Share Market : ಹೊಸ ವರ್ಷದ ಮೊದಲ ದಿನದ ಮೊದಲ ಅವಧಿಯ ವ್ಯವಹಾರದಲ್ಲೇ ಜಿಗಿತ ಕಂಡ ಆಟೋ ನಿಫ್ಟಿ ಸೂಚ್ಯಂಕಗಳು

ಬೆಂಗಳೂರು, ಜನವರಿ 3, 2022: ಹೊಸವರ್ಷದ ಪ್ರಪ್ರಥಮ ವಹಿವಾಟಿನ ದಿನವಾದ ಇಂದು ‍ಷೇರು ಮಾರುಕಟ್ಟೆಯು ( Share Market) ಏರಿಕೆಯಿಂದ ವ್ಯವಹಾರದ ಶುಭಾರಂಭ ಮಾಡಿದ್ದು ಆಟೋಮೋಬೈಲ್ ರಂಗದಲ್ಲಿ (Auto Mobile) ಪ್ರಬಲವಾದ ಸಾಧನೆ ತೋರಿಸಿದೆ. ಹೆಚ್ಚುತ್ತಿರುವ ಒಮಿಕ್ರಾನ್ ಆತಂಕದಿಂದಾಗಿ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡುತ್ತಿರುವ (Investment) ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲೂ ಈ ಸಾಧನೆ ಧನಾತ್ಮಕ, ಆಶಾದಾಯಕ ಬೆಳವಣಿಗೆಯಾಗಿದೆ.

ಏಷ್ಯಾ ಹಾಗೂ ಯೂರೋಪ್‌ನ ಮಾರುಕಟ್ಟೆಗಳು ಮುಚ್ಚಿರುವ ಈ ಸಮಯದಲ್ಲಿ ಭಾರತದ ಮಾರುಕಟ್ಟೆಯಲ್ಲೂ ವ್ಯವಹಾರ ಬಹಳ ಕಡಿಮೆಯಾಗಿದ್ದು ಮಾರುಕಟ್ಟೆಗಳು ದಿಕ್ಕುಗಾಣದ ಸ್ಥಿತಿಯಲ್ಲಿದ್ದವು. ಬೆಳಗಿನ 9:30ರ ಸಮಯದಲ್ಲಿ  ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು ಶೇಕಡಾ 0.50ರ ಏರಿಕೆ ಕಂಡಿದ್ದು 17,440.30 ಅಂಶಗಳನ್ನು ಹೊಂದಿತ್ತು ಹಾಗೂ ಬೆಂಚ್‌ಮಾರ್ಕ್‌ ಬಿಎಸ್‌ಇ ಸೂಚ್ಯಂಕವು ಶೇಕಡಾ 0.56ರ ಗಳಿಕೆಯೊಂದಿಗೆ 58,582.41 ಅಂಶಗಳನ್ನು ಹೊಂದಿತ್ತು.

ಮಾಸಿಕ ಮಾರಾಟದ ಅಂಕಿ-ಅಂಶಗಳು ಬಿಡುಗಡೆಯಾದ ನಂತರ ಆಟೋಮೋಬೈಲ್‌ ದಿಗ್ಗಜರಾದ ಟಾಟಾ ಮೋಟಾರ್ಸ್‌ ಕಂಪನಿಯ ನಿಫ್ಟಿ ಆಟೋ ಸೂಚ್ಯಂಕವು ಶೇಕಡಾ 2.9 ಅಂಶಗಳ ಹಾಗೂ ಮಾರುತಿ ಸುಜುಕಿ ಕಂಪನಿಯ ಆಟೋ ನಿಫ್ಟಿ ಸೂಚ್ಯಂಕ ಶೇಕಡಾ 1.1 ಅಂಶಗಳ ಏರಿಕೆ ಕಂಡು ಒಟ್ಟಾರೆ ಆಟೋ ನಿಫ್ಟಿ ಸೂಚ್ಯಂಕವು 1.28% ಅಂಶಗಳ ಏರಿಕೆ ಕಂಡಿತು.

ಭಾರತದ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 33,750 ಹೊಸ ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿದ್ದು ಇದು ಕಳೆದ ಸೆಪ್ಟೆಂಬರ್ 18ರ ನಂತರ ದಾಖಲಾದ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಇದರಿಂದ ವಾರದ ಕಡೆಯಲ್ಲಿ ಕಂಡುಬಂದ ಒಮಿಕ್ರಾನ್‌ ಪ್ರಕರಣಗಳೂ ಸೇರಿದಂತೆ  ದೇಶದಲ್ಲಿ ಕೊರೋನಾ ಸಂಕ್ರಮಣದ ಹೊಸ ಅಲೆಯೇ ಎದ್ದಿರುವಂತೆ ಕಾಣುತ್ತಿದೆ. ಇದು ಷೇರುಪೇಟೆಯ ವ್ಯವಹಾರದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಆದರೂ, ವರ್ಷದ ಆರಂಭದ ದಿನವೇ ಆಟೋಮೋಬೈಲ್‌ ವಲಯದಲ್ಲಿನ ಈ ಉತ್ತಮ ಪ್ರದರ್ಶನದೊಂದಿಗೆ ಭಾರತದ ಮಾರುಕಟ್ಟೆಗಳು ಶುಭಾರಂಭ ಮಾಡಿವೆ ಎಂದು ಧಾರಾಳವಾಗಿ ಹೇಳಬಹುದಾಗಿದೆ.

ಇದನ್ನೂ ಓದಿ: 5G JIO Airtel VI : ಭಾರತದಲ್ಲಿ 5G ಆರಂಭ : 2022 ರಿಂದ ಈ 13 ನಗರಗಳಲ್ಲಿ ಸೇವೆಗಳು ಲಭ್ಯ

ಇದನ್ನೂ ಓದಿ: Sonu Sood : ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೋನುಸೂದ್‌ ಸಹೋದರಿ ಮಾಳವಿಕಾ ಸೂದ್

Share Market : Despite surge in corona cases gains in Nifty auto indices recorded

Comments are closed.