Husband surrendered to the police: ‘ನಾನು ನನ್ನ ಹೆಂಡತಿಯನ್ನು ಕೊಂದಿದ್ದೇನೆ’: ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

ಗೋರಖ್‌ಪುರ: (Husband surrendered to the police) ಬೇರೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದು, ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ನೀಲಂ ಕೊಲೆಯಾದ ಮಹಿಳೆ.

ರಾಜ್‌ಘಾಟ್ ಪ್ರದೇಶದ ಖುರ್ರಾಂಪುರ ಪ್ರದೇಶದ ನಿವಾಸಿ ಶರದ್ಚಂದ್ರ ಪಾಲ್ ಎಂದು ಗುರುತಿಸಲಾದ ವ್ಯಕ್ತಿ, ತನ್ನ ಪತ್ನಿ ತಮ್ಮ ಮಗನ ವಯಸ್ಸಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಲ್ಲಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

‘ನಾನು ನನ್ನ ಹೆಂಡತಿಯನ್ನು ಕೊಂದಿದ್ದೇನೆ’
ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಶರಣಾಗಲು ರಾಜ್‌ಘಾಟ್ ಪೊಲೀಸ್ ಠಾಣೆಗೆ ವ್ಯಕ್ತಿ ಆಗಮಿಸಿದ್ದು, “ನಾನು ನನ್ನ ಹೆಂಡತಿಯನ್ನು ಕೊಂದಿದ್ದೇನೆ, ನನ್ನನ್ನು ಬಂಧಿಸಿ” ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಇದನ್ನು ಕೇಳಿದ ಪೊಲೀಸರಿಗೆ ಆಘಾತವಾಗಿದ್ದು, ತಕ್ಷಣ ಪೊಲೀಸರು ಆತನ ಮನೆಗೆ ತೆರಳಿ ತನಿಖೆ ನಡೆಸಿದಾಗ ಮನೆಯೊಳಗೆ ಪತ್ನಿ ಶವವಾಗಿ ಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ಇನ್ನೂ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿಯ ವಿಚಾರಣೆ ವೇಳೆ, ತನ್ನ ಪತ್ನಿ ನೀಲಂ ತನಗಿಂತ 25 ವರ್ಷ ಕಿರಿಯ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಹೇಳಿದ್ದು, ಈ ವಿಚಾರವಾಗಿ ಅವರಲ್ಲಿ ಸಾಕಷ್ಟು ಜಗಳ ನಡೆಯುತ್ತಿತ್ತು. ಪೊಲೀಸರಿಗೂ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ ಎಂದಿದ್ದಾನೆ.

ಇದನ್ನೂ ಓದಿ : selfie with the snake: ಯುವಕನ ಜೀವಕ್ಕೆ ಕಂಟಕವಾಯ್ತು ಹಾವಿನೊಂದಿಗೆ ತೆಗೆದ ಆ ಒಂದು ಸೆಲ್ಫಿ

ಇದನ್ನೂ ಓದಿ : Heart attack- nurse dead: ಗಣರಾಜ್ಯೋತ್ಸವದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಹೃದಯಾಘಾತ: ವ್ಯಕ್ತಿ ಸಾವು

ಮಹಿಳೆ ಕೊಲೆಯಾದ ದಿನ, ಮನೆಯಲ್ಲಿ ಮಕ್ಕಳು ಇರಲಿಲ್ಲ. ಈ ವೇಳೆ ಪತಿ-ಪತ್ನಿ ಇಬ್ಬರೂ ಇದೇ ವಿಚಾರವಾಗಿ ಮತ್ತೆ ಜಗಳ ಆರಂಭಿಸಿದ್ದಾರೆ. ಕೋಪದ ಭರದಲ್ಲಿ ಅವನು ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಸ್ವತಃ ಆರೋಪಿಯೇ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಠಾಣೆ ರಾಜ್‌ಘಾಟ್‌ನ ಠಾಣಾಧಿಕಾರಿ ರಾಜೇಂದ್ರ ಸಿಂಗ್ ಹೇಳಿದ್ದಾರೆ.

Husband surrendered to the police: ‘I killed my wife’: Husband who killed his wife and surrendered to the police

Comments are closed.