Saudi Arabia : ಸೌದಿ ಅನುಮೋದಿತ ಲಸಿಕೆ ಪಡೆಯದವರಿಗೆ 48 ಗಂಟೆಗಳ ಕ್ವಾರಂಟೈನ್‌

ರಿಯಾದ್ : ಅಧಿಕೃತವಾಗಿ ಅನುಮೋದನೆ ಪಡೆದ ಕೋವಿಡ್ ಲಸಿಕೆಯ ಸಂಪೂರ್ಣ ಡೋಸ್ ಪಡೆಯದೇ ದೇಶಕ್ಕೆ ಪ್ರವೇಶಿಸುವವರಿಗೆ ಹೋಮ್‌ ಕ್ವಾರಂಟೈನ್‌ ಆದೇಶವನ್ನು ಸೌದಿ ಅರೇಬಿಯಾ ಕಡ್ಡಾಯಗೊಳಿಸಿದೆ. 48 ಗಂಟೆಗಳ ಕಾಲ ಕ್ವಾರಂಟೈನ್ ಕಡ್ಡಾಯ ಎಂದು ಗೃಹ ಸಚಿವಾಲಯ ಹೇಳಿದೆ.

ಫೈಜರ್ ಬಯೋಎಂಟೆಕ್, ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಮತ್ತು ಮಾಡರ್ನಾ ಲಸಿಕೆಗಳು ಮತ್ತು ಜಾನ್ಸನ್ ಮತ್ತು ಜಾನ್ಸನ್ ಬಿಡುಗಡೆ ಮಾಡಿದ ಲಸಿಕೆಯ ಒಂದು ಡೋಸ್ ಅನ್ನು ಸ್ವೀಕರಿಸದೆ ಸೌದಿ ಅರೇಬಿಯಾಕ್ಕೆ ಪ್ರವೇಶಿಸುವವರಿಗೆ ಹೋಮ್ ಕ್ವಾರಂಟೈನ್ ಅನ್ವಯಿಸುತ್ತದೆ. ಸೂಚನೆಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.

ಸೌದಿ ಅರೇಬಿಯಾ ಅನುಮೋದನೆಯನ್ನು ನೀಡಿರುವ ಲಸಿಕೆಯನ್ನು ಪಡೆಯದೇ ಬರುವ ಪ್ರಯಾಣಿಕರು ಸೌದಿ ಅರೇಬಿಯಾಕ್ಕೆ ಬಂದ ನಂತರ 48 ಗಂಟೆಗಳ ಕಾಲ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಅನ್ನು ಅನುಸರಿಸಬೇಕೆಂದು ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಸಾಂಸ್ಥಿಕ ಕ್ವಾರಂಟೈನ್ ಅಗತ್ಯವಿರುವವರನ್ನು ಹೊರತುಪಡಿಸಿ ಈ ವರ್ಗದ ಎಲ್ಲರಿಗೂ ಈ ನಿಬಂಧನೆ ಅನ್ವಯಿಸಲಿದೆ ಎಂದಿದೆ.

ಹೋಮ್‌ ಕ್ವಾರಂಟೈನ್‌ನಲ್ಲಿ ಇರುವವರಿಗೆ 48 ಗಂಟೆಗಳ ಬಳಿಕ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ವೇಳೆಯಲ್ಲಿ ಕೊರೊನಾ ನೆಗೆಟಿವ್‌ ರಿಪೋರ್ಟ್‌ ಬಂದ್ರೆ ಅಂತಹ ಪ್ರಯಾಣಿಕರ ಹೋಮ್‌ ಕ್ವಾರಂಟೈನ್‌ ಅವಧಿಯನ್ನು ಕೊನೆಗೊಳಿಸಲಾಗುತ್ತದೆ. ಎಂಟು ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಟೆಸ್ಟ್‌ ಅಗತ್ಯವಿಲ್ಲ,ಆದರೆ ಮಕ್ಕಳಿಗೂ ಹೋಮ್‌ ಕ್ವಾರಂಟೈನ್‌ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ : ಯುಕೆ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ : ನೆಗೆಟಿವ್‌ ರಿಪೋರ್ಟ್‌ ಕಡ್ಡಾಯ, 10 ದಿನ ಕ್ವಾರಂಟೈನ್‌

ಇದನ್ನೂ ಓದಿ : ಶಾಹೀನ್‌ ಚಂಡ ಮಾರುತದ ಎಫೆಕ್ಟ್‌ : ಯುಎಇನಲ್ಲಿ ಹೈ ಅಲರ್ಟ್‌, ಒಮನ್‌ನಲ್ಲಿ ವಿಮಾನ ಹಾರಾಟ ಬಂದ್‌

( 48 Hours Quarantine for Arrivals Who have Not Taken Saudi Approved Vaccines )

Comments are closed.