Sri Lankan President Rajapaksa : ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನಿರ್ಣಯ ಘೋಷಿಸಿದ ರಾಜಪಕ್ಸೆ

ಶ್ರೀಲಂಕಾ : Sri Lankan President Rajapaksa : ಶ್ರೀಲಂಕಾದಲ್ಲಿ ಆರ್ಥಿಕ ಸಂಕಷ್ಟ ತಲೆದೋರಿ ಹಲವು ತಿಂಗಳುಗಳೇ ಕಳೆದಿದೆ. ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ಶ್ರೀಲಂಕಾದಲ್ಲಿ ಪ್ರತಿಭಟನೆ ಕಾವೇರಿದೆ. ಅಧ್ಯಕ್ಷರ ನಿವಾಸಕ್ಕೆ ನುಗ್ಗಿರುವ ಪ್ರತಿಭಟನಾಕಾರರು ಅಲ್ಲಿರುವ ಹಣಗಳನ್ನು ದೋಚಿ, ಮನೆಯ ಪೀಠೋಪಕರಣಗಳನ್ನು ನಾಶ ಮಾಡಿದ್ದಾರೆ. ಇತ್ತ ಶ್ರೀಲಂಕಾ ಪ್ರಧಾನಿ ವಿಕ್ರಮಸಿಂಘೆ ಈಗಾಗಲೇ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಈ ನಡುವೆ ಈ ಹಿಂದೆ ಘೋಷಣೆ ಮಾಡಿರುವಂತೆ ಜುಲೈ 13ರಂದು ರಾಜೀನಾಮೆ ನೀಡುವುದಾಗಿ ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅಧಿಕೃತವಾಗಿ ರನಿಲ್​ ವಿಕ್ರಮಸಿಂಘೆಗೆ ಮಾಹಿತಿ ನೀಡಿದ್ದಾರೆ ಎಂದು ಶ್ರೀಲಂಕಾ ಪ್ರಧಾನಿ ಕಚೇರಿಯಿಂದ ಮಾಹಿತಿ ಹೊರ ಬಿದ್ದಿದೆ.


ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ನಿವಾಸಕ್ಕೆ ಶನಿವಾರ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ದಾಂಧಲೆ ನಡೆಸಿದ್ದರು. ಈ ಸಮಯದಲ್ಲಿ ರಾಜಪಕ್ಸೆ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾರೆ. ದೇಶದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲರಾದ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎನ್ನುವುದು ಶ್ರೀಲಂಕಾ ಜನತೆಯ ಆಗ್ರಹವಾಗಿದೆ.


ಪ್ರಧಾನಿ ರನಿಲ್​ ವಿಕ್ರಮಸಿಂಘೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆ. ಈ ಮೂಲಕ ಸರ್ವಪಕ್ಷ ಸರ್ಕಾರ ಶ್ರೀಲಂಕಾದಲ್ಲಿ ಆಡಳಿತಕ್ಕೆ ಬರಲು ತಮ್ಮಿಂದ ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಕಚೇರಿಯು ನೀಡಿರುವ ಮಾಹಿತಿಯ ಪ್ರಕಾರ ಪ್ರತಿಭಟನಾಕಾರು ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.


ಈ ಹಿಂದೆ ಘೋಷಿಸಿದಂತೆ ರಾಜೀನಾಮೆ ನೀಡುವುದಾಗಿ ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅಧಿಕೃತವಾಗಿ ಪ್ರಧಾನಿ ರನಿಲ್​ ವಿಕ್ರಮಸಿಂಘೆಗೆ ಮಾಹಿತಿ ನೀಡಿದ್ದಾರೆ ಎಂದು ಶ್ರೀಲಂಕಾ ಪ್ರಧಾನಿ ಕಚೇರಿ ಪ್ರಕಟಣೆಯನ್ನು ಹೊರಡಿಸಿದೆ.
ಶನಿವಾರ ಅಧ್ಯಕ್ಷ ರಾಜಪಕ್ಸೆ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನರಿಗೆ ಅಜ್ಞಾತ ಸ್ಥಳದಿಂದ ಬುಧವಾರ ರಾಜೀನಾಮೆ ನೀಡುವುದಾಗಿ ತಿಳಿಸಿದರು.

ಇದನ್ನು ಓದಿ : Rohit Best T20 Captain: ಟಿ20 ನಾಯಕತ್ವ: ಬೆಸ್ಟ್ ವಿನ್ %ನಲ್ಲಿ ಹಿಟ್ ಮ್ಯಾನ್ ರೋಹಿತ್ ಈಗ ಜಗತ್ತಿಗೇ ನಂ.1 ಕ್ಯಾಪ್ಟನ್

ಇದನ್ನೂ ಓದಿ : Pant meets Dhoni: ಕ್ರಿಕೆಟ್ ಜನಕರ ನಾಡಿನಲ್ಲಿ ಮಹಾಗುರು, ಸೂಪರ್ ಹೀರೋನನ್ನು ಭೇಟಿ ಮಾಡಿದ ಶಿಷ್ಯರು

Will resign on July 13 as previously announced, Sri Lankan President Rajapaksa informs PM

Comments are closed.