ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್ ನ್ಯೂಸ್ : PVR ಸಿನೆಮಾಸ್ ನಲ್ಲಿ ICC ಟಿ20 ವಿಶ್ವಕಪ್

ಮುಂಬೈ: ಕ್ರಿಕೆಟ್‌ ಅಭಿಮಾನಿಗಳಿಗೆ PVR ಸಿಹಿ ಸುದ್ದಿಯನ್ನು ನೀಡಿದೆ. (ICC) ಐಸಿಸಿ ಪುರುಷರ ಟಿ20 ವಿಶ್ವಕಪ್ 2021ರ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಗಳ ನೇರ ಪ್ರದರ್ಶನದ ಹಕ್ಕುಗಳನ್ನು ಪಡೆದುಕೊಂಡಿದ್ದೇನೆ ಎಂದು ಮಲ್ಟಿಪ್ಲೆಕ್ಸ್ ಚೈನ್ (Multiplex Chain) ಪಿವಿಆರ್ ಸಿನೆಮಾಸ್ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದೆ.

ಮುಂಬರುವ ಟಿ20 ವಿಶ್ವಕಪ್ (T20 world cup) ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಯುಎಇ ಮತ್ತು ಒಮನ್ ನಲ್ಲಿ ನಡೆಯಲಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ 2021 ರ ಅಖಿಲ ಭಾರತ ಪಂದ್ಯಗಳ ನೇರ ಪ್ರದರ್ಶನಕ್ಕಾಗಿ (live screening) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನೊಂದಿಗೆ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳೊಂದಿಗೆ ಒಪ್ಪಂದವನ್ನು ಮುಕ್ತಾಯಗೊಳಿಸಿದ್ದೇವೆ ಎಂದು ಪಿವಿಆರ್ (PVR) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ :Rahul Coach : ಟೀಂ ಇಂಡಿಯಾ ಮುಖ್ಯ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ನೇಮಕ : ಬಿಸಿಸಿಐ ಅಧಿಕೃತ ಆದೇಶ

ನವದೆಹಲಿ, ಮುಂಬೈ, ಪುಣೆ ಮತ್ತು ಅಹಮದಾಬಾದ್ ಸೇರಿದಂತೆ 35 ಪ್ಲಸ್ ನಗರಗಳಲ್ಲಿ 75ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪಂದ್ಯಗಳನ್ನು ಪ್ರದರ್ಶಿಸಲಾಗುವುದು ಎಂದು ಮಲ್ಟಿಪ್ಲೆಕ್ಸ್ ಚೈನ್ ತಿಳಿಸಿದೆ. ಪಿವಿಆರ್ ಲಿಮಿಟೆಡ್ ನ (PVR Limited) ಸಿಇಒ ಗೌತಮ್ ದತ್ತಾ ಅವರು. ದೇಶದಲ್ಲಿ ಕ್ರಿಕೆಟ್ ಮತ್ತು ಚಲನಚಿತ್ರಗಳು ಪರಸ್ಪರ ಪೂರಕವಾಗಿವೆ ಎಂದು ನಂಬಿರುವುದರಿಂದ ಐಸಿಸಿ ಯೊಂದಿಗಿನ ಒಡನಾಟದ ಬಗ್ಗೆ ತಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಐಸಿಸಿ ಪುರುಷರ ಟಿ20 ವಿಶ್ವಕಪ್ ನ ಪ್ರಸಾರವನ್ನು ಹೆಚ್ಚಿಸಲು ದೊಡ್ಡ ಪರದೆ ಒಂದು ವಿಶಿಷ್ಟ ಅವಕಾಶವನ್ನು ನೀಡುತ್ತದೆ. ಕ್ರಿಕೆಟ್ ಮತ್ತು ಚಲನಚಿತ್ರಗಳು ಭಾರತದಂತೆ ಪರಸ್ಪರ ಪೂರಕವಾಗಿವೆ, ಅವುಗಳನ್ನು ದೇಶವನ್ನು ಒಗ್ಗೂಡಿಸುವ ಎರಡು ಧರ್ಮಗಳೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ : IPL 2022 : CSK ನಾಯಕತ್ವ ಕೈಬಿಟ್ಟು, ಕೋಚ್‌ ಆಗ್ತಾರೆ ಮಹೇಂದ್ರ ಸಿಂಗ್‌ ಧೋನಿ

ಚಲನಚಿತ್ರ ವೀಕ್ಷಣೆ ಮತ್ತು ಕ್ರಿಕೆಟ್ ವೀಕ್ಷಣೆಯು ಹಂಚಿಕೆಯ ಮನರಂಜನಾ ಅನುಭವವಾಗಿದೆ ಮತ್ತು ದೊಡ್ಡ ಪರದೆಯ (Big Screen) ಮೇಲೆ ದೊಡ್ಡದಾಗಿ ಕ್ರಿಕೆಟ್ ನೋಡಿದಾಗ ಅಭಿಮಾನಿಗಳಿಗೆ ನೇರವಾಗಿ ಕ್ರಿಕೆಟ್ ನೋಡಿದಷ್ಟೇ ಥ್ರಿಲ್ ಆಗುತ್ತದೆ. ‘ ಎಂದು ದತ್ತಾ ಹೇಳಿದರು. ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಆಡಲಿದೆ.

(Good news for cricket fans : ICC T20 World Cup at PVR Cinemas)

Comments are closed.