ಅಲ್ಜೀರಿಯಾ : ಉತ್ತರ ಆಫ್ರಿಕನ್ ರಾಷ್ಟ್ರದ ಆಲ್ಜೀರಿಯಾ ರಾಜಧಾನಿಯ ಪೂರ್ವದ ಪರ್ವತ ಕಾಡುಗಳು ಮತ್ತು ಹಳ್ಳಿಗಳನ್ನು ಕಾಡ್ಗಿಚ್ಚು ಉಂಟಾಗಿದ್ದು, 25 ಸೈನಿಕರು ಸೇರಿ 42 ಮಂದಿ ಬಲಿಯಾಗಿದ್ದಾರೆ.
ಮಂಗಳವಾರ ರಾತ್ರಿ ಸಮಯದಲ್ಲಿ ಕಾಡ್ಗಿಚ್ಚು ಉಂಟಾಗಿದ್ದು,ಉತ್ತರ ಅಫ್ರಿಕನ್ ರಾಷ್ಟ್ರದ ಬರ್ಬರ್ ಹಾಗೂ ಕಬೈಲ್‌ನ ಪ್ರದೇಶಗಳಲ್ಲಿ ಸೈನಿಕರು 100 ಜನರನ್ನು ಬೆಂಕಿಯಿಂದ ರಕ್ಷಿಸಿದ್ದಾರೆ ಎಂದು ಅಧ್ಯಕ್ಷ ಅಬ್ದೆಲ್ಮಾಡ್ಜಿದ್ ತೆಬ್ಬೌನ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ 11 ಮಂದಿ ಜನರ ರಕ್ಷಣಾ ಕಾರ್ಯ ನಡೆಸುತ್ತಿದ್ದಾಗ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.
ಕಾಡ್ಗಿಚ್ಚಿನಿಂದಾಗಿ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅಲ್ಲದೇ ರಕ್ಷಣಾ ಕಾರ್ಯ ಮುಂದುವರಿದಿದೆ. ಒಟ್ಟ 42 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಧಾನ ಮಂತ್ರಿ ಅಮೀನೆ ಬೆನಾಬೆರ್‌ರಹ್ಮನೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕುರಿತು ಸ್ಥಳೀಯರ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ : ಅಫ್ಘಾನಿಸ್ತಾನದ ಮೂರು ನಗರಗಳನ್ನು ವಶಕ್ಕೆ ಪಡೆದ ತಾಲಿಬಾನ್
ಅಲ್ಜೀರಿಯಾದ ರಾಜಧಾನಿ ಅಲ್ಜಿಯರ್ಸ್‌ನ ಪೂರ್ವಕ್ಕೆ 100 ಕಿಲೋಮೀಟರ್ (60 ಮೈಲಿ) ಕಬೈಲ್ ಪ್ರದೇಶದಲ್ಲಿ ತಾಪಮಾನ ಏರಿಕೆಯಿಂದಾಗಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಜನರು ಮನೆಯಲ್ಲಿದ್ದ ಪರಿಕರಗಳನ್ನೇ ಬಳಸಿಕೊಂಡು ಬೆಂಕಿ ನಂದಿಸುವ ಕಾರ್ಯವನ್ನು ಮಾಡುತ್ತಿದ್ರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ : ಇಳಿ ವಯಸ್ಸಲ್ಲಿ ಬರ್ನಾರ್ಡ್ ಅರ್ನಾಲ್ಟ್ ಮುಡಿಗೇರಿತು ವಿಶ್ವದ ಶ್ರೀಮಂತ ವ್ಯಕ್ತಿ ಪಟ್ಟ