ಮಾನವ ತನ್ನ ಪ್ರೀತಿಯನ್ನು ಅಪ್ಪುಗೆಯ ಮೂಲಕ ವ್ಯಕ್ತಪಡಿಸುತ್ತಾನೆ. ಆದರೆ ಪ್ರಾಣಿಗಳಿಗೂ ಅಪ್ಪುಗೆಯ ಮೂಲಕ ತಮ್ಮ ಪ್ರೀತಿಯನ್ನು ತೋರಿಸುತ್ತವೆ ಅನ್ನೋದಕ್ಕೆ ಈ ವಿಡಿಯೋ ಪ್ರತ್ಯಕ್ಷ ಸಾಕ್ಷಿ. ಸ್ಕೂಬಾ ಡೈವಿಂಗ್ ಮಾಡುವ ವೇಳೆಯಲ್ಲಿ ಕಡಲ ಚಿರತೆ ( Seal ) ಯೊಂದು ಸ್ಕೂಬಾ ಡೈವರ್‌ನನ್ನು ಅಪ್ಪಿ ಹಿಡಿದು ಮುದ್ದಾಡಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನ ಕಲಕುವಂತಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಬೆನ್ ಬರ್ವಿಲ್ಲೆ ಸ್ಕೂಬಾ ಡೈವಿಂಗ್ ಮಾಡುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಸುಮಾರು 20 ವರ್ಷಗಳಿಂದಲೂ ಸ್ಕೂಬಾ ಡೈವಿಂಗ್ ಮಾಡುತ್ತಿರುವ ಬರ್ವಿಲ್‌ಗೆ ಸಮುದ್ರಾಳದ ಪರಿಚಯ ಚೆನ್ನಾಗಿಯೇ ಇದೆ. ಅದ್ರಲ್ಲೂ ಸಮುದ್ರ ಆಳದಲ್ಲಿರುವ ಜೀವಿಗಳ ಜೊತೆಗೆ ಬಾಂಧವ್ಯವನ್ನು ಬೆಸೆದಿದ್ದಾರೆ. ಉತ್ತರ ಸಮುದ್ರ ಪ್ರದೇಶದಲ್ಲಿ ಡೈವಿಂಗ್ ಮಾಡುವ ವೇಳೆಯಲ್ಲಿ ಕಡಲ ಚಿರತೆಯೊಂದು ಭೇಟಿಯಾಗಿದೆ. ಈ ವೇಳೆಯಲ್ಲಿ ಬೆನ್ ಬರ್ವಿಲ್ಲೆ ಜೊತೆಗೆ ಕಡಲ ಚಿರತೆಯೂ ಈಜಿತ್ತು. ನಂತರದಲ್ಲಿ ಬೆನ್ ಬರ್ವಿಲ್ಲೆ ಹಿಂಬದಿಯಿಂದ ಕಡಲ ಚಿರತೆಯೆ ಬೆನ್ನನ್ನು ತಟ್ಟಿದ್ದಾರೆ.
ಇದನ್ನೂ ಓದಿ : ಮರ, ಗಿಡ, ಎಲೆ ಬಳಸಿ ಹಾಟ್ ಪೋಟೋ ಶೂಟ್….! ವೈರಲ್ ಆಯ್ತು ಫ್ರೀವೆಡ್ಡಿಂಗ್ ಪೋಟೋಸ್
ಈ ವೇಳೆಯಲ್ಲಿ ಕಡಲ ಚಿರತೆ ಬೆನ್ ಬರ್ವಿಲ್ಲೆ ಅವರನ್ನು ಅಪ್ಪಿಕೊಂಡು ಮುದ್ದಾಡಿದೆ. ತನ್ನ ಭಾವನೆಯನ್ನು ಬೆನ್ ಬರ್ವಿಲ್ಲೆ ಅವರ ಜೊತೆಗೆ ವ್ಯಕ್ತಪಡಿಸಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಮೊಟ್ಟೆ ತಿನ್ನೋಕೆ ಬಂದಿದ್ದ ಹಾವಿಗೆ ಬಿಗ್ ಶಾಕ್ : ಹಾವನ್ನೇ ಅಟ್ಟಾಡಿಸಿ ಓಡಿಸಿದ ಕೋಳಿ !
( Viral Video: Friendly Seal Hugs a Scuba Diver in North Sea, Adorable Video Melts Hearts )