Chinese city of Xian : ಚೀನಾದ ಕ್ಸಿಯಾನ್​ ನಗರದಲ್ಲಿ ಕೊರೊನಾ ರಣಕೇಕೆ: ಮುಂದುವರಿದ ಲಾಕ್​ಡೌನ್​

Chinese city of Xian :ಕಳೆದ 10 ದಿನಗಳಿಂದ ಲಾಕ್​ಡೌನ್​ನಲ್ಲಿಯೇ ಇರುವ ಚೀನಾದ ಕ್ಸಿಯಾನ್​​ ನಗರದಲ್ಲಿ ಕೋವಿಡ್​ ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ಹೊಸ ವರ್ಷದ ಬಳಿಕವಂತೂ ಕ್ಸಿಯಾನ್​​ನಲ್ಲಿ ಕೊರೊನಾ ರಣಕೇಕೆ ಮಿತಿಮೀರಿದ್ದು ಕೊರೊನಾ ಪ್ರಕರಣಗಳ ಸಂಖ್ಯೆ 1500ರ ಗಡಿ ದಾಟಿದೆ. ಚೀನಾ ದೇಶದ ಇತರೆ ಭಾಗಗಳಲ್ಲಿ 200 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಭಾನುವಾರ ಕ್ಸಿಯಾನ್​​ನ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಕ್ಸಿಯಾನ್​ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಪ್ರಖ್ಯಾತ ಟೆರಾಕೋಟಾ ವಾರಿಯರ್​ ಮ್ಯೂಸಿಯಂನ ನೆಲೆಯಾಗಿದೆ. ಶನಿವಾರ ಕ್ಸಿಯಾನ್​​ನಲ್ಲಿ 122 ಸ್ಥಳೀಯವಾಗಿ ಹರುಡುವ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.


ವಾಯುವ್ಯ ಶಾಂಕ್ಸಿ ಪ್ರಾಂತ್ಯದ ರಾಜಧಾನಿಯಲ್ಲಿ ಕೊರೊನಾ ವೈರಸ್​ ಮತ್ತೆ ಜೀವ ತಳೆದಿರುವ ಬೆನ್ನಲ್ಲೇ ಡಿಸೆಂಬರ್​ 9ರಿಂದ ಇಲ್ಲಿಯವರೆಗೆ ಕ್ಸಿಯಾನ್​​ನಲ್ಲಿ ಒಟ್ಟು 1573 ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.


ಹೊಸ ಪ್ರಕರಣಗಳಲ್ಲಿ 104 ಮಂದಿ ಕ್ವಾರಂಟೈನ್​ನಲ್ಲಿರುವಾಗ ಸೋಂಕು ಇರುವುದು ಪತ್ತೆಯಾಗಿದೆ. ಮತ್ತು 18 ನ್ಯೂಕ್ಲಿಯಿಕ್​ ಆ್ಯಸಿಡ್​ ಪರೀಕ್ಷೆ ವೇಳೆಯಲ್ಲಿ ತಿಳಿದುಬಂದಿದೆ. ಒಟ್ಟು 1573 ಪ್ರಕರಣಗಳಲ್ಲಿ 8 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 10 ಮಂದಿಯ ಸ್ಥಿತಿ ಗಂಭೀರವಾಗಿದೆ. ಇನ್ನುಳಿದವರು ಸೌಮ್ಯ ಹಾಗೂ ಲಕ್ಷಣ ರಹಿತ ಸೋಂಕನ್ನು ಹೊಂದಿದ್ದಾರೆ.
ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಾವಿರಾರು ಟನ್​ಗಟ್ಟಲೇ ಆಹಾರವನ್ನು ನಿವಾಸಿಗಳಿಗೆ ತಲುಪಿಸಲಾಗುತ್ತಿದೆ. ಆದರೂ 13 ಮಿಲಿಯನ್​ ಜನಸಂಖ್ಯೆ ಹೊಂದಿರುವ ಕ್ಸಿಯಾನ್​ ನಗರದಲ್ಲಿ ಆಹಾರ ಕೊರತೆಯ ಕೂಗು ಕೇಳಿ ಬರುತ್ತಿದೆ. ಕಳೆದ ಬಾರಿ ಕೂಡ 2019ರಲ್ಲಿ ಚೀನಾದಲ್ಲಿ ಮೊದಲ ಕೊರೊನಾ ಕೇಸ್​ಗಳು ವರದಿಯಾಗುತ್ತಿದ್ದ ವೇಳೆಯಲ್ಲಿ ಒಂದೇ ವಾರದಲ್ಲಿ 1 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದವು. ಕಳೆದ ಬಾರಿ ವುಹಾನ್​ ನಗರದಲ್ಲಿದ್ದ ಭೀಕರತೆ ಈ ಬಾರಿ ಕ್ಸಿಯಾನ್​ ನಗರದಲ್ಲಿ ಸಂಭವಿಸಿದೆ.


ಕ್ಸಿಚೆಂಗ್​ ಜಿಲ್ಲೆಯ ಅಧಿಕಾರಿಯೊಬ್ಬರು ಶನಿವಾರ 4100 ಟನ್​ ತರಕಾರಿಗಳನ್ನು ಸುಮಾರು 2,50,000 ನಿವಾಸಿಗಳಿಗೆ ತಲುಪಿಸಿದ್ದೇವೆ ಎಂದು ಹೇಳಿದರು. ಇನ್ನೊಬ್ಬ ಸ್ಥಳೀಯ ಅಧಿಕಾರಿ ನಗರದ ವಿಶೇಷ ಪ್ರದೇಶದಲ್ಲಿ ವಾಸಿಸುವವರಿಗೆ ಕನಿಷ್ಟ 1200 ಟನ್ ಮಾಂಸ, ಮೊಟ್ಟೆ, ಹಾಲು ಹಾಗೂ ತರಕಾರಿಗಳನ್ನು ತಲುಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Under lockdown in New Year, Chinese city of Xian continues to reel under COVID-19 surge

ಇದನ್ನು ಓದಿ : Corona vaccine campaign : ಇಂದಿನಿಂದ 15- 18 ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ: ಲಸಿಕೆ ಪಡೆದ ಮಕ್ಕಳಿಗೆ ರಜೆ

ಇದನ್ನೂ ಓದಿ : gold mine collapse : ಸುಡಾನ್​​ನಲ್ಲಿ ಚಿನ್ನದ ಗಣಿ ಕುಸಿದು 38 ಮಂದಿ ಸಾವು…!

Comments are closed.