Women give birth to child: ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಮಗುವಿಗೆ ಜನ್ಮ ನೀಡಿದ ಮಹಿಳೆ

ದುಬೈ: (Women give birth to child) ಟೋಕಿಯೊ-ನರಿಟಾದಿಂದ ದುಬೈ ಇಂಟರ್‌ನ್ಯಾಶನಲ್‌ಗೆ ಎಮಿರೆಟ್ಸ್‌ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಟೋಕಿಯೊ-ನರಿಟಾದಿಂದ ದುಬೈ ಇಂಟರ್‌ನ್ಯಾಶನಲ್‌ಗೆ EK 319 ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಈ ವೇಳೆ ಮಹಿಳೆಯೋರ್ವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಮಾನದಲ್ಲಿದ್ದ ಸಿಬ್ಬಂದಿಗಳು ಪರಿಸ್ಥಿತಿಯನ್ನು ನಿಭಾಯಿಸಿದ್ದು, ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದು, ದುಬೈಗೆ ಆಗಮಿಸಿದ ನಂತರ ತಾಯಿ ಹಾಗೂ ಮಗುವನ್ನು ಸ್ಥಳೀಯ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಒಂದು ನಿರ್ದಿಷ್ಟ ಹಂತದ ನಂತರ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡದಿದ್ದರೂ ಕೂಡ, ವೈದ್ಯಕೀಯ ತೊಡಕುಗಳು ಮತ್ತು ಅನಿರೀಕ್ಷಿತ ಸಮಸ್ಯೆಗಳಿಂದಾಗಿ ಮಹಿಳೆಯರು ಪ್ರಯಾಣದ ವೇಳೆಯೇ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಎಮಿರೇಟ್ಸ್‌ನ ನೀತಿಯ ಪ್ರಕಾರ, ಪ್ರಯಾಣಿಕರು ಏಳನೇ ತಿಂಗಳ ಗರ್ಭಾವಸ್ಥೆಯವರೆಗೂ ವಿಮಾನ ಪ್ರಯಾಣ ನಡೆಸಬಹುದು ಎನ್ನಲಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ, ಡೆನ್ವರ್‌ನಿಂದ ಕೊಲೊರಾಡೊಗೆ ಫ್ರಾಂಟಿಯರ್ ಏರ್‌ಲೈನ್ಸ್ ವಿಮಾನದಲ್ಲಿ ಫ್ಲೈಟ್ ಅಟೆಂಡೆಂಟ್‌ನ ಸಹಾಯದಿಂದ ಮಹಿಳೆಯೊಬ್ಬರು ಶೌಚಾಲಯದಲ್ಲಿ ಆರೋಗ್ಯಕರ ಗಂಡು ಮಗುವಿಗೆ ಜನ್ಮ ನೀಡಿದರು. ಜನವರಿ 2022 ರಲ್ಲಿ, ಅಕ್ರಾ, ಘಾನಾ ಮತ್ತು ವಾಷಿಂಗ್ಟನ್ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ವಿಮಾನದಲ್ಲಿ ಮಹಿಳೆಯೊಬ್ಬರು ಆರು ಗಂಟೆಗಳ ಕಾಲ ಹೆರಿಗೆ ನೋವಿಗೆ ಒಳಗಾಗಿದ್ದು, ತುರ್ತು ನಿರ್ಗಮನದ ಮೂಲಕ ಒದಗಿಸಲಾದ ಜಾಗದಲ್ಲಿ ಆಕೆಗೆ ಸುರಕ್ಷಿತವಾಗಿ ಹೆರಿಗೆ ಮಾಡಲಾಯಿತು.

ಇದನ್ನೂ ಓದಿ : 5 Indians in final: ಅಮೇರಿಕಾದ ಪ್ರತಿಷ್ಠಿತ ವಿಜ್ಞಾನ ಮತ್ತು ಗಣಿತ ಸ್ಪರ್ಧೆಯಲ್ಲಿ ಫೈನಲ್‌ ಗೇರಿದ ಐವರು ಭಾರತೀಯರು

ಗಣರಾಜ್ಯೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಹೃದಯಾಘಾತ: ವ್ಯಕ್ತಿ ಸಾವು

ರಾಯಚೂರು: ದೇಶದಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತವಾಗಿ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ನಡೆದಿದೆ. ಮಹಾಂತೇಶ್‌ (೪೨ ವರ್ಷ) ಮೃತ ವ್ಯಕ್ತಿ.

ಮೃತ ಮಹಾಂತೇಶ್ ಆರೋಗ್ಯ ಇಲಾಖೆ ಸಿಬ್ಬಂದಿಯಾಗಿದ್ದು, ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಸಿಂಧನೂರು ತಾಲೂಕು ಆಸ್ಪತ್ರೆ ಸಿಬ್ಬಂದಿಯಿಂದ ಕೋಲಾಟ ನೃತ್ಯ ಪ್ರದರ್ಶನ ಮಾಡಲಾಗುತ್ತಿತ್ತು. ಹೀಗೆ ಗಣರಾಜ್ಯೋತ್ಸವದ ಅಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಮಹಾಂತೇಶ್‌ ಕುಸಿದು ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ : Strange incident-man died: ವಿಚಿತ್ರ ಘಟನೆ: ಮಾಲೀಕನನ್ನೆ ಗುಂಡು ಹಾರಿಸಿ ಕೊಂದ ನಾಯಿ

ಇದನ್ನೂ ಓದಿ : Honour killing : ನ್ಯಾಯಲಯದಲ್ಲಿ ಮಗಳನ್ನೇ ಗುಂಡಿಕ್ಕಿ ಕೊಂದ ತಂದೆ

A woman gave birth to a child while traveling in Emirates flight

Comments are closed.