Woman Gang-Raped : ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆ ಮೇಲೆ ರೈಲ್ವೆ ಸಿಬ್ಬಂದಿ ಸಾಮೂಹಿಕ ಅತ್ಯಾಚಾರ

Woman Gang-Raped : ಮುಲ್ತಾನ್​​ನಿಂದ ಕರಾಚಿಗೆ ತೆರಳುತ್ತಿದ್ದ ರೈಲಿನೊಳಗೆ 25 ವರ್ಷದ ಪಾಕಿಸ್ತಾನಿ ಮಹಿಳೆಯನ್ನು ರೈಲ್ವೆ ಇಲಾಖೆಯ ಮೂವರು ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯು ಬೆಳಕಿಗೆ ಬಂದಿದೆ. ಮೇ 27ರಂದು ಬಹಾವುದ್ದೀನ್​​ ಜಕಾರಿಯಾ ಎಕ್ಸ್​​ಪ್ರೆಸ್​​​ನಲ್ಲಿ ಈ ದುರ್ಘಟನೆ ಸಂಭವಿಸಿದೆ.


ವಿಚ್ಛೇದಿತ ಮಹಿಳೆ, ತನ್ನ ಇಬ್ಬರು ಅಪ್ರಾಪ್ತ ಮಕ್ಕಳನ್ನು ಭೇಟಿಯಾಗಲು ಪಂಜಾಬ್‌ನ ಮುಜಾಫರ್‌ಗಢ ಜಿಲ್ಲೆಗೆ ಬಂದಿದ್ದಳು. ಆದರೆ, ಆಕೆಯ ಪತಿ ಮತ್ತು ಅತ್ತೆಯಂದಿರು ಭೇಟಿಯನ್ನು ನಿರಾಕರಿಸಿದರು.ಇದರಿಂದ ಬೇಸರಗೊಂಡಿದ್ದ ಮಹಿಳೆಯು ರೈಲಿನಲ್ಲಿ ತನ್ನ ತವರು ಕರಾಚಿಗೆ ಹೊರಟಿದ್ದಳು. ಆಕೆ ಒಂಟಿಯಾಗಿದ್ದನ್ನು ಗಮನಿಸಿದ ರೈಲ್ವೆ ಇಲಾಖೆಯ ಸಿಬ್ಬಂದಿ ಪರಿಸ್ಥಿತಿಯ ಲಾಭವನ್ನು ಪಡೆದು ಸಾಮೂಹಿಕ ಅತ್ಯಾಚಾರ ಎಸೆಗಿದ್ದಾರೆ ಎಂದು ರೈಲ್ವೆ ಇಲಾಖೆಯ ಐಜಿ ಮಾಹಿತಿ ನೀಡಿದ್ದಾರೆ.


ಮಹಿಳೆಯು ಟಿಕೆಟ್​ ಇಲ್ಲದೆಯೇ ರೈಲನ್ನು ಹತ್ತಿದ್ದರು. ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಟಿಸಿ ಎಸಿ ಕಂಪಾರ್ಟ್​ಮೆಂಟ್​ನಲ್ಲಿ ಆಕೆಗೆ ಆಸನವನ್ನು ನಿರಾಕರಿಸಿದ್ದಳು. ಇದಾದ ಬಳಿಕ ಟಿಸಿ ಆಕೆಯನ್ನು ಮತ್ತೊಂದು ಕಂಪಾರ್ಟ್​ಮೆಂಟ್​ಗೆ ಶಿಫ್ಟ್​ ಮಾಡಿದರು. ಈ ಸಮಯದಲ್ಲಿ ಅಲ್ಲಿದ್ದ ಕೆಲ ಸಿಬ್ಬಂದಿಯು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಇದರಿಂದ ಮಹಿಳೆಯು ತಪ್ಪಿಸಿಕೊಳ್ಳಲು ಮುಂದಾಗುತ್ತಿದ್ದಂತೆಯೇ ನೀವು ಇದರಿಂದ ತಪ್ಪಿಸಿಕೊಂಡರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.


ಮಹಿಳೆಯು ಟಿಕೆಟ್​ ಇಲ್ಲದೆಯೇ ರೈಲನ್ನು ಹತ್ತಿದಳು. ಟಿಸಿ ಜಾಹಿದ್​ ಆಕೆಯಿದ್ದ ಎಸಿ ಕಂಪಾರ್ಟ್​ಮೆಂಟ್​​ನಲ್ಲಿ ಬರ್ತ್​ ವ್ಯವಸ್ಥೆ ಸರಿ ಮಾಡುವುದಾಗಿ ಹೇಳಿದ್ದ. ಆಕೆಗೆ ಸಹಾಯ ಮಾಡುವ ನೆಪದಲ್ಲಿ ಜಾಹಿದ್​​ ಆಕೆಯನ್ನು ಎಸಿ ಕಂಪಾರ್ಟ್​ಮೆಂಟ್​​ಗೆ ಕರೆದೊಯ್ದು ಇತರ ಇಬ್ಬರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಎಫ್​ಐಆರ್​​ ಹೇಳಿದೆ.


ಸಂತ್ರಸ್ತೆಯು ಪೊಲೀಸರ ಬಳಿ ದೂರನ್ನು ನೀಡಿದ್ದಾಳೆ. ಪ್ರಕರಣ ದಾಖಲಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 377 ಎಸ್​ ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಓದಿ : Yash : ಛತ್ರಪತಿ ಶಿವಾಜಿ ಬಯೋಪಿಕ್ ನಲ್ಲಿ ಯಶ್: ಇಲ್ಲಿದೆ ವೈರಲ್ ಪೋಟೋದ ಅಸಲಿ ಸತ್ಯ

ಇದನ್ನೂ ಓದಿ : Singer KK dies : ಹಾಡುತ್ತಿರುವಾಗಲೇ ಸಾವನ್ನಪ್ಪಿದ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂನಾತ್

Woman Gang-Raped Inside Moving Train In Pakistan By Staff Members, Three Arrested

Comments are closed.