Iranian security forces: ಇರಾನ್​​ನಲ್ಲಿ ಮುಂದುವರಿದ ಹಿಜಾಬ್ ವಿರುದ್ಧದ ಹೋರಾಟ: 20 ವರ್ಷದ ಯುವತಿಯನ್ನು ಕ್ರೂರವಾಗಿ ಕೊಂದ ಪೊಲೀಸರು

ಇರಾನ್​ : Iranian security forces : ಇರಾನ್​​ನಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಉಗ್ರ ಪ್ರತಿಭಟನೆಗಳು ನಡೆಯುತ್ತಿದ್ದು ಇರಾನ್​ನ ಭದ್ರತಾ ಪಡೆಗಳು 20 ವರ್ಷದ ಯುವತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೃತಪಟ್ಟ ಹಾಡಿಸ್​ ನಜಾಫಿ- ಗಾಯನ ಹಾಗೂ ನೃತ್ಯವನ್ನು ತುಂಬಾನೇ ಇಷ್ಟಪಡುತ್ತಿದ್ದ ಯುವತಿ ಎಂದು ಆಕೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಹಾಡಿಸ್​ ನಜಾಫಿ ದೇಶದಲ್ಲಿ ಜಾರಿಯಾಗಿರುವ ಕಟ್ಟು ನಿಟ್ಟಿನ ಹಿಜಾಬ್​ ಕಾನೂನಿನ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ಬೀದಿಗಿಳಿದಿದ್ದಳು.

ಕರಾಜಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ತಯಾರಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಬುಲೆಟ್​ನಿಂದ ಹೊರಬಂದ ಆರು ಗುಂಡುಗಳು ಹಾಡಿಸ್​​ ನಜಾಫಿ ದೇಹವನ್ನು ಸೀಳಿದ್ದು ತೀವ್ರ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿದ್ದಾಳೆ . ಟಿಕ್​ಟಾಕ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಫೇಮಸ್​ ಆಗಿರುವ ಹಾಡಿಸ್​ ನಜಾಫಿಯ ಎದೆ, ಮುಖ, ಕೈ ಹಾಗೂ ಕುತ್ತಿಗೆ ಭಾಗಕ್ಕೆ ಭದ್ರತಾ ಅಧಿಕಾರಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

ಹಡಿಸ್​ ಯಾವುದೇ ಹಿಜಾಬ್​ ಧರಿಸದೇ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇರಾನ್​​ನ ಪೊಲೀಸರು ಹಾಗೂ ಭದ್ರತಾ ಪಡೆಗಳು ಹಿಜಾಬ್​​ ಸಂಬಂಧಿ ಕಾನೂನಿನ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರ ಮೇಲೆ ಕ್ರೂರ ದಬ್ಬಾಳಿಕೆ ನಡೆಸುತ್ತಿದೆ. ಗಂಭೀರವಾಗಿ ಗಾಯಗೊಂಡಿದ್ದ ಘೇಮ್​ರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಲಾಗಿದೆ.

ಇದನ್ನು ಓದಿ : Team India arrives in Thiruvananthapuram: ಸಂಜು ಸ್ಯಾಮ್ಸನ್ ನಾಡಿಗೆ ಬಂದಿಳಿದ ಟೀಮ್ ಇಂಡಿಯಾಗೆ ಭರ್ಜರಿ ವೆಲ್ ಕಮ್

ಇದನ್ನೂ ಓದಿ : Kamal Nath:‘ಕಾಂಗ್ರೆಸ್​ ಅಧ್ಯಕ್ಷನಾಗಲು ನನಗೆ ಯಾವುದೇ ಆಸಕ್ತಿಯಿಲ್ಲ’ : ಮಾಜಿ ಸಿಎಂ ಕಮಲನಾಥ್​​ ಸ್ಪಷ್ಟನೆ

Woman, 20, dies after being shot six times by Iranian security forces during protest

Comments are closed.