Yash : ಛತ್ರಪತಿ ಶಿವಾಜಿ ಬಯೋಪಿಕ್ ನಲ್ಲಿ ಯಶ್: ಇಲ್ಲಿದೆ ವೈರಲ್ ಪೋಟೋದ ಅಸಲಿ ಸತ್ಯ

ಸ್ಯಾಂಡಲ್ ವುಡ್ ಸ್ಟಾರ್ ಆಗಿದ್ದ ರಾಕಿಂಗ್ ಸ್ಟಾರ್ ಯಶ್ (Yash) ಕೆಜಿಎಫ್ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಎನ್ನಿಸಿದ್ದಾರೆ. ವರ್ಲ್ಡ್ ವೈಡ್ ಫ್ಯಾನ್ಸ್ ಗಳಿಸಿರೋ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಕೆಜಿಎಫ್- 3 ತೆರೆಗೆ ಬರೋದು ಬಹುತೇಕ ಖಚಿತವಾಗಿದ್ದರೂ ಜನರು ಯಶ್ ರನ್ನು ಬೇರೆ ಬೇರೆ ಅವತಾರದಲ್ಲಿ ನೋಡೋಕೆ ಕಾಯ್ತಿದ್ದಾರೆ. ಅದರಲ್ಲೂ ಒಂದು ಹೆಜ್ಜೆ ಮುಂದೇ ಹೋಗಿರೋ ಮಹಾರಾಷ್ಟ್ರದ ಯಶ್ ಫ್ಯಾನ್ಸ್, ಛತ್ರಪತಿ ಶಿವಾಜಿ (Chhatrapati Shivaji Maharaj) ಅವತಾರದಲ್ಲಿ ಕಾಣಿಸಿಕೊಳ್ಳುವಂತೆ ಯಶ್ ಗೆ ಮನವಿ ಮಾಡಿದ್ದಾರೆ.

ಹೌದು, ಒಂದು ಕಾಲದಲ್ಲಿ ದಿನಗೂಲಿ ಆಧಾರದಲ್ಲಿ ಸೀರಿಯಲ್ ನಲ್ಲಿ ನಟಿಸುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಬಾಲಿವುಡ್ ನಿಂದ ಆರಂಭಿಸಿ ಕಾಲಿವುಡ್ ತನಕ ಎಲ್ಲರೂ ಯಶ್ ನಾಮ ಜಪಿಸುತ್ತಿದ್ದಾರೆ. ಈ ಮಧ್ಯೆ ಯಶ್ ರನ್ನು ತಮ್ಮಿಷ್ಟದ ಪಾತ್ರದಲ್ಲಿ ನೋಡೋಕೆ‌ ಕಾಯ್ತಿರೋ ಮಹಾರಾಷ್ಟ್ರ ಮರಾಠಿ ಭಾಷೆಯ ಯಶ್ ಫ್ಯಾನ್ಸ್ ತಮ್ಮಿಷ್ಟದ ಪಾತ್ರವೊಂದರಲ್ಲಿ ನಟಿಸುವಂತೆ ಯಶ್ ಗೆ ಮನವಿ ಮಾಡಿ ಪತ್ರ ಬರೆದಿದ್ದಾರಂತೆ.

ಮರಾಠರ ಆರಾಧ್ಯ ದೈವವಾಗಿರೋ ಛತ್ರಪತಿ ಶಿವಾಜಿ ಬಯೋಪಿಕ್ ನಲ್ಲಿ ನಟಿಸುವಂತೆ ಅಭಿಮಾನಿಗಳು ಯಶ್ ಗೆ ಮನವಿ ಮಾಡಿದ್ದಾರೆ. ಕೇವಲ ಮನವಿ ಮಾತ್ರವಲ್ಲ ತಮ್ಮದೇ ಕಲ್ಪನೆ ಯಲ್ಲಿ ಯಶ್ ರನ್ನು ಛತ್ರಪತಿ ಶಿವಾಜಿ ಪಾತ್ರದಲ್ಲಿ ಚಿತ್ರಿಸಿ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್ ರನ್ನು ಛತ್ರಪತಿ ಶಿವಾಜಿ ದಿರಿಸಿನಲ್ಲಿ ನೋಡಿದ ಅದೇಷ್ಟೋ ಅಭಿಮಾನಿಗಳು ಯಶ್ ತಮ್ಮ ಮುಂದಿನ ಸಿನಿಮಾದಲ್ಲಿ ಛತ್ರಪತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದುಕೊಳ್ಳುತ್ತಿದ್ದಾರೆ.

ಅಲ್ಲದೇ ಯಶ್ ಛತ್ರಪತಿ ಶಿವಾಜಿ ಬಯೋಪಿಕ್ ನಲ್ಲಿ ನಟಿಸಬೇಕು. ಈ ಸಿನಿಮಾಕ್ಕೆ ಚಿತ್ರಬ್ರಹ್ಮ ರಾಜಮೌಳಿ ನಿರ್ದೇಶನ ಮಾಡಬೇಕು ಎಂಬ ಆಸೆಯನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇದು ಮರಾಠಿ ಅಭಿಮಾನಿಗಳ ಆಸೆಯಾದರೇ, ಕನ್ನಡಿಗರಾಗಿರೋ ಯಶ್ ಮೊದಲು ಇಮ್ಮಡಿ ಪುಲಕೇಶಿ ಪಾತ್ರದಲ್ಲಿ ನಟಿಸಬೇಕೆಂದು ಕೆಲ ಕನ್ನಡಿಗರು ಬಯಸುತ್ತಿದ್ದಾರಂತೆ.

ಯಾರ ಆಸೆಯನ್ನು ಯಶ್ ಮೊದಲು ಈಡೇರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ಇದೆಲ್ಲದರ ಮಧ್ಯೆ ಯಶ್ ಛತ್ರಪತಿ ಶಿವಾಜಿ ಅವತಾರದಲ್ಲಿ ಇರೋ ಪೋಟೋ ನೋಡಿದ ಕೆಲ ಕನ್ನಡಿಗರು ಕೆರಳಿದ್ದು ಯಶ್ ಬೇರೆಲ್ಲ ಭಾಷೆಗೂ ಮುನ್ನ ಕನ್ನಡಿಗರು ಹೀಗಾಗಿ ಯಶ್ ಮೊದಲು ಸಂಗೊಳ್ಳಿ ರಾಯಣ್ಣ ಪಾತ್ರ ಮಾಡಬೇಕು ಎಂದು ಒತ್ತಾಯಿಸಿ ಕಮೆಂಟ್ ಮಾಡ್ತಿದ್ದಾರೆ.

ಇದನ್ನೂ ಓದಿ : Shraddha Das : ಬ್ಲ್ಯಾಕ್ ಸ್ಯಾರಿಯಲ್ಲಿ ಕೋಟಿಗೊಬ್ಬ-3 ಬ್ಯೂಟಿ : ಶೃದ್ಧಾ ದಾಸ್ ಪೋಟೋ ನೋಡಿ ಫ್ಯಾನ್ಸ್ ಫಿದಾ

ಇದನ್ನೂ ಓದಿ : 777 Charlie : ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ಚಾರ್ಲಿ-777 : 21 ಸಿಟಿಗಳಲ್ಲಿ ಪ್ರೀಮಿಯರ್‌ ಆಗ್ತಿದೆ ಸಿನಿಮಾ

Yash New Look as Chhatrapati Shivaji Maharaj truth of a viral photo

Comments are closed.