Scan Documents : ಆಂಡ್ರಾಯ್ಡ್‌ ಫೋನ್‌ನಲ್ಲಿ ಡಾಕ್ಯುಮೆಂಟ್‌ ಗಳನ್ನು ಸ್ಕ್ಯಾನ್‌ ಮಾಡುವುದು ಹೇಗೆ ಗೊತ್ತಾ?

iOS ನಲ್ಲಿ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್‌(Scan Documents) ಮಾಡವುದು ಬಹಳ ಸುಲಭ. iOS ನಲ್ಲಿ ನೇಟಿವ್‌ ಸ್ಕ್ಯಾನರ್‌ ಆಪ್‌ ಇಲ್ಲದಿದ್ದರೂ, ನೋಟ್ಸ್‌ ಆಪ್‌ನ ಮೂಲಕ ಬಳಕೆದಾರರು ಯಾವುದೇ ಡಾಕ್ಯುಮೆಂಟ್‌ಗಳನ್ನು ಸುಲಭವಾಗಿ ಸ್ಕ್ಯಾನ್‌ ಮಾಡಬಹುದಾಗಿದೆ. ಅಷ್ಟೇ ಅಲ್ಲ ಸಹಿ ( Signature) ಅನ್ನು ಸಹ ಸ್ಕ್ಯಾನ್‌ ಮಾಡಬಹುದಾಗಿದೆ. ಆದರೆ ಆಂಡ್ರಾಯ್ಡ್‌ನಲ್ಲಿ ಅದು ಅಷ್ಟು ಸುಲಭವಲ್ಲ. ಆಂಡ್ರಾಯ್ಡ್‌ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ ಬಳಸಿ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್‌ (Scan Documents ) ಮಾಡಲು ಗೂಗಲ್‌ ಡ್ರೈವ್‌ ಆಪ್‌ ಅಥವಾ ಪ್ರತ್ಯೇಕ ಆಪ್‌ ಅನ್ನು ಅವಲಂಬಿಸಬೇಕಾಗಿದೆ.

ಅದಕ್ಕಾಗಿ ನಾವು ಆಂಡ್ರಾಯ್ಡ್‌ನಲ್ಲಿ ಡಾಕ್ಯುಮೆ.ಟ್‌ ಅನ್ನು ಸ್ಕ್ಯಾನ್‌ ಮಾಡುವ ಮೂರು ವಿಧಾನಗಳನ್ನು ಹೇಳಿದ್ದೇವೆ. ನೀವು ಮೈಕ್ರೋಸಾಫ್ಟ್‌ ಆಫೀಸ್‌ ಲೆನ್ಸ್‌, ಗೂಗಲ್‌ ಡ್ರೈವ್‌ ಅಥವಾ ಆಡೋಬ್‌ ಸ್ಕ್ಯಾನ್‌ ಅಪ್ಲಿಕೇಶನ್‌ ಅನ್ನು ಬಳಸಬಹುದು.

ಮೈಕ್ರೋಸಾಫ್ಟ್‌ ಆಫೀಸ್‌ ಲೆನ್ಸ್‌ ಬಳಸಿ ಆಂಡ್ರಾಯ್ಡ್‌ನಲ್ಲಿ ಡಾಕ್ಯುಮೆಂಟ್‌ ಅನ್ನು ಸ್ಕ್ಯಾನ್‌ ಮಾಡುವುದು :
ನೀವು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಉಪಯೋಗಿಸುತ್ತಿದ್ದರೆ ಮೈಕ್ರೋಸಾಫ್ಟ್‌ ಆಫೀಸ್‌ ಲೆನ್ಸ್‌ ಡಾಕ್ಯುಮೆಂಟ್‌ ಅನ್ನು ಸ್ಕ್ಯಾನ್‌ ಮಾಡಲು ಬಹಳ ಸುಲಭ ಮತ್ತು ಉತ್ತಮ ರೀತಿಯಾಗಿದೆ.

  • ಮೈಕ್ರೋಸಾಫ್ಟ್‌ ಆಫೀಸ್‌ ಲೆನ್ಸ್‌ ಅನ್ನು ಪ್ಲೇ ಸ್ಟೋರ್‌ ನಿಂದ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳಿ.
  • ಮೈಕ್ರೋಸಾಫ್ಟ್‌ ಅಕೌಂಟ್‌ನಲ್ಲಿ ಲಾಗ್‌ಇನ್‌ ಆಗಿ. ಒಂದು ವೇಳೆ ಅಕೌಂಟ್‌ ಇಲ್ಲದಿದ್ದರೆ ಸೈನ್‌ ಅಪ್‌ ಮಾಡಿ ಅಕೌಂಟ್‌ ರಚಿಸಿಕೊಳ್ಳಿ. ‌
  • ಅಗತ್ಯ ಅನುಮತಿಗಳನ್ನು(Permission) ನೀಡಿ.
  • ನೀವು ಸ್ಕ್ಯಾನ್‌ ಮಾಡಬೇಕಾದ ಡಾಕ್ಯುಮೆಂಟ್‌ ಅನ್ನು ಸ್ಕ್ಯಾನ್‌ ಮಾಡಿ.
  • ಸ್ಕ್ಯಾನ್‌ ಮಾಡಿದ ಇಮೇಜ್‌ ಅನ್ನು ಹೊಂದಿಸಿಕೊಳ್ಳಿ.
  • ನಂತರ ಸೇವ್‌ ಮಾಡಿ.

ಗೂಗಲ್‌ ಡ್ರೈವ್‌ ಬಳಸಿ ಡಾಕ್ಯುಮೆಂಟ್‌ ಸ್ಕ್ಯಾನ್‌ ಮಾಡುವುದು :
ಆಂಡ್ರಾಯ್ಡ್‌ ಬಳಕೆದಾರರಿಗೆ ಡಾಕ್ಯುಮೆಂಟ್‌ ಅನ್ನು ಸ್ಕ್ಯಾನ್‌ ಮಾಡಲು ಸಿಗುವ ಮತ್ತೊಂದು ಆಯ್ಕೆ ಎಂದರೆ ಗೂಗಲ್‌ ಡ್ರೈವ್‌ (Google Drive).
ಅದರಲ್ಲಿ ಹೀಗೆ ಸ್ಕ್ಯಾನ್‌ ಮಾಡಿ:

  • ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ನಲ್ಲಿ ಗೂಗಲ್‌ ಡ್ರೈವ್‌ ಆಪ್‌ ತೆರೆಯಿರಿ.
  • ಆಪ್‌ ನ ಬಲ ಮೂಲೆಯಲ್ಲಿರುವ ಆಡ್‌(+ ಚಿಹ್ನೆಯನ್ನು) ಟ್ಯಾಪ್‌ ಮಾಡಿ.
  • ಈಗ ಸ್ಕ್ಯಾನ್‌(Scan) ಬಟನ್‌ ಅನ್ನು ಟ್ಯಾಪ್‌ ಮಾಡಿ.
  • ನೀವು ಸ್ಕ್ಯಾನ್‌ ಮಾಡಬೇಕಾಗಿರುವ ಡ್ಯಾಕ್ಯುಮೆಂಟ್‌ ನ ಫೊಟೋ ತೆಗೆದುಕೊಳ್ಳಿ.
  • ಸ್ಕ್ಯಾನ ಮಾಡಿದ ಇಮೇಜ್‌ ಅನ್ನು ಹೊಂದಿಸಿಕೊಳ್ಳಿ.
  • ಡನ್‌ ಅನ್ನು ಟ್ಯಾಪ್‌ ಮಾಡಿ.

ಆಡಾಬ್‌ ಸ್ಕ್ಯಾನ್‌ ಬಳಸಿ ಆಂಡ್ರಾಯ್ಡ್‌ನಲ್ಲಿ ಡಾಕ್ಯುಮೆಂಟ್‌ ಅನ್ನು ಸ್ಕ್ಯಾನ್‌ ಮಾಡುವುದು :
ಮೂರನೆಯ ರೀತಿ ಎಂದರೆ ಆಡಾಬ್‌ ನ ಆಪ್‌ ಬಳಸಿ ಸ್ಕ್ಯಾನ್‌ ಮಾಡುವುದು. ಅದಕ್ಕಾಗಿ ಹೀಗೆ ಮಾಡಿ.

  • ಗೂಗಲ್‌ ಪ್ಲೇ ಸ್ಟೋರ್‌ ಬಳಸಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಡಾಬ್‌ ಸ್ಕ್ಯಾನ್‌ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.
  • ಲಾಗ್‌ಇನ್‌ ಆಗಿ.
  • ನೀವು ಸ್ಕ್ಯಾನ್‌ ಮಾಡಬೇಕಾಗಿರುವ ಡಾಕ್ಯುಮೆಂಟ್‌ ಟೈಪ್‌ ಆಯ್ದುಕೊಳ್ಳಿ.
  • ಆಟೋ ಕ್ಯಾಪ್ಚರ್‌ ಅಥವಾ ಮ್ಯಾನುಯಲ್‌ ಕ್ಯಾಪ್ಚರ್‌ ಇವೆರಡರಲ್ಲಿ ಯಾವುದಾದರೂ ಒಂದನ್ನು ಉಪಯೋಗಿಸಿ ಸ್ಕ್ಯಾನ್‌ ಮಾಡಿ.
  • ನೀವು ಸ್ಕ್ಯಾನ್‌ ಮಾಡಿದ ಡಾಕ್ಯುಮೆಂಟ್‌ ಅನ್ನು ಹೊಂದಿಸಿಕೊಳ್ಳಿ, ಮತ್ತು ಸೇವ್‌ ಮಾಡಿ.

ಇದನ್ನೂ ಓದಿ : IT Returns Filing: ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಇದೇ ಜುಲೈ 31 ಕೊನೆಯ ದಿನ!!

ಇದನ್ನೂ ಓದಿ : Protect PDF : ನಿಮ್ಮ ಮೊಬೈಲ್‌ ನಲ್ಲಿ PDF ಡಾಕ್ಯುಮೆಂಟ್‌ ಗಳನ್ನು ಪ್ರೊಟೆಕ್ಟ್‌ ಮಾಡುವುದು ಹೇಗೆ ಗೊತ್ತಾ?

(scan documents on android using 3 ways here is a step-by-step guide)

Comments are closed.