Hypertension : ಅಧಿಕ ರಕ್ತದೊತ್ತಡ ನಿಭಾಯಿಸಲು ಸಹಾಯ ಮಾಡುವ ಯೋಗಾ, ಆಕ್ಯಪಂಚರ್‌ ಮತ್ತು ಡಯಟ್‌!

ಭಾರತದಲ್ಲಿ ಐದು ರೋಗಿಗಳಲ್ಲಿ ಒಬ್ಬರು ಅಧಿಕ ರಕ್ತದೊತ್ತಡದಿಂದ(Hypertension) ಬಳಲುತ್ತಿದ್ದಾರೆ, ಎಂದು ಜರ್ನಲ್‌ ಆಫ್‌ ದಿ ಅಸೋಸಿಯೇಷನ್‌ ಆಫ್‌ ಪಿಸಿಶಿಯನ್‌ ಹೇಳಿದೆ. ಮಹಿಳೆಯರಲ್ಲಿ ಮತ್ತು 60 ವರ್ಷ ಮೇಲ್ಪಟ್ಟವರಲ್ಲಿ ಅಧಿಕವಾಗಿದೆ. ಅಧಿಕ ರಕ್ತದೊತ್ತಡವು ಸಾಂಕ್ರಾಮಿಕವಲ್ಲದ ರೋಗವಾದರೂ ನಿರಂತರವಾಗಿ ಔಷಧ ಸೇವಿಸಲೇ ಬೇಕಾಗುತ್ತದೆ. ಅಧಿಕ ರಕ್ತದೊತ್ತಡದಿಂದ ದೂರವಿರಲು ಕೆಲವು ಉತ್ತಮ ಮಾರ್ಗಗಳಿವೆ.

ಔಷಧಗಳ ಮೇಲಿನ ಅವಲಭನೆಯನ್ನು ಕಡಿಮೆ ಮಾಡಲು ಯೋಗ, ಆಕ್ಯುಪಂಚರ್‌ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆಗಳು ಔಷಧ ಸೇವನೆಯ ಪರ್ಯಾಯ ದಾರಿಗಳಾಗಿವೆ. 2009 ರಲ್ಲಿ 102 ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ ವ್ಯಾಯಾಮ , ಯೋಗಾ ಮತ್ತು ಆಹಾರದಲ್ಲಿ ಕಡಿಮೆ ಉಪ್ಪಿನ ಪ್ರಮಾಣ ಸೇವಿಸುವ ಜನರಲ್ಲಿ ಅಧಿಕ ರಕ್ತದೊತ್ತಡ ಕಡಿಮೆ ಇರುವುದು ತಿಳಿದುಬಂದಿದೆ.

ಯೋಗಾ :

ಅಮೇರಿಕಾ ಹಾರ್ಟ್‌ ಅಸೋಸಿಯೇಷನ್‌ (AHA) ಯೋಗವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಇದರಿಂದ ಯಾವುದೇ ಹಾನಿ ಉಂಟುಮಾಡುವ ಸಾಧ್ಯತೆಯಿಲ್ಲ ಎಂದು ಸೂಚಿಸುವ ವಿವಿಧ ವಿಮರ್ಶೆ ಪ್ರಕಟಿಸಿದೆ. 2016 ರಲ್ಲಿ ನಡೆಸಿದ ಇನ್ನೊಂದು ವಿಮರ್ಶೆಯಲ್ಲಿ ಸೂರ್ಯ ನಮಸ್ಕಾರ ಮತ್ತು ಶ್ರಮದಾಯಕ ಯೋಗಾಭ್ಯಾಸಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತೀರ್ಮಾನಿಸಲಾಯಿತು.

ಯೋಗಾಸನಗಳು ದೇಹವನ್ನು ಹಿಗ್ಗಿಸುವಾಗ ಇಲ್ಲವೇ ಬಾಗಿಸುವಾಗ ಪ್ರಜ್ಞಾಪೂರ್ವಕವಾಗಿ ಉಸಿರಾಡುವಂತೆ ಮಾಡುತ್ತದೆ. ಇದು ಒತ್ತಡನ್ನು ನಿವಾರಿಸುವ ಮೂಲಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಶಿಶುವಾಸನ, ಪಶ್ಚಿಮೊತ್ತನಾಸನ, ವೀರಾಸನ, ಬದ್ಧಕೋನಾಸನ ಮತ್ತು ಅರ್ಧ ಮತ್ಸೇಂದ್ರಾಸನ ಇವುಗಳು ಹೆಚ್ಚು ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ ಈ ಆಸನಗಳು ಅಧಿಕ ರಕ್ತದೊತ್ತಡವನ್ನು ತಡೆಯಲು ಸಹಾಯಮಾಡುತ್ತದೆ.

ಆಕ್ಯುಪಂಚರ್‌ :

ಇದು ಚೀನಾದ ಸಾಂಪ್ರದಾಯಿಕ ಪದ್ಧತಿಯಾಗಿದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಅಧ್ಯಯನಗಳು ಸೂಚಿಸುವದೇನೆಂದರೆ ಆಕ್ಯುಪಂಚರ್‌ ಬಿಪಿಯನ್ನಷ್ಟೇ ಕಡಿಮೆ ಮಾಡುವುದಿಲ್ಲ ರೋಗಿಗಳಲ್ಲಿ ಸಂಭವಿಸುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ 50 ರೋಗಿಗಳನ್ನು 30 ನಿಮಿಷಗಳ ಆಕ್ಯುಪಂಚರ್‌ಗೆ ಒಳಪಡಿಸಿದ ನಂತರ 169 ರಿಂದ 151 Hg ಇದ್ದ ಬಿಪಿ ನಂತರ 77 ರಿಂದ 72ಕ್ಕೆ ಇಳಿಕೆಯಾಗಿದ್ದು ಅಧ್ಯಯನದಿಂದ ಕಂಡುಬಂದಿದೆ.

ಡಯಟ್‌ :

ಅಧಿಕ ರಕ್ತದೊತ್ತಡದ ಹೊರತಾಗಿಯೂ ಹಾರ್ಟ್‌ ಆಟ್ಯಾಕ್‌, ಸ್ಟ್ರೋಕ್‌ ಮತ್ತು ಸಾವು ಸಂಭಿವಿಸಲು ಕಾರಣ ದೇಹದ ಅಂಗಾಗಳ ಹಾನಿಯಿಂದಾಗಿದೆ. ಇದಕ್ಕೇ ಕಾರಣ ಆಹಾರ ಪದ್ಧತಿಯಲ್ಲಿನ ಬದಲಾವಣೆ. ನಿಯಮಿತ ಯೋಗಾ, ವ್ಯಾಯಾಮ, ಸಮತೂಕದ ಆಹಾರ ಇವು ಅಧಿಕ ರಕ್ತದೊತ್ತಡ ಕಡಿಮೆ ಮಾಡಬಲ್ಲದು.

ಇದನ್ನೂ ಓದಿ : ನೀರಲ್ಲಿ ನೆನೆಸಿಟ್ಟ ಕಡಲೆಕಾಯಿ ತಿಂದ್ರೆ ಏನೆಲ್ಲಾ ಲಾಭವಿದೆ ಗೊತ್ತಾ ?

ಇದನ್ನೂ ಓದಿ :Raw Banana Benefits: ಬಾಳೆಹಣ್ಣಷ್ಟೆ ಅಲ್ಲಾ , ಬಾಳೆಕಾಯಿಯೂ ಆರೊಗ್ಯಕ್ಕೆ ಉತ್ತಮ;ಬಾಳೆಕಾಯಿಯ ಪ್ರಯೋಜನಗಳೇನು ಗೊತ್ತಾ !

(Hypertension yoga, acupuncture and diet for resistant hypertension)

Comments are closed.