿದೆ. ಈಗಿರುವ ಇಂಜಿನಿಯರಿಂಗ್ 90 ಸಾವಿರ ಸೀಟ್ ನಲ್ಲಿ 15 ಸಾವಿರಕ್ಕೂ ಹೆಚ್ಚು ಸೀಟು ಐಟಿ ಕೋರ್ಸ್ ಗಳಿಗೆ ನಿಗದಿಯಾಗಿದೆ. ರಾಜ್ಯದಲ್ಲಿ ಈ ವರ್ಷ ಕಂಪ್ಯೂಟರ್ ಸೈನ್ಸ್,ಇನ್ಫಾರ್ಮೇಶನ್ ಟೆಕ್ನಾಲಜಿ,ರೋಬೋಟಿಕ್ ಸೈನ್ಸ್,ಏರೋ ನಾಟಿಕಲ್ ಸೈನ್ಸ್, ಏರೋ ಸ್ಪೇಸ್, ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್ಸ್ ಗೆ ಬೇಡಿಕೆ ಹೆಚ್ಚಿದೆ.

ರಾಜ್ಯದಲ್ಲಿ 542 ಇಂಜಿನಿಯರ್ ಕಾಲೇಜುಗಳಿದ್ದು, ಇದರಲ್ಲಿ 407 ಖಾಸಗಿ ಕಾಲೇಜು ಹಾಗೂ 134 ಸರಕಾರಿ ಇಂಜಿನಿಯರ್ ಕಾಲೇಜುಗಳಿವೆ. ಈ ಪೈಕಿ ಖಾಸಗಿ ಕಾಲೇಜಿನಲ್ಲಿ ಶೇ.50-50 ರೀತಿ ಮೆರಿಟ್ ಹಾಗೂ ಮ್ಯಾನೇಜ್‌ಮೆಂಟ್ ಸೀಟ್ ಅಲಾಟ್ ಮಾಡಲಾಗುತ್ತದೆ. ಹೀಗಾಗಿ ಐಟಿ ಸೀಟ್ ಹೆಚ್ಚಿಸಲಾಗಿದ್ದು, ಇದೇ ಬರುವ ಅಕ್ಟೋಬರ್ 1 ರಂದು ಸಿಇಟಿ ರ್ಯಾಕಿಂಗ್ ಪ್ರಕಟವಾಗಲಿದೆ.

ಇದನ್ನೂ ಓದಿ : medical students :ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಆಘಾತಕಾರಿ ಮಾಹಿತಿ

ಇದನ್ನೂ ಓದಿ : school bag weight : ಶಾಲಾ ಬ್ಯಾಗ್ ತೂಕ ಕಡಿಮೆ ಮಾಡಿ : ಹೈಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ

CET Ranking published on October 1 Four thousand seats will increase for students

Comments are closed.